ನಾಳೆ ಬೆಳಿಗ್ಗೆ ಕ್ರಾಂತಿದೀಪ ಮಂಜಣ್ಣರಿಗೆ ಅಭಿನಂದನಾ ಸಮಾರಂಭ**24 ಜನ ಲೇಖಕರು, ಆತ್ಮೀಯರು ಬರೆದ 72 ಪುಟಗಳ ಅಭಿನಂದನಾ ಪುಸ್ತಕ ಬಿಡುಗಡೆ*

*ನಾಳೆ ಬೆಳಿಗ್ಗೆ ಕ್ರಾಂತಿದೀಪ ಮಂಜಣ್ಣರಿಗೆ ಅಭಿನಂದನಾ ಸಮಾರಂಭ*

*24 ಜನ ಲೇಖಕರು, ಆತ್ಮೀಯರು ಬರೆದ 72 ಪುಟಗಳ ಅಭಿನಂದನಾ ಪುಸ್ತಕ ಬಿಡುಗಡೆ*

ಶಿವಮೊಗ್ಗ: ಕ್ರಾಂತಿದೀಪ ಪತ್ರಿಕೆಯ ಎನ್. ಮಂಜುನಾಥ್ ಅವರಿಗೆ ಇತ್ತೀಚೆಗೆ ೨೦೨೧ ರ ಕರ್ನಾಟಕ ರಾಜ್ಯ ಮೊಹರೆ ಹಣಮಂತರಾವ್ ಮಾಧ್ಯಮ ಪ್ರಶಸ್ತಿ ದೊರಕಿರುವ ಸಂದರ್ಭದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಡಿ. 7ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಕ್ರಾಂತಿದೀಪ ಮಂಜುನಾಥ್ ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ.ಎನ್.ಸುಂದರರಾಜ್, ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೆ ನಮ್ಮ ಶಿವಮೊಗ್ಗದ ಪತ್ರಕರ್ತರೊಬ್ಬರು ಆಯ್ಕೆಯಾಗಿ ಪ್ರಶಸ್ತಿ ಸ್ವೀಕರಿಸಿರುವುದು ಶಿವಮೊಗ್ಗ ಪತ್ರಿಕಾ ಬಳಗಕ್ಕೆ ಒಂದು ಶೋಭೆ ತಂದಿದೆ.
ಮಂಜುನಾಥ್ ನಾಲ್ಕು ದಶಕಗಳ ಕಾಲ ಒಂದು ಸ್ಥಳೀಯ ಪತ್ರಿಕೆಯನ್ನು ನಡೆಸಿ, ಇಂದು ಅದನ್ನು ಒಂದು ಪ್ರಾದೇಶಿಕ ಮಟ್ಟದಲ್ಲಿ ಬೆಳಸಿದ್ದಾರೆಂದರೆ ಅದರ ಹಿಂದೆ ಅಪಾರ ಶ್ರಮವಿದೆ ಎಂದರು.

ಹಲವಾರು ಪತ್ರಕರ್ತರನ್ನು ಪತ್ರಿಕಾ ರಂಗಕ್ಕೆ ನೀಡಿರುವುದೂ ಸಹ ಅವರ ಹೆಗ್ಗಳಿಕೆಯಾಗಿದೆ. ಹಲವಾರು ಸಾಮಾಜಿಕ ಸಂಘಟನೆಗಳಲ್ಲಿಯೂ ಇವರ ಪಾತ್ರ ಗಣನೀಯವಾಗಿದೆ. ಇವುಗಳನ್ನೆಲ್ಲಾ ಪರಿಗಣಿಸಿ ಅವರನ್ನು ಗೌರವಿಸಬೇಕೆಂದು ನಮ್ಮ ಅಭಿನಂದನಾ ಸಮಿತಿಯು ತೀರ್ಮಾನಿಸಿತು ಎಂದರು.

‌7 ರ ಶನಿವಾರ ಬೆಳಿಗ್ಗೆ 10.30ಕ್ಕೆ ಪತ್ರಿಕಾ ಭವನದಲ್ಲಿ ನಡೆಯುವ ಅಭಿನಂದನಾ ಸಮಾರಂಭದ ಉದ್ಘಾಟನೆಯನ್ನು ಪ್ರಜಾವಾಣಿ ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ನೆರವೇರಿಸಲಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಎಂ.ಶ್ರೀಕಾಂತ್ ಮತ್ತು ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇ ಗೌಡ ಆಗಮಿಸಲಿದ್ದಾರೆ ಎಂದರು.
ಹೊನ್ನಾಳಿ ಚಂದ್ರಶೇಖರ್ ಅಭಿನಂದನಾ ಭಾಷಣವನ್ನು ಮಾಡಲಿದ್ದಾರೆ. ಕರ್ನಾಟಕ ಸಂಘದ ಪೂರ್ವಾಧ್ಯಕ್ಷ ಎಂ.ಎನ್.ಸುಂದರರಾಜ್ ಅಧ್ಯಕ್ಷತೆ ವಹಿಸಲಿದ್ದು, ಕ್ರಾಂತಿದೀಪದ ಎನ್. ಮಂಜುನಾಥ್ ಅವರನ್ನು ಅಭಿನಂದಿಸಲಾಗುವುದು ಎಂದರು.

ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಅ.ನಾ.ವಿಜೇಂದ್ರರಾವ್, ಶ್ರೀಮತಿ ಶಾಂತಾಶೆಟ್ಟಿ, ಶ್ರೀಮತಿ ಶಾಂತಾ ಸುರೇಂದ್ರ, ದೇವಕುಮಾರ್, ವಾಗೀಶ್ ಉಪಸ್ಥಿತರಿದ್ದರು.