ಆಯಿಸ್ಟರ್ ಅಣಬೆ: ಕಡಿಮೆ ಹೂಡಿಕೆ, ಅಧಿಕ ಆದಾಯ*

*ಆಯಿಸ್ಟರ್ ಅಣಬೆ: ಕಡಿಮೆ ಹೂಡಿಕೆ, ಅಧಿಕ ಆದಾಯ*

ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಅಣಬೆ ಬೇಸಾಯದ ಕುರಿತು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶಿಲ್ಪಾ, ಸಹಾಯಕ ಪ್ರಾಧ್ಯಪಕಿ ಸೂಕ್ಷ್ಮಾಣು ಜೀವಶಾಸ್ತ್ರ ರವರು ಆಗಮಿಸಿದ್ದರು. ಭಾರತದಲ್ಲಿ ಬೆಳೆಯುವ ವಿವಿಧ ರೀತಿಯ ಅಣಬೆಗಳು ಅಂದರೆ ಕಪ್ಪೆ ಚಿಪ್ಪಿನ ಅಣಬೆ, ಬಿಳಿ ಅಣಬೆ, ಗುಂಡು ಅಣಬೆ ಹಾಗೂ ಭತ್ತದ ಹುಲ್ಲಿನ ಅಣಬೆ ಬಗ್ಗೆ ಮಾತನಾಡಿದರು. ಅಣಬೆಯಲ್ಲಿರುವ ವಿಟಮಿನ್, ಪ್ರೋಟೀನ್, ಹಾಗೂ ಇತರೆ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಬಹುಮುಖ್ಯ. ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹದ ತೂಕ ಕಡಿಮೆ ಮಾಡಲು ಉತ್ತಮ, ಮತ್ತು ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸುತ್ತದೆ. ಇದರಿಂದ ಕ್ಯಾನ್ಸರ್ ನಂತಹ ರೋಗಗಳು ಸಹ ತಡೆಯಬಹುದು.

ಅಣಬೆಯನ್ನು ವರ್ಷವಿಡೀ ಬೆಳೆಯಬಹುದು ಮತ್ತು ದಿನದಿಂದ ದಿನಕ್ಕೆ ಇದರ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಕಡಿಮೆ ವೆಚ್ಚದಲ್ಲಿ ಒಂದು ಸಣ್ಣ 10×10 ಅಡಿಯ ಕೊಠಡಿಯಿಂದ ಪ್ರಾರಂಭಿಸಬಹುದು. ಕಡಿಮೆ ಅವಧಿಯಲ್ಲಿ ಬೆಳೆ ಬೆಳೆಯಬಹುದು ಮತ್ತು ಹೆಚ್ಚು ಇಳುವಯನ್ನ ಪಡೆಯಬಹುದು. ಕಪ್ಪೆಚಿಪ್ಪಿನ ಅಣಬೆ ಬೆಳೆಯಲು ಸುಲಭ ಹಾಗೂ ಹೆಚ್ಚು ಆದಾಯಕಾರಿ.

ಶಿಲ್ಪಾ ರವರು ಮಾತನಾಡಿ ಒಂದು ಬ್ಯಾಗಿನಲ್ಲಿ ಎಷ್ಟು ಬೇಯಿಸಿದ ಹುಲ್ಲು ಮತ್ತು ಎಷ್ಟು ಬೀಜ ಹಾಕಬೇಕೆಂದು ತಿಳಿಸಿದರು. ಈ ಬ್ಯಾಗನ್ನು ಸ್ವಚ್ಛವಾದ ಕೊಠಡಿಯಲ್ಲಿ ತೂಗು ಹಾಕಬೇಕು. ಸ್ವಲ್ಪ ದಿನಗಳ ಬಳಿಕ ರಂಧ್ರಗಳನ್ನು ಮಾಡಿ ದಿನನಿತ್ಯ ನೀರನ್ನು ಸಿಂಪಡಿಸಬೇಕು. 25 ದಿನಗಳ ನಂತರ ಅಣಬೆಯು ಮೊದಲ ಕಟಾವಿಗೆ ಸಿದ್ಧವಾಗುತ್ತದೆ. ಹೀಗೆ ಸುಮಾರು ಎರಡು ಕಟಾವು ಮಾಡಬಹುದು.

ಅಣಬೆಯ ಮೌಲ್ಯವರ್ಧಿತ ಉತ್ಪನ್ನಗಳು ತಯಾರಿಸುವುದರಿಂದ ಹೆಚ್ಚು ಲಾಭಗಳಿಸಬಹುದೆಂದು ತಿಳಿಸಿದರು. ಇದನ್ನು ಮಹಿಳೆಯರು ಸುಲಭವಾಗಿ ಮಾಡಬಹುದು. ರೈತರಲ್ಲಿ ಅಣಬೆ ಬೇಸಾಯ ಕುರಿತು ಇರುವ ಚಿಂತೆಗಳನ್ನು ಬಗೆಹರಿಸರರು. ಕಾರ್ಯಕ್ರಮಕ್ಕೆ ಹಲವಾರು ರೈತರು ಪಾಲ್ಗೊಂಡು ಯಶಸ್ವಿಗೊಳಿಸಿದರು.