ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಹ್ಯಾದ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆಜನಪದ ಕಲೆಗಳು ನಮ್ಮ ಮೂಲ ಸಂಸ್ಕೃತಿಯ ಬೇರುಗಳು: ಜನಪದ ಗಾಯಕ ಮಹದೇವಸ್ವಾಮಿ

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಹ್ಯಾದ್ರಿ ಉತ್ಸವಕ್ಕೆ ಸಂಭ್ರಮದ ಚಾಲನೆ

ಜನಪದ ಕಲೆಗಳು ನಮ್ಮ ಮೂಲ ಸಂಸ್ಕೃತಿಯ ಬೇರುಗಳು: ಜನಪದ ಗಾಯಕ ಮಹದೇವಸ್ವಾಮಿ

ಶಂಕರಘಟ್ಟ ಡಿಸೆಂಬರ್ 09:

ವಿವಿಧ ಪ್ರಕಾರದ ಜನಪದ ಕಲೆಗಳು ನಮ್ಮ ಬೇರಾಗಿದ್ದು ಅವನ್ನು ಕಲಿಯುವುದು ಜ್ಞಾನ, ಗೌರವ, ಹಣಗಳಿಕೆ ಎಲ್ಲಕ್ಕೂ ದಾರಿ ಎಂದು ಜನಪದ ಹಾಡುಗಾರ ಮಳವಳ್ಳಿ ಮಹದೇವಸ್ವಾಮಿ ಸಲಹೆಯಿತ್ತರು.

ಇಲ್ಲಿನ ಕುವೆಂಪು ವಿಶ್ವವಿದ್ಯಾಲಯ ಪಠ್ಯೇತರ ಚಟುವಟಿಕೆ ವಿಭಾಗದ ವತಿಯಿಂದ ವಿಶ್ವವಿದ್ಯಾಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ‘ಸಹ್ಯಾದ್ರಿ ಉತ್ಸವ- 2024’ಅನ್ನು ಡಿ.09-11ರ ವರೆಗೆ ಆಯೋಜಿಸಲಾಗಿದ್ದು, ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಸೋಮವಾರ ಸಂಜೆ 4.30ಗಂಟೆಗೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಭಾಷಣದಲ್ಲಿ ಅವರು ಮಾತನಾಡಿದರು. ಜನಪದ ಸಾಹಿತ್ಯ, ಹಾಡನ್ನು ಸಿನಿಮಾದವರು ಬಳಸಿದ್ದಾರೆ, ಆದರೆ ಸಿನಿಮಾದಿಂದ ಜನಪದ ಏನನ್ನೂ ಪಡೆದಿಲ್ಲ. ಜನಪದ ಸಶಕ್ತ ಮಾಧ್ಯಮ ಅದನ್ನು ಕಲಿಯಿರಿ ಎಂದರು.

ಮತ್ತೋರ್ವ ಅತಿಥಿ ನಟಿ ಅದಿತಿ ಶೆಟ್ಟಿ ಮಾತನಾಡಿ, ಕಾಲೇಜು ದಿನಗಳಲ್ಲಿ ಕಲಿಯುವ ಕಲೆ, ಗಳಿಸಿದ ಜ್ಞಾನ, ರೂಪಿಸಿಕೊಂಡ ಮೌಲ್ಯಗಳು ಇಂದಿಗೂ ಸಿನಿಮಾರಂಗದಲ್ಲಿ ನಮಗೆ ಸಹಾಯಕವಾಗಿವೆ. ಹೀಗಾಗಿ ಶಿಕ್ಷಣ ಮತ್ತು ಶಿಕ್ಷಣದ ಸಂದರ್ಭದ ಹಲವು ಬಗೆಯ ಕಲಿಕೆ ಮುಖ್ಯ ಎಂದು ತಿಳಿಸಿದರು.

ವಿವಿಯ ಕುಲಪತಿ ಪ್ರೊ ಶರತ್ ಅನಂತಮೂರ್ತಿ ಮಾತನಾಡಿ, ಕುವೆಂಪು ವಿವಿಯೊಂದು ಹೆಸರು ಮಾತ್ರವಲ್ಲ, ಕುವೆಂಪು ಪ್ರಜ್ಞೆ ನಮ್ಮೊಂದಿಗೆ ಇದೆ. ಅದು ಜ್ಞಾನ, ವೈಚಾರಿಕತೆ, ಕಳೆಯನು ಮೈಗೂಡಿಸಿಕೊಳ್ಳಲು ಸದಾ ಪ್ರೇರೇಪಿಸುತ್ತದೆ.

ಈ ಸಂದರ್ಭದಲ್ಲಿ ಕುಲಸಚಿವ ಎ ಎಲ್ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಂ ಎಸ್ ಗೋಪಿನಾಥ್, ಸಂಚಾಲಕ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಮಾತನಾಡಿದರು. ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು, ವಿವಿ ವ್ಯಾಪ್ತಿಯ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಸ್ಪರ್ಧಾಳುಗಳು ಹಾಜರಿದ್ದರು.

*ವಿಶೇಷತೆ*

ಮೆರಗು ನೀಡಿದ ಸಂಭ್ರಮದ ಜಾಥಾ
ಸಹ್ಯಾದ್ರಿ ಉತ್ಸವ 2024ರ ಆರಂಭಕ್ಕೂ ಮೊದಲು ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಾಂಸ್ಕೃತಿಕ ಜಾಥಾ ನಡೆಸಲಾಯಿತು. ಜಾಥಾದಲ್ಲಿ 25ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿಗಳ ತಂಡ ವಿವಿಧ ವಿಷಯವಸ್ತುವಿನ ಪ್ರಸ್ತುತಿಯೊಂದಿಗೆ ಪಾಲ್ಗೊಂಡಿತ್ತು. ಕಮಲಾ ನೆಹರೂ ಕಾಲೇಜಿನ ವಿದ್ಯಾರ್ಥಿಗಳ ತಂಡವು ಹುಲಿ ಕುಣ ತ, ಮೈಸೂರು ದಸರಾದ ವೈವಿಧ್ಯ ವಿಷಯ ಒಳಗೊಂಡ ಮೆರವಣ ಗೆ ಕುರಿತ ವಿಷಯೊಂದಿಗೆ ಗಮನಸೆಳೆದರೆ ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಡೊಳ್ಳು ಪ್ರದರ್ಶನ ನೀಡಿದರು. ಆಚಾರ್ಯ ತುಳಸಿ ರಾಷ್ಟಿçÃಯ ವಾಣ ಜ್ಯ ಮಹಾವಿದ್ಯಾಲಯ ಹಾಗೂ ತೀರ್ಥಹಳ್ಳಿಯ ತುಂಗಾ ಕಾಲೇಜಿನ ವಿದ್ಯಾರ್ಥಿಗಳು ಪೂಜಾ ಕುಣ ತ, ಶಿಕಾರಿಪುರ ಪದವಿ ವಿದ್ಯಾರ್ಥಿಗಳು ಲಂಬಾಣ ನೃತ್ಯದ ವೇಷಭೂಷಣದೊಂದಿಗೆ ಗಮನ ಸೆಳೆದರು.
ಸೊರಬ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕೂರ್ಗ್ ವಸ್ತç ಸಂಸ್ಕೃತಿ, ಕುವೆಂಪು ವಿವಿ ವಿದ್ಯಾರ್ಥಿಗಳು ಕಾಡುಜನರ ಸಂಸ್ಕೃತಿ, ಸಹ್ಯಾದ್ರಿ ವಾಣ ಜ್ಯ ಕಾಲೇಜು ಕಂಸಾಳೆ ನೃತ್ಯದ ವಿಷಯವನ್ನು ನೋಡುಗರ ಮುಂದಿಟ್ಟರು. ಜಾಥಾವು ವಿವಿ ಆವರಣದಲ್ಲಿ ಸಂಚರಿಸಿ ಆಡಳಿತ ಭವನದ ಬಳಿ ಮೌಲ್ಯಮಾಪನ ಪ್ರಕ್ರಿಯೆಗೂ ಒಳಪಟ್ಟಿತು.