ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಗುಳುಂ ಪ್ರಕರಣ;**ದೊಡ್ಡಪೇಟೆಯಲ್ಲಿ ಕೇಸು- ಆಟವಾಡುತ್ತಿದೆ ಕಾಸು?**ಎಸ್ ಪಿ ಕಚೇರಿ ಸಿಬ್ಬಂದಿ ಸತೀಶನ ಸಸ್ಪೆಂಡ್ ಯಾವಾಗ?*

*ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಶುಲ್ಕ ಗುಳುಂ ಪ್ರಕರಣ;*

*ದೊಡ್ಡಪೇಟೆಯಲ್ಲಿ ಕೇಸು- ಆಟವಾಡುತ್ತಿದೆ ಕಾಸು?*

*ಎಸ್ ಪಿ ಕಚೇರಿ ಸಿಬ್ಬಂದಿ ಸತೀಶನ ಸಸ್ಪೆಂಡ್ ಯಾವಾಗ?*

ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವ ಎಫ್ ಡಿ ಎ ವೃತ್ತಿಯಲ್ಲಿರುವ ಸತೀಶ್ ಡಿ.ವಿ. ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಚುನಾವಣಾ ಅಕ್ರಮ ಕುರಿತು ಎಫ್ ಐ ಆರ್ ಆಗಿ ಆರು ದಿನಗಳಾದರೂ ಆತನನ್ನು ಎಸ್ ಪಿ ಮಿಥುನ್ ಕುಮಾರ್ ಸಸ್ಪೆಂಡ್ ಮಾಡಿಲ್ಲ ಎಂಬ ಚರ್ಚೆಗಳು ಸರ್ಕಾರಿ ನೌಕರರ ವಲಯದಲ್ಲಿ ಆರಂಭವಾಗಿವೆ.

ಬಿ.ಎಸ್.ಶಾಶ್ವತ್ ಎಂಬುವವರು ಅ.31 ರಂದು ನೀಡಿದ ಲಿಖಿತ ದೂರಿನ ಮೇಲೆ ಪೊಲೀಸ್ ಇಲಾಖೆಯ ಡಿ.ವಿ.ಸತೀಶ್ ಮೇಲೆ ಎಫ್ ಐ ಆರ್ ದಾಖಲಾಗಿತ್ತು.

ದೂರುದಾರ ಶಾಶ್ವತ್ ಕೂಡ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಆಗಿದ್ದು, ಆರೋಪಿ ಸತೀಶ್ ಪೊಲೀಸ್ ಇಲಾಖೆಯಿಂದ ಸರ್ಕಾರಿ ನೌಕರರ ಸಂಘಕ್ಕೆ 2018 ನೇ ಸಾಲಿನಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ.ಈ ಹಿಂದಿನ ಸಾಲಿನಲ್ಲಿಯೂ ಸಹ ಈತನೇ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದ. 2019ರಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ಸದಸ್ಯತ್ವ ಶುಲ್ಕವು ಜನವರಿ ತಿಂಗಳ ಸಂಬಳದಲ್ಲಿ ಕಟಾವಣೆಯಾಗಿತ್ತು. ನಂತರದಲ್ಲಿ ಸಂಘದ ನಿರ್ದೇಶಕನಾಗಿ ಆಯ್ಕೆಯಾದ ಸತೀಶ್ ಹೆಚ್ ಆರ್ ಎಂ ಎಸ್ ನಲ್ಲಿ ಸದಸ್ಯತ್ವದ ಶುಲ್ಕ ಕಟಾವಣೆಯಾಗುತ್ತಿಲ್ಲವೆಂದು 2020ನೇ ಸಾಲಿನ ಸದಸ್ಯತ್ವ ಶುಲ್ಕವನ್ನು ನಗದು ರೂಪದಲ್ಲಿ ನಿರಂತರವಾಗಿ 2023ನೇ ಸಾಲಿನ ವರೆಗೂ ಎಸ್ ಪಿ ಕಚೇರಿಯಲ್ಲಿನ ಲಿಪಿಕ ಸಿಬ್ಬಂದಿಗಳಿಂದ ಪಡೆದಿದ್ದ.

ಅದರಲ್ಲಿ 2021 ರ ಶುಲ್ಕವನ್ನು ಸಂಘಕ್ಕೆ ಪಾವತಿಸದೇ ವಂಚಿಸಿದ್ದ ಸತೀಶ್, 2024 ರ ವರ್ಷದ ಸದಸ್ಯತ್ವ ಶುಲ್ಕವನ್ನು ಕಚೇರಿಯ ಲಿಪಿಕ ಸಿಬ್ಬಂದಿಗಳಿಂದ ಹಣವನ್ನು ಕೆಲವರಿಂದ ಫೋನ್ ಪೇ ಮೂಲಕ ಹಾಗೂ ಕೆಲವರಿಂದ ನಗದು ರೂಪದಲ್ಲಿ ಪಡೆದಿದ್ದ.

ಆದರೆ, 2024 ರ ಸದಸ್ಯತ್ವದ ಶುಲ್ಕವನ್ನು ಸಂಘಕ್ಕೆ ಪಾವತಿಸದೇ ಹಣ ನೀಡಿದವರಿಗೆ ಗೊತ್ತಾಗದ ರೀತಿಯಲ್ಲಿ ಚುನಾವಣಾ ಬೈಲಾ ಪ್ರಕಾರ ಅಭ್ಯರ್ಥಿಯಾಗಿ ಸ್ಪರ್ಧಿಸದಂತೆ ದುರುದ್ದೇಶಪೂರಿತವಾಗಿ ಆಟವಾಡಿದ್ದ ಸತೀಶ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಓರ್ವ ಸರ್ಕಾರಿ ನೌಕರನಾಗಿ, ಪೊಲೀಸ್ ಇಲಾಖೆ ಸಿಬ್ಬಂದಿಯಾಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದಲ್ಲಿ ಉಪಾಧ್ಯಕ್ಷನೂ ಆಗಿ ಹುದ್ದೆ ಪಡೆದು, ಸದಸ್ಯತ್ವ ಶುಲ್ಕವನ್ನು ಗುಳುಂ ಮಾಡಿದ್ದ.

ಫೋನ್ ಪೇ, ನಗದು ಕೊಟ್ಟ ದಾಖಲೆಗಳ ಸಮೇತ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆಯ ಹಂತದಲ್ಲಿದೆ.

ಆದರೂ ಈತ ಸಸ್ಪೆಂಡ್ ಆಗದೇ ಉಳಿದುಕೊಂಡಿರುವುದರ ಹಿಂದೆ ಅದ್ಯಾವ ರೋಚಕ ರಹಸ್ಯವಿದೆಯೋ? ಅದ್ಯಾವ ಪ್ರಭಾವವಿದೆಯೋ? ಎಸ್ ಪಿ ಮಿಥುನ್ ಕುಮಾರ್ ರವರು ಈಗಲಾದರೂ ಈತನನ್ನು ಸಸ್ಪೆಂಡ್ ಮಾಡಲಿ…