ಕವಿಸಾಲು
01
ಕವಿಸಾಲು
Gm ಶುಭೋದಯ💐
*ಕವಿಸಾಲು*
1.
ಅಪರಿಚಿತನಾಗಿಯೇ
ಇದ್ದುಬಿಡಲು
ಇಷ್ಟಪಡುವೆ;
ಪರಿಚಿತ
ಜನ
ಕಣ್ಣೀರನ್ನಷ್ಟೇ ಕೊಡಬಲ್ಲರು!
2.
ದೇಹ
ಮುಟ್ಟಲು
ಈ ಜಗತ್ತಿದೆ ಕಾತುರದಲ್ಲಿ;
ನಾನು
ನಿನ್ನಾತ್ಮ
ಮುಟ್ಟುವ ಪ್ರಯತ್ನದಲ್ಲಿ
ತಲ್ಲೀನ…
3.
ಸೌಂದರ್ಯ
ಕಣ್ಣಿನವರೆಗಷ್ಟೇ
ದಾರಿ ಮಾಡಿ ಬರಬಹುದು;
ಕಣ್ಣೇ ಇಲ್ಲದೇ
ಢವಢವಿಸುವ
ಹೃದಯಕ್ಕೇನು
ತಲುಪಿಸುವೆ?
4.
ಯಾಕೆ
ಹಿಂದಿರುಗೆಲ್ಲ
ನೋಡಿ ದುಃಖಿಸುವೇ
ಹೃದಯವೇ…
ಅದು
ನಿನ್ನದಾಗಿರಲೇ
ಇಲ್ಲ!
5.
ನಾನೇನು
ಅದೃಷ್ಟವಂತನಲ್ಲ
ನಿನ್ನ
ಕನ್ನಡಿಯ ಹಾಗೆ;
ಭರಪೂರ
ನಿನ್ನ
ನೋಡುವ ಅವಕಾಶ
ನನಗೆಲ್ಲಿ ಸಿಕ್ಕಿದೆ?
6.
ಪ್ರಸಿದ್ಧಿ
ಯಾರಿಗೆ ಬೇಕಾಗಿದೆ?
ನನ್ನ
ಜನರೇ ನನಗೆ
ಗುರುತಿಸದಾದಾಗ!