ಆರೋಗ್ಯ ಇಲಾಖೆ, ಗುತ್ತಿಗೆದಾರರ ಮತ್ತು ಹೆತ್ತವರ ನಿರ್ಲಕ್ಷತನಕ್ಕೆ ಬಲಿಯಾದ ಕಂದ..
ಆರೋಗ್ಯ ಇಲಾಖೆ, ಗುತ್ತಿಗೆದಾರರ ಮತ್ತು ಹೆತ್ತವರ ನಿರ್ಲಕ್ಷತನಕ್ಕೆ ಬಲಿಯಾದ ಕಂದ..
(ವರದಿ; ಡಾ.ಇಮಾಮ್ ಮಳಗಿ)
ಶಿಕಾರಿಪುರ ಪಟ್ಟಣದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದ ನೀರಿನ ತೊಟ್ಟಿಯಲ್ಲಿ ಬಾಲಕನೋರ್ವ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಮತ್ತಿಕೋಟೆ ಗ್ರಾಮದ ಇಮ್ರಾನ್ ಮತ್ತು ನಿಜ್ಬಾನ್ ಬಾನು ದಂಪತಿಗಳ ಪುತ್ರ ಐಯಾನ್ (03) ಮೃತ ಬಾಲಕನಾಗಿದ್ದಾನೆ. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ಆವರಣದ ನೀರಿನ ತೊಟ್ಟಿಯಲ್ಲಿ ಸಂಜೆ 4-00 ಗಂಟೆಗೆ ಬಿದ್ದು ಪೋಷಕರು ಹುಡುಕುವಾಗ ಸಂಜೆ 5-30ರ ಹೊತ್ತಿಗೆ ತೊಟ್ಟಿಯಲ್ಲಿ ರುವುದು ಪತ್ತೆಯಾಗಿದೆ. ಇಮ್ರಾನ್ ಅವರ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ವಿಚಾರಿಸಲು ಬಂದಿದ್ದರು. ಆಟವಾಡುತ್ತಾ ಹೊರಗೆ ಬಂದಿದ್ದ ಮಗು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದೆ ಎನ್ನಲಾಗಿದೆ.
ಮುಚ್ಚಳ ಮುಚ್ಚದೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ ಎಂದು ವೈದ್ಯಾಧಿಕಾರಿ ಡಾ. ಶಿವಾನಂದ್ ವಿರುದ್ಧ ಪೋಷಕರು ಮತ್ತು ವಿವಿಧ ಸಂಘಟನೆಯ ಸಂಘಟಕರು ಆಸ್ಪತ್ರೆ ಎದುರು
ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಸ್ಥಳಕ್ಕೆ ಶಿಕಾರಿಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಮುಂದಿನ ತನಿಖೆಯಿಂದ ತಿಳಿಯಬೇಕಿದೆ.
ಸಂಸದರ ಸಾಂತ್ವಾನ;
ಜಿಲ್ಲೆಯ ಸಂಸದ ಬಿ ವೈ ರಾಘವೇಂದ್ರರವರು ಶನಿವಾರ ಮತ್ತಿಕೋಟೆಗೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವಾನ ನೀಡಿದರು.