ಜಿಲ್ಲಾ ಸರ್ಕಾರಿ ನೌಕರರ ಸಂಘದ 66 ನೂತನ ನಿರ್ದೇಶಕರಿಗೆ ಸಚಿವ ಮಧು ಬಂಗಾರಪ್ಪರಿಂದ ಸನ್ಮಾನ

ಜಿಲ್ಲಾ ಸರ್ಕಾರಿ ನೌಕರರ ಸಂಘದ 66 ನೂತನ ನಿರ್ದೇಶಕರಿಗೆ ಸಚಿವ ಮಧು ಬಂಗಾರಪ್ಪರಿಂದ ಸನ್ಮಾನ

ಇತ್ತೀಚೆಗೆ ನಡೆದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಎಲ್ಲಾ ನೂತನ ನಿರ್ದೇಶಕರುಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ  ಮಧು ಬಂಗಾರಪ್ಪನವರು ಇಂದು ಸನ್ಮಾನಿಸಿದರು.

ಮುಂದಿನ ದಿನಗಳಲ್ಲಿ ನೌಕರರ ಕ್ಷೇಮಾಭಿವೃದ್ಧಿಗಾಗಿ ಎಲ್ಲಾ ನಿರ್ದೇಶಕರುಗಳು ಒಗ್ಗಟ್ಟಿನಿಂದ ತಮ್ಮ ಇಲಾಖಾವಾರು ಸಮಸ್ಯೆಗಳಿಗೆ ಸ್ಪಂದಿಸಿ ಮುಕ್ತ ಮನಸ್ಸಿನೊಂದಿಗೆ ನನ್ನೊಂದಿಗೆ ಚರ್ಚಿಸಿ ಎಂದು ಶುಭ ಹಾರೈಸಿದರು.

ಚುನಾಯಿತರಾದ ಎಲ್ಲಾ 66 ನಿರ್ದೇಶಕರುಗಳು ಭಾಗವಹಿಸಿ ಮುಂದಿನ ದಿನಗಳಲ್ಲಿ ತಮ್ಮ ನೇತೃತ್ವದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಒಗ್ಗಟ್ಟಿನಿಂದ ತಮ್ಮ ಸೂಚನೆಯಂತೆ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು.