ಶಿವಮೊಗ್ಗದ ರಂಗ ಕಲಾವಿದೆ ಲಕ್ಷ್ಮೀಯವರಿಗೆ SIWAA ರಾಷ್ಟ್ರ ಪ್ರಶಸ್ತಿ…ದಕ್ಷಿಣ ಭಾರತದ ವಿಶೇಷ ಮಹಿಳಾ ಸಾಧಕಿ ಎಂಬ ಗೌರವ ಪಡೆದ ಲಕ್ಷ್ಮೀಶಿಕ್ಷಣ ಇಲಾಖೆಗೂ ಗರಿ ಮೂಡಿಸಿದ ಕಲಾವಿದೆ

ಶಿವಮೊಗ್ಗದ ರಂಗ ಕಲಾವಿದೆ ಲಕ್ಷ್ಮೀಯವರಿಗೆ SIWAA ರಾಷ್ಟ್ರ ಪ್ರಶಸ್ತಿ…

ದಕ್ಷಿಣ ಭಾರತದ ವಿಶೇಷ ಮಹಿಳಾ ಸಾಧಕಿ ಎಂಬ ಗೌರವ ಪಡೆದ ಲಕ್ಷ್ಮೀ

ಶಿಕ್ಷಣ ಇಲಾಖೆಗೂ ಗರಿ ಮೂಡಿಸಿದ ಕಲಾವಿದೆ

ಎಸ್ ಐ ಡಬ್ಲ್ಯೂ ಎ ಎ ರಾಷ್ಟ್ರ ಮಟ್ಟದ ಸಂಸ್ಥೆಯು ದಕ್ಷಿಣ ಭಾರತೀಯ ಮಹಿಳಾ ಸಾಧಕಿ ಎಂದು ಭದ್ರಾವತಿ ಮೂಲದ ಶಿವಮೊಗ್ಗದ ರಂಗ ಕಲಾವಿದೆಯೂ ಶಿಕ್ಷಕಿಯೂ ಆಗಿರುವ ಶ್ರೀಮತಿ ಲಕ್ಷ್ಮೀ ಭದ್ರಾವತಿಯವರಿಗೆ ಆಯ್ಕೆ ಮಾಡಿ ವಿಶೇಷ ಪ್ರಶಸ್ತಿ ನೀಡಿದೆ.

ದಕ್ಷಿಣ ಭಾರತದಲ್ಲೇ ವಿಶೇಷ ಏಕೈಕ ಕಲಾವಿದೆ ಎಂದು ಗುರುತಿಸಿ ಸಂಸ್ಥೆಯು ಈ ಪ್ರಶಸ್ತಿ ಘೋಷಿಸಿ, ಪ್ರದಾನ ಮಾಡಿದೆ.

ಅತ್ಯುತ್ತಮ ಪಾತ್ರಗಳಿಗೆಂದೇ ಜನ್ಮ ತಾಳಿದ ಕಲಾವಿದೆ ಎಂದು ಕರೆಸಿಕೊಳ್ಳುವ ಮಲೆನಾಡಿನ ಕಲಾವಿದೆ ಶ್ರೀಮತಿ ಲಕ್ಷ್ಮೀ, ರಂಗದ ಮೇಲೆ ದಕ್ಕಿದ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದವರು. ಸ್ವಯಂ ಶ್ರಮದ ವಿಶೇಷ ಕಲಾವಿದೆಯಾಗಿರುವ ಲಕ್ಷ್ಮೀ ಭದ್ರಾವತಿ, ರಾಜ್ಯಮಟ್ಟದ ಹಲವು ಪ್ರಶಸ್ತಿ, ಗೌರವಗಳನ್ನು ಉತ್ತಮ ಶಿಕ್ಷಕಿಯಾಗಿಯೂ ಪಡೆದುಕೊಂಡಿದ್ದಾರೆ.

ಶಾಲೆ ಮುಗಿದ ಬಳಿಕ ರಂಗ ಶಿಬಿರಗಳಲ್ಲಿ, ನೃತ್ಯ ಕಾರ್ಯಕ್ರಮಗಳಲ್ಲಿ, ನಾಟಕಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುವ ಲಕ್ಷ್ಮೀಯವರು, ವಿಶೇಷ ಉಪನ್ಯಾಸ ನೀಡುವ ಉತ್ತಮ ಶಿಕ್ಷಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಮಲೆನಾಡು ಕಲಾ ತಂಡದ ರೂವಾರಿ ಡಾ.ಗಣೇಶ್ ಕೆಂಚನಾಲ ಮತ್ತು ತಂಡದ ಸದಸ್ಯರು ಲಕ್ಷ್ಮಿಯವರಿಗೆ ಅಭಿನಂದಿಸಿದ್ದಾರೆ.