ಶಿವಮೊಗ್ಗ ಮಹಾನಗರ ಪಾಲಿಕೆ;**ಆಯುಕ್ತರು ಏನು ಕ್ರಮ ಕೈಗೊಳ್ಳುವರು?**ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!*
*ಶಿವಮೊಗ್ಗ ಮಹಾನಗರ ಪಾಲಿಕೆ;*
*ಆಯುಕ್ತರು ಏನು ಕ್ರಮ ಕೈಗೊಳ್ಳುವರು?*
*ರೆವಿನ್ಯೂ, ಆಶ್ರಯ, ಆರೋಗ್ಯ, ಇಂಜಿನಿಯರ್ ವಿಭಾಗಗಳಲ್ಲಿ ಕಂಪ್ಯೂಟರ್ ಆಪರೇಟರ್ ಗಳೇ ಡಾನ್ ಗಳು!*
ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ಒಟ್ಟು 69 ಜನ ಡಾಟಾ ಎಂಟ್ರಿ ಆಪರೇಟರ್ಸ್ ಇದ್ದು, ಇವರಲ್ಲಿ ಹಲವರು ಒಂದೇ ಕಡೇ ಝಾಂಡಾ ಹೂಡಿ ಬಿಟ್ಟಿದ್ದಾರೆ. ಬಹಳ ಮುಖ್ಯವಾಗಿ, ಟಪಾಲು ವಿಭಾಗ, ಕಂದಾಯ, ಆರೋಗ್ಯ, ಜನನ- ಮರಣ ವಿಭಾಗಗಳಲ್ಲಿ ಇವರದೇ ರಾಜ್ಯಾಭಾರ….ಇವರು ಆಡಿದ್ದೇ ಆಟ…
ನಲ್ಮ್ ವಿಭಾಗದಲ್ಲಿ ಆರೀಫ್, ಆರೋಗ್ಯ ಶಾಖೆಯಲ್ಲಿ ರೇಣುಕಾ, ಜನನ ಮರಣದಲ್ಲಿ ಅನಿತಾ, ಇಂಜಿನಿಯರ್ ವಿಭಾಗದಲ್ಲಿ ವಿನಯ್, ಸಂಜಯ್, ಟಪಾಲು ವಿಭಾಗದಲ್ಲಿ ಅಲಮೇಲು ಮತ್ತು ಮಾಲಿನಿ, ರೆವಿನ್ಯೂ ವಿಭಾಗದಲ್ಲಿ ಸಂಧ್ಯಾ, ಭವ್ಯಾ, ದೀಪಾ, ನೇತ್ರಾ, ಆಶ್ರಯದಲ್ಲಿ ಅರ್ಪಿತಾ, ಪೂಜಿತಾ ಪಾಟೀಲ್, ಗಣೇಶ ಘಾಟಿಗೆ, ಕಿರಣ, ಆಡಳಿತ ಶಾಖೆಯ ಇಎಸ್ ಟಿ ವಿಭಾಗದಲ್ಲಿ ಪುಷ್ಪಾ, ಚುನಾವಣಾ ಶಾಖೆಯಲ್ಲಿ ಅನಿಲ, ಕಾರ್ತಿಕ, ಮೋಹನರವರದ್ದೇ ಆಡಿದ್ದಾಟ ನಡೆಯುತ್ತಿದ್ದು, ಈ ಬಗ್ಗೆ ಆಯುಕ್ತರಾಗಲೀ, ಉಪ ಆಯುಕ್ತರಾಗಲೀ ತಕ್ಷಣಕ್ಕೆ ಗಮನ ಹರಿಸಿ ಗಂಭೀರವಾಗಿ ಕ್ರಮ ಕೈಗೊಳ್ಳದಿದ್ದರೆ ಆಗುವ ಅನಾಹುತಗಳು ಜೈಲಿನ ದಾರಿ ತೋರಿಸಬಹುದು.
ಯಾಕೆಂದರೆ, ಇಡೀ ಲೋಕಾಯುಕ್ತದ ಕಣ್ಣು ಶಿವಮೊಗ್ಗ ಮಹಾನಗರ ಪಾಲಿಕೆಯ ಈ ವಿಭಾಗಗಳ ಮೇಲಿದೆ.