ಕುವೆಂಪು ವಿವಿಯಲ್ಲಿ ಗಮನ ಸೆಳೆಯುತ್ತಿರುವ ಸಹ್ಯಾದ್ರಿ ಉತ್ಸವ*
*ಕುವೆಂಪು ವಿವಿಯಲ್ಲಿ ಗಮನ ಸೆಳೆಯುತ್ತಿರುವ ಸಹ್ಯಾದ್ರಿ ಉತ್ಸವ*
ಕುವೆಂಪು ವಿಶ್ವವಿದ್ಯಾಲಯದ ಪಠ್ಯತರ ಚಟುವಟಿಕೆ ವಿಭಾಗವು ವಿವಿಯ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಯೋಜಿಸಿರುವ ಮೂರು ದಿನಗಳ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಸಹ್ಯಾದ್ರಿ ಉತ್ಸವಕ್ಕೆ ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಅವರು ವಿವಿ ಅವರಣದಲ್ಲಿನ ಕುವೆಂಪು ಪುತ್ತಲಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಂಸ್ಕೃತಿಕ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ವಿವಿ ಕುಲಸಚಿವ ಎ. ಎಲ್. ಮಂಜುನಾಥ್, ಎಸ್. ಎಂ. ಗೋಪಿನಾಥ್, ಕಾರ್ಯಕ್ರಮ ಸಂಚಾಲಕ ನೆಲ್ಲಿಕಟ್ಟೆ ಸಿದ್ದೇಶ್, ಸತ್ಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಗಾನ, ಬಯಲಾಟ,
ಮಲೆನಾಡಿನ ಪುರುಷ ಮತ್ತು ಮಹಿಳೆಯರ ಸಂಪ್ರದಾಯಿಕ ಉಡುಪು, ಕೊಡವ, ಲಂಬಾನಿ, ಬುಡಕಟ್ಟು ವೇಷಧಾರಿಗಳು, ಪೂಜಾ ಕುಣಿತ, ಸೋಮನಕುಣಿತ, ಡೊಳ್ಳು ಕುಣಿತ, ನಂದಿಕೋಲು, ವೀರಗಾಸೆ, ಕಂಸಾಲೆ, ವೀರನಾರಿಯರು, ದೇವತೆಗಳ ಅಷ್ಟವತಾರ, ಸಾಧಕರು, ಮತ್ತಿತರರು ವೇಷಭೂಷಣಗಳನ್ನು ಧರಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಆಯ್ದ ಕಾಲೇಜುಗಳ ಸುಮಾರು 2000ಕ್ಕೂ ಹೆಚ್ಚಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾಂಸ್ಕೃತಿಕ ಪಥಸಂಚಲನದಲ್ಲಿ ಭಾಗವಹಿಸಿದ್ದರು.