ಕವಿಸಾಲು

Gm ಶುಭೋದಯ💐

*ಕವಿಸಾಲು*

1.
ಬದುಕಿನಿಂದ
ಏನನ್ನೂ ಬಯಸಲಿಲ್ಲ
ನಿನ್ನ ಹೊರತು…

ಬದುಕು
ಎಲ್ಲದನ್ನೂ ಕೊಟ್ಟಿದೆ
ನಿನ್ನ ಹೊರತು…

2.
ಸುಳ್ಳು ಜನರ ನಡುವೆ
ಸತ್ಯ ಹೇಳಿಬಿಟ್ಟೆ;
ಅದು ಉಪ್ಪಿನ ನಗರ
ಗಾಯ ತೆರೆದು ಕುಳಿತುಬಿಟ್ಟೆ!

– *ಶಿ.ಜು.ಪಾಶ*
8050112067
(21/12/24)