ಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿ ಚುನಾವಣೆ ಜನವರಿ 12 ರ ನಾಳೆ ನಡೆಯುತ್ತಾ? ಈ ಚುನಾವಣೆ ನಡೆಯಲು ಕಾನೂನಿನ ಪ್ರಕಾರ ಅವಕಾಶವಿದೆಯೇ? ಪಾರದರ್ಶಕವಾಗಿ ಈ ಚುನಾವಣೆ ನಡೆಯುವುದೇ?*

*ಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿ ಚುನಾವಣೆ ಜನವರಿ 12 ರ ನಾಳೆ ನಡೆಯುತ್ತಾ? ಈ ಚುನಾವಣೆ ನಡೆಯಲು ಕಾನೂನಿನ ಪ್ರಕಾರ ಅವಕಾಶವಿದೆಯೇ? ಪಾರದರ್ಶಕವಾಗಿ ಈ ಚುನಾವಣೆ ನಡೆಯುವುದೇ?*

ಇಷ್ಟೆಲ್ಲ ಪ್ರಶ್ನೆಗಳಿಂದಾಗಿ ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉಮಾಶಂಕರ ಉಪಾಧ್ಯಾಯ, ಎಸ್ ಪಿ ದಿನೇಶ್, ಗಂಧದ ಮನೆ ನರಸಿಂಹ, ಅನಂತರಾಮ್ ಸಿಂಗ್, ತುಳಸಿ ರಾಮಪ್ರಸಾದ್, ಅ.ಮ.ಪ್ರಕಾಶ್, ಭೀಮೇಶ್, ಲಕ್ಷ್ಮೀನಾರಾಯಣ, ಸೋಮಶೇಖರ್, ಕೆ.ಜಿ.ಕುಮಾರ ಸ್ವಾಮಿ, ನಾಗರಾಜ್, ಉಮೇಶ್ ಪುಟ್ಟಪ್ಪ, ಎಂ.ಆರ್.ಪ್ರಕಾಶ್, ಕವಿತಾ ಗುಡಗುಡಿ ಶ್ರೀನಿವಾಸ್, ವೇದಾವತಿರವರಿದ್ದ ತಂಡ ಚುನಾವಣೆ ಸಂಬಂಧ ಎರಡೆರಡು ಪತ್ರಿಕಾಗೋಷ್ಠಿಗಳನ್ನು ಮಾಡಿ, ಸೊಸೈಟಿಯೊಳಗಿನ ಹುಳಕನ್ನೆಲ್ಲ ಹೊರಕ್ಕೆ ಹಾಕಿದೆ.

ನೂರು ವರ್ಷದ ಇತಿಹಾಸವಿರುವ ಹೌಸಿಂಗ್ ಸೊಸೈಟಿಯ ಚುನಾವಣೆಯಲ್ಲಿ ಅಕ್ರಮಗಳು ನಡೆಯುತ್ತಿವೆ. ಹಣದ ಹೊಳೆ ಹರಿಯುತ್ತಿದೆ. ಸೊಸೈಟಿಯ ಸಿಬ್ಬಂದಿಯನ್ನು ಚುನಾವಣೆಯಲ್ಲಿ ಬಳಸಬಾರದು.ಸಿಸಿ ಟಿವಿ ಅಳವಡಿಸಬೇಕು. ನೇರ ವೀಡಿಯೋ ಮೂಲಕ ರೆಕಾರ್ಡ್ ಮಾಡಬೇಕು. ಹಲವಾರು ವರ್ಷಗಳ ಹಿಂದೆಯೇ ಮೃತಪಟ್ಟವರ ನೂರಾರು ಹೆಸರುಗಳು ಮತಪಟ್ಟಿಯಲ್ಲಿದ್ದು, ಪ್ರಾಕ್ಸಿ ಮತದಾನದ ಆತಂಕವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಸತ್ತವರು, ಊರು ಬಿಟ್ಟವರು, ಹೊರ ಜಿಲ್ಲೆಯಲ್ಲಿದ್ದವರು, ವಿದೇಶದಲ್ಲಿರುವ ಮತದಾರರನ್ನು ತೆಗೆದು ಹಾಕಿ ನೈಜ ಮತದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸಬೇಕು. ಚುನಾವಣೆ ಮುಂದೂಡಿ ಹೊಸದಾಗಿ ಪ್ರಕ್ರಿಯೆ ಆರಂಭಿಸಿ ಎಂದು 15 ಜನ ಅಭ್ಯರ್ಥಿಗಳೂ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಿ ಆಗ್ರಹಿಸಿದ್ದಾರೆ.

ಎಸ್.ಕೆ.ಮರಿಯಪ್ಪ ನೇತೃತ್ವದ ಬಣದ ವಿರುದ್ಧ ಇಷ್ಟೆಲ್ಲ ಆರೋಪಗಳನ್ನು ಮಾಡಲಾಗುತ್ತಿದೆಯಾದರೂ ಈ ಬಣ ಈ ವರೆಗೆ ಪತ್ರಕರ್ತರ ಮುಂದೆ ಬಂದಿಲ್ಲ!