ಅರ್ಥೈಟಿಸ್ ಚಿಕಿತ್ಸೆಗೆ ಹೊಸ ಆಶಾಕಿರಣ ಅಮೃತ್ ನೋನಿ ಅರ್ಥೋ ಪ್ರಸ್…**ಯಶಸ್ವಿಯಾಗಿ ಪೂರ್ಣಗೊಂಡ ಕ್ಲಿನಿಕಲ್ ಟ್ರಯಲ್…*

*ಅರ್ಥೈಟಿಸ್ ಚಿಕಿತ್ಸೆಗೆ ಹೊಸ ಆಶಾಕಿರಣ ಅಮೃತ್ ನೋನಿ ಅರ್ಥೋ ಪ್ರಸ್…*

*ಯಶಸ್ವಿಯಾಗಿ ಪೂರ್ಣಗೊಂಡ ಕ್ಲಿನಿಕಲ್ ಟ್ರಯಲ್…*

ಅಮೃತ್ ನೋನಿ ಕಳೆದ ಹದಿನೈದು ವರ್ಷಗಳಿಂದ ರಾಷ್ಟ್ರ ಮಟ್ಟದ ಆಯುರ್ವೇದ ಔಷಧೀಯ ಉದ್ಯಮದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ನಲ್ಲಿ ಒಂದಾಗಿದೆ. ಅಮೃತ ನೋನಿ ಉತ್ಪನ್ನಗಳ ತಯಾರಕರಾದ ವ್ಯಾಲ್ಯೂ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ CTRI-REG INDIA ದ ಮಾರ್ಗಸೂಚಿಗಳ ಅಡಿಯಲ್ಲಿ ನಡೆಸಲಾದ ಅಮೃತ ನೋನಿ ಅರ್ಥೋ ಪ್ಲಸ್ಗೆ ಸಂಬಂಧಿಸಿದ ಡಬಲ್ ಬ್ಲೈಂಡೆಡ್ ಮತ್ತು ರಾಂಡಮೈಜ್ ಹೂಮನ್ ಕ್ಲಿನಿಕಲ್ ಟ್ರಯಲ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದುಮ್ಯಾನೇಜಿಂಗ್ ಡೈರೆಕ್ಟರ್ ಡಾ.ಎ.ಕೆ.ಶ್ರೀನಿವಾಸ ಮೂರ್ತಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ವುಯೋಗಗಳು ಆಸ್ಟಿಯೋಆರ್ಥೈಟಿಸ್ (ಅಸ್ಥಿಸಂಧಿವಾತ), ರುಮಟಾಯ್ಸ್ ಅರ್ಥೈಟಿಸ್ (ರುಮಟಾಯ್ಸ್ ಸಂಧಿವಾತ) ಮತ್ತು ಗೌಟ್ ನಂತಹ ಕಾಯಿಲೆಗಳ ಮೇಲೆ ನಡೆಸಲಾಗಿದೆ ಎಂದರು.

*ಕ್ಲಿನಿಕಲ್ ಟ್ರಯಲ್ಸ್ ಏಕೆ ಅಗತ್ಯ?*

ಭಾರತದಲ್ಲಿ 210 ಮಿಲಿಯನ್ನಿಗಿಂತ ಹೆಚ್ಚು ಜನ ಆರ್ಥೈಟಿಸ್ ಇಂದ ಬಳಲುತ್ತಿದ್ದಾರೆ. ಇದು ಜನಸಂಖ್ಯೆಯ 15% ರಷ್ಟಿದೆ. ಕ್ಯಾನ್ಸರ್. ಏಡ್ಸ್ ಮತ್ತು ಡಯಾಬಿಟೀಸ್ ಗಿಂತಲೂ ಇದು ಹೆಚ್ಚು ವ್ಯಾಪಕವಾಗಿದೆ. ಆರ್ಥೈಟಿಸ್ ಬಗೆಗೆ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ. ಏಕೆಂದರೆ, ಇದರ ಪ್ರಭಾವ ದಿನೇ ದಿನೇ ಹೆಚ್ಚಾಗುತ್ತಿದೆ.’ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯ ಬದಲಾವಣೆಗಳಿಂದಾಗಿ, ಇದೀಗ ವೃದ್ಧರು ಮಾತ್ರವಲ್ಲದೆ ಯುವಜನತೆಗೂ ಸಮಸ್ಯೆಯಾಗಿ ಕಾಡುತ್ತಿದೆ. ಅಧ್ಯಯನಗಳ ಪ್ರಕಾರ, 100 ಕ್ಕೂ ಹೆಚ್ಚು ಪ್ರಕಾರಗಳ ಆರ್ಥೈಟಿಸ್ ಇದೆ. ಅವುಗಳಲ್ಲಿ ಆಸ್ಟಿಯೋ ಆರ್ಥೈಟಿಸ್, ರುಮಟಾಯ್ಡ್ ಆರ್ಥೈಟಿಸ್ ಮತ್ತು ಗೌಟ್ ಜನರಲ್ಲಿ ಹೆಚ್ಚು ಸಾಮಾನ್ಯವಾಗಿವೆ. ಆರ್ಥೈಟಿಸ್ ಗೆ ಸಂಪೂರ್ಣ ಚಿಕಿತ್ಸೆ ಲಭ್ಯವಿಲ್ಲದ ಕಾರಣ, ನಾವು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಔಷಧಿಗಳ ಮೂಲಕ ಉತ್ತಮ ನಿರ್ವಹಣಗೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ವಿವರಿಸಿದರು.

ಈ ನಿಟ್ಟಿನಲ್ಲಿ, ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ಆಧುನಿಕ ಸಂಶೋಧನೆಗಳೊಂದಿಗೆ ಅನುಭವಿ ಆಯುರ್ವೇದ ವೈದ್ಯರು ಮತ್ತು ವಿಜ್ಞಾನಿಗಳ ಸಹಯೋಗದೊಂದಿಗೆ ಮತ್ತು ಸುಧಾರಿತ R&D ಸಂಶೋಧನಾ ತಂತ್ರಗಳನ್ನು ಬಳಸಿಕೊಂಡು ಅಮೃತ ನೋನಿ ಅರ್ಥೋ ಟ್ರಸ್ ಅನ್ನು ಅಭಿವೃದ್ಧಿಪಡಿಸಿದೆ. ಅತ್ಯುತ್ತಮವಾದ ಯಶಸ್ಸು ಸಾಧಿಸಿರುವ ಈ ಉತ್ಪನ್ನವು ಭಾರತದಲ್ಲಿ ಆಸ್ಟಿಯೋಆರ್ಥೈಟಿಸ್, ರುಮಟಾಯ್ ಆರ್ಥೈಟಿಸ್‌ ಮತ್ತು ಗೌಟ್ ನಿರ್ವಹಣೆಗಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಉತ್ಪನ್ನವಾಗಿ ಹೊರಹೊಮ್ಮಿದೆ. ಇದರ ವಿಶಿಷ್ಟ ಮತ್ತು ಪರಿಣಾಮಕಾರಿ ಸೂತ್ರದಿಂದಾಗಿ 30 ಲಕ್ಷಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರು ತಮ್ಮ ಮಂಡಿ ನೋವು, ಬೆನ್ನು ನೋವು ಸೊಂಟ ನೋವಿನಂತಹ ಕೀಲು ನೋವಿನ ಸಮಸ್ಯೆಗಳಿಗೆ ಗಮನಾರ್ಹ ಪರಿಹಾರವನ್ನು ಕಂಡುಕೊಂಡಿದ್ದಾರೆ.

ಈ ಉತ್ಪನ್ನದಲ್ಲಿ ಬಳಸಲಾದ ನೋನಿ ಹಾಗೂ ಔಷಧೀಯ ಗಿಡಮೂಲಿಕೆಗಳು ಅದರ ಜನಪ್ರಿಯತೆ ಮತ್ತು ಪರಿಣಾಮಕಾರಿತ್ವಕ್ಕೆ ಕಾರಣವಾಗಿದೆ. ದೀರ್ಘಕಾಲೀನ ಕೀಲುನೋವಿನ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ.

*ಕ್ಲಿನಿಕಲ್ ಟ್ರಯಲ್ಸ್ ಪರಿಣಾಮಕಾರಿತ್ವ ಮತ್ತು ಸುರಕ್ಷತೆಗೆ ಹಿಡಿದ ಕೈಗನ್ನಡಿ*

ಅಮೃತ ನೋನಿ ಅರ್ಥೋ ಪ್ಲಸ್ ನ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಇನ್ನಷ್ಟು ದೃಢೀಕರಿಸಲು, CTRI-Reg India ಮಾರ್ಗಸೂಚಿಗಳಡಿ ನಲಂದಾ ಕ್ಲಿನ್ಸರ್ವ್ ಸಂಸ್ಥೆಯ ಸಹಯೋಗದೊಂದಿಗೆ ವಾರಾಣಸಿಯಲ್ಲಿ ಹೂಮನ್ ಕ್ಲಿನಿಕಲ್ ಟ್ರಯಲ್ ಅನ್ನು ನಡೆಸಲಾಯಿತು. ಈ ಪ್ರಯೋಗದಲ್ಲಿ, ಆಸ್ಟಿಯೋಆರ್ಥೈಟಿಸ್, ರುಮಟಾಯ್ಸ್ ಆರ್ಥೈಟಿಸ್ ಮತ್ತು ಗೌಟ್ ಸಂಶೋಧನೆಗೆ ಪ್ರತಿಯೊಂದಕ್ಕೊಂದರಂತೆ ಪ್ರತ್ಯೇಕವಾಗಿ 40 ರೋಗಿಗಳನ್ನು ಆಯ್ಕೆ ಮಾಡಿ, ಆಕ್ಷಿವ್ ಮತ್ತು ಪ್ಲಾಸಿಬೊ ಗುಂಪುಗಳಾಗಿ ಆಯ್ಕೆ ಮಾಡಿ 6 ತಿಂಗಳುಗಳಲ್ಲಿ 2 ತಿಂಗಳ ಅಂತರದಲ್ಲಿ ಮೂರು ಭೇಟಿ ಮಾಡುವ ಮೂಲಕ ಈ ಪ್ರಯೋಗವನ್ನು ಪೂರ್ಣ ಗೊಳಿಸಲಾಯಿತು.

*ಸಂಶೋಧನೆಗಳು:*
1. ಆಸ್ತಿಯೋಆರ್ಥೈಟಿಸ್-
ಪ್ರಾಸಿಬೊ.ಗುಂಪಿಗೆ ಹೋಲಿಸಿದರೆ ನೋವು ಚಲನ ಸಾಮರ್ಥ್ಯ. ESR ರಕ್ತದಲ್ಲಿನ ಕ್ಯಾಲಿಯಂ ಮತ್ತು ಮಗ್ರೀಸಿಯಮ್ ಲೆವಲ್ ಮತ್ತು ಮೂಳೆ ಸಾಂದ್ರತೆ (BMD) ನಲ್ಲಿ ಗಮನಾರ್ಹ ಸುಧಾರಣೆಗಳನ್ನು ಗಮನಿಸಲಾಗಿದೆ.

2. ರುಮಟಾಯ್ಸ್ ಅರ್ಥೈಟಿಸ್-
ರುಮಟಾಯ್ಡ್ ಅರ್ಥೈಟಿಸ್ನಲಿ ಸಿ ರಿಯಾಕ್ಸಿನ್ ನೋಟೀನ್ (CRP) ರುಮಟಾಯ್ಡ್ ಫ್ಯಾಕ್ಟರ್( RA ಫ್ಯಾಕ್ಟರ್) ಮತ್ತು ಎರಿಥ್ರೋಸೈಟ್ ಸೆಡಿಮೆಂಟೇಷನ್ ರೇಟ್ (ESR)ನಲ್ಲಿ ಕಡಿತ ಗಮನಿಸಲಾಯಿತು. ಸೀರಮ್ ಇಮ್ಯನೋಗ್ಲಾಬ್ಯುಲಿನ್ ಮಟ್ಟಗಳು(IgG, IgM, IgE) (ANA) ಮತ್ತು ಆಂಟಿನ್ಯೂಕ್ಲಿಯರ್ ಆಂಟಿಬಾಡಿ ಮಟ್ಟಗಳು ಸಹ ಗಮನಾರ್ಹ ಸುಧಾರಣೆ ತೋರಿಸಿವೆ ಎಂದರು.

ಗೌಟ್ ರೋಗಿಗಳಲ್ಲಿ, ನೋವು ಮತ್ತು ಉರಿಯೂತದಲ್ಲಿ ಗಣನೀಯ ಇಳಿಕೆಯನ್ನು ಅನುಭವಿಸುವುದರ ಜೊತೆಗೆ ಆರೋಗ್ಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಯನ್ನು ಕಂಡಿದ್ದಾರೆ. ಕಿಡ್ನಿ ಮತ್ತು ಲಿವರ್ಗಳ ಮೇಲೆ ಯಾವುದೇ ರೀತಿಯ.ಆಡ್ಡ ಪರಿಣಾಮಗಳಿಲ್ಲದೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

*ನಂಬಿಕೆ ಮತ್ತು ಭರವಸೆಗೆ ನಾವು ಬದ್ಧ*

ಆಯುರ್ವೇದ ಔಷಧಿಗಳನ್ನು ಹೂಮನ್ ಕ್ಲಿನಿಕಲ್ ಟ್ರಯಲ್ ಗಳಿಗೆ ಒಳಪಡಿಸುವುದು ಅಪರೂಪವಾಗಿದ್ದರೂ ನಂಬಿಕೆ ಉಳಿಸಿಕೊಂಡಿದ್ದೇವೆ. ಈ ಹಿಂದೆ, ಅಮೃತ ನೋನಿ ಡಿಡಿ ಪ್ಲಸ್ ಗೆ ಸಂಬಂದಿಸಿದಂತೆ ಯಶಸ್ವಿ ಹೂಮನ್ ಕ್ಲಿನಿಕಲ್ ಟ್ರಯನ್ನು ನಡೆಸಿ ಯಶಸ್ವಿಯಾಗಿದೆ.ನಮ್ಮ ಸಂಸ್ಥೆಯು ಪುಗತಿಶೀಲ ಸಂಶೋಧನೆಗಳಲ್ಲಿ ಉತ್ಸುಕವಾಗಿದ್ದು ಕ್ಯಾನ್ಸಿ ಕೆರ್ ಎಂಬ ಉತ್ಪನದೊಂದಿಗೆ ಕ್ಯಾನ್ಸರ್ ಕೋಶಗಳ ಮೇಲೆ ಸೆಲ್ ಲೈನ್ ಅಧ್ಯಯನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರೊಂದಿಗೆ.ಆರೋಗ್ಯಯುತ ಸಮಾಜದ ನಿರ್ಮಾಣದತ್ತ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ. ಪ್ರಾಮಾಣಿಕತೆಯನ್ನು ನಿರ್ಮಿಸಲು ಇದು ಅತ್ಯಂತ ಆಗತ್ಯ ಕ್ರಮವಾಗಿದೆ. ಇದು ಅಮೃತ್ ನೋನಿ ಸಾಧಿಸಿದ ಮೊದಲ ಸಾಧನೆ.

ಈ ಪ್ರಯೋಗಗಳಲ್ಲಿ ಭಾಗಿಯಾದ ರೋಗಿಗಳು, ಆರೋಗ್ಯ ಸೇವೆ ಒದಗಿಸಿದವರು ಮತ್ತು ಸಂಶೋಧನಾ ತಂಡಗಳಿಗೆ ನಾವು ನಮ್ಮ ಪ್ರತೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ನಿಮ್ಮ ಅಮೂಲ್ಯ ಕೊಡುಗೆಗಳು ಈ ಸಾಧನೆಯನ್ನು ಸಾಧ್ಯವಾಗಿಸಿದೆ ಎಂದು ನಾವು ಭಾವಿಸುತ್ತೇವೆ ಎಂದರು.
ಪತ್ರಿಕಾಗೋಷ್ಡಿಯಲ್ಲಿ
ಶ್ರೀಮತಿ ಅಂಬುಜಾಕ್ಷಿ ಎ.ಎಸ್
(ಸಂಸ್ಥಾಪಕರು ಮತ್ತು ನಿರ್ದೇಶಕರು ವ್ಯಾಲ್ಯೂ ಪ್ರಾಡಕ್ಟ್ ಪ್ರೈಲಿ),

ಡಾ. ಮಹಂತಸ್ವಾಮಿ ಹೀರೆಮಠ (ಬಿಎಎಂಎಸ್, ಎಂ.ಡಿ, ಆಯುರ್),
ಡಾ. ಸಂದೀಪ್ ಬೆಣಕಲ್
(ಬಿಎಎಂಎಸ್, ಡಿ.ಎನ್‌.ಡಿ
ವಿಭಾಗದ ಮುಖ್ಯಸ್ಥರು ಅಮೃತ್ ನೋನಿ ಹೆಲ್ತ್ ಕೇರ್),
ಶಶಿಕಾಂತ್ ನಾಡಿಗ್
(ಲೀಗಲ್ ಹೆಡ್ ವ್ಯಾಲ್ಯೂ ಪ್ರಾಡಕ್ಟ್ ಪ್ರೈಲಿ)

ಶ್ರೀಮತಿ ಇಂಚರ ನಾಡಿಗ್
(ವ್ಯಾಲ್ಯೂ ಪ್ರಾಡಕ್ಸ್ ಪ್ರೈಲಿ)
ಉಪಸ್ಥಿತರಿದ್ದರು.