ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ರಸ್ತೆ ಸುರಕ್ಷತಾ ಅರಿವು ಮೂಡಿಸಿದ ಟ್ರಾಫಿಕ್ ಪಿಎಸ್ ಐ ತಿರುಮಲೇಶ್
ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ರಸ್ತೆ ಸುರಕ್ಷತಾ ಅರಿವು ಮೂಡಿಸಿದ ಟ್ರಾಫಿಕ್ ಪಿಎಸ್ ಐ ತಿರುಮಲೇಶ್
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಚರಿಸಲಾಗುತ್ತಿರುವ *ಅಪರಾಧ ತಡೆ ಮಾಸಾಚರಣೆ–2024* ರ ಅಂಗವಾಗಿ ಇಂದು ಬೆಳಗ್ಗೆ ತಿರುಮಲೇಶ್ ಪಿಎಸ್ಐ, ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣ ಹಾಗೂ KSRCT ಬಸ್ ನಿಲ್ದಾಣದ ಹತ್ತಿರ* ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಾರ್ವಜನಿಕರು, ವಿಧ್ಯಾರ್ಥಿಗಳು, ಬಸ್ ಚಾಲಕರು ಹಾಗೂ ಆಟೋ ಚಾಲಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು.
*1) 18 ವರ್ಷಕ್ಕಿಂತ ಕಡಿಮೆವಯಸ್ಸಿನವರು* ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದ್ದರಿಂದ ಕಡ್ಡಾಯವಾಗಿ ಚಾಲನಾ ಪರವಾನಿಗೆಯನ್ನು ಪಡೆದ ನಂತರವೇ ವಾಹನವನ್ನು ಚಾಲನೆ ಮಾಡುವುದು.
*2) ಮಧ್ಯ ಸೇವನೆ ಮಾಡಿ / ಯಾವುದೇ ಮಾದಕ ದ್ರವ್ಯಗಳ ಅಮಲಿನಲ್ಲಿ,* ವಾಹನ ಚಾಲನೆ ಮಾಡಬೇಡಿ,
3) ವಾಹನಗಳಲ್ಲಿ *ಮಾರ್ಪಡಿಸಿದ / ದೋಷಪೂರಿತ ಸೈಲೆನ್ಸರ್* ಗಳ ಬಳಕೆ ಮತ್ತು *ಕರ್ಕಷ ಶಬ್ದವನ್ನುಂಟು* ಮಾಡುವ ಹಾರ್ನ್ ಗಳ ಬಳಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
4) ಸುರಕ್ಷತೆಯ ದೃಷ್ಠಿಯಿಂದ ಕಡ್ಡಾಯವಾಗಿ ದ್ವಿ ಚಕ್ರ ವಾಹನದ ಚಾಲಕ ಮತ್ತು ಹಿಂಬದಿ ಸವಾರ ಇಬ್ಬರೂ *ಹೆಲ್ಮೆಟ್ ಅನ್ನು ಧರಿಸಿ* ಮತ್ತು ಕಾರು / ನಾಲ್ಕು ಚಕ್ರದ ವಾಹನ ಚಾಲಕ ಹಾಗೂ ಸವಾರರು *ಸೀಟ್ ಬೆಲ್ಟ್ ಅನ್ನು* ಧರಿಸಿ ವಾಹನ ಚಾಲನೆ ಮಾಡಿ,
5) ವಾಹನಗಳಿಗೆ *ವಿಮೆ ಮಾಡಿಸುವುದು ಕಡ್ಡಾಯವಿದ್ದು,* ವಿಮೆಯ ಚಾಲ್ತಿ ಅವಧಿ ಮುಕ್ತಾಯವಾಗಿದ್ದರೆ ತಕ್ಷಣವೇ *ವಿಮೆಯನ್ನು ಮರು ನವೀಕರಿಸಿ,* ಅಪಘಾತದಂತಹ ಸಂದರ್ಭದಲ್ಲಿ *ಭರಿಸಲಾಗದ ಆರ್ಥಿಕ ಹೊರೆಯಿಂದ ಸುರಕ್ಷಿತವಾಗಿರಿ* ಎಂದು ಮಾಹಿತಿ ತಿಳಿಸಿಕೊಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರು, ವಿಧ್ಯಾರ್ಥಿಗಳು, ಬಸ್ ಚಾಲಕರು ಹಾಗೂ ಆಟೋ ಚಾಲಕರು ಹಾಗೂ ಶಿವಮೊಗ್ಗ *ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂಧಿಗಳು* ಉಪಸ್ಥಿತರಿದ್ದರು.