ಇಮಾಮ ಮಳಗಿ, ಶಿಕಾರಿಪುರ ವಿಶೇಷ ವರದಿ;*ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕರಿಲ್ಲದೇನರಳುತ್ತಿರುವ ಪೂರ್ವ ಶಾಲಾ ಶಿಕ್ಷಣ*

ಇಮಾಮ ಮಳಗಿ, ಶಿಕಾರಿಪುರ ವಿಶೇಷ ವರದಿ;

*ಅಂಗನವಾಡಿ ಕಾರ್ಯಕರ್ತೆಯರು- ಸಹಾಯಕರಿಲ್ಲದೇ

ನರಳುತ್ತಿರುವ ಪೂರ್ವ ಶಾಲಾ ಶಿಕ್ಷಣ*

ಶಿಕಾರಿಪುರ: ಶಿಕಾರಿಪುರ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಳೆದ ಎರಡು ಮೂರು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆರನ್ನ ಮತ್ತು ಸಹಾಯಕಿಯರನ್ನ ನೇಮಕ ಮಾಡಿಕೊಳ್ಳದೆ ಪೂರ್ವ ಶಾಲಾ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ತಾಲೂಕಿನಲ್ಲಿ ಹಲವಾರು ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಇಲ್ಲದೆ ತೊಂದರೆ ಆಗಿದೆ. ಹೊಸ ಗೊದ್ದನಕೊಪ್ಪ,ಮುಗಳಗೇರಿ,ನಿಂಬೆಗೊಂದಿ ಮತ್ತಿಕೊಟೆ, ಇನ್ನೂ ಹಲವಾರು ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನ ನೇಮಕ ಮಾಡಿಕೊಳ್ಳದೆ ಎರಡು ಮೂರು ವರ್ಷಗಳು ಕಳೆದರೂ ನೇಮಕ ಮಾಡಿಕೊಳ್ಳದೆ ಇಲಾಖೆಯ ನಿರ್ಲಕ್ಷತನಕ್ಕೆ ಸಾಕ್ಷಿ ಯಾಗಿದೆ
ಪೂರ್ವ ಶಾಲಾ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿವೆ. ಮನೆಯಲ್ಲಿ ಒಂದು ಮಗುವನ್ನು ಸುಧಾರಿಸುವದು ಕಷ್ಟ 28 ರಿಂದ 30 ಮಕ್ಕಳಿರುವ ಕೇಂದ್ರಗಳಲ್ಲಿ ಕಾರ್ಯಕರ್ತೆ ಕಾರ್ಯನಿರ್ವಹಿಸುತ್ತಿರುವುದು ಬಹಳ ಕಷ್ಟದ ಕೆಲಸ, ಪೌಷ್ಟಿಕ ಆಹಾರ, ಪೂರ್ವಶಾಲಾ ಶಿಕ್ಷಣ, ನೀಡುವದು, ಗರ್ಭಿಣಿ ಬಾಣಂತಿಯರಿಗೆ ಆಹಾರ ವಿತರಿಸುವದರಿಂದ ಹಿಡಿದು ಅವರನ್ನು ಸಂತಯಿಸುವದು ಬಹಳ ಕಷ್ಟವಾಗುತ್ತಿದೆ.ಎರಡೂವರೆ ವರುಷ ಆರೋಗ್ಯ ಸರಿಯಿಲ್ಲದ ಆ ಕಾರ್ಯಕರ್ತೆಯ ಪರಸ್ಥಿತಿ ಏನಾಗಿರಬಹುದು…? ಮೇಲ್ವಿಚಾರಕರು, ಮೇಲಾ ಧಿಕಾರಿಗಳು ಸರಕಾರ ಅರ್ಥಮಾಡಕೊಳ್ಳಬೇಕು. ಅಧಿಕಾರಿಗಳಿಗೆ ಮೇಲ್ವಿಚಾರಕರಿಗೆ ಅರ್ಥಆಗುತ್ತೋ ಇಲ್ಲ್ವೋ ಗೊತ್ತಿಲ್ಲ.
ಆರೋಗ್ಯ ಇಲಾಖೆ ಗ್ರಾಮಪಂಚಾಯತ್ ಕೆಲಸಗಳು ಕಂದಾಯ ಇಲಾಖೆಯ ಕಾರ್ಯಕ್ರಮಗಳು ಚುನಾವಣೆ ಸಮಯದಲ್ಲಿ ಮತದಾರರ ಪಟ್ಟಿ ತಯಾರಿಸುವದು ಹೀಗೆ ಹಲವು ಇಲಾಖೆಯ ಜೊತೆ ವರದಿ ಕಳಿಸುವದು. ಅವರೊಂದಿಗೆ ಕಾರ್ಯ ನಿರ್ವಹಿಸುವುದು, ಆರೋಗ್ಯ ಸರಿ ಇಲ್ಲದಿದ್ದರೂ ಅವರ ಕೆಲಸಮಾಡಿಕೊಡಬೇಕು, ಕೇಂದ್ರಬಂದ ಮಾಡುವಂತಿಲ್ಲ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಲೇಬೇಕು.ಅದರೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಜಿಲ್ಲಾ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸರಕಾರ ಕಾರ್ಯ ಕರ್ತೆಯರನ್ನು ಸಹಾಯಕಿಯರನ್ನು ಕೇಂದ್ರಗಳಿಗೆ ನೇಮಕ ಮಾಡದೇ ನಿರ್ಲಕ್ಷತನ ತೋರಿದ್ದಾರೆ.
ಎಷ್ಟೋ ಅಂಗನವಾಡಿ ಕಾರ್ಯಕರ್ತೆಯರು ಅನಾರೋಗ್ಯದಿಂದ ನರಳುತ್ತಿದ್ದು ಸಕ್ಕರೆ ಕಾಯಿಲೆ ಮತ್ತು ರಕ್ತ ಒತ್ತಡದಿಂದ ನರಳುತ್ತಿದ್ದಾರೆ. ಕಡಿಮೆ ಸಂಬಳ,ಕೆಲಸದಹೊರೆ ಅಧಿಕಾರಿಗಳ ಮೇಲ್ವಿಚಾರಕರ ಒತ್ತಡ, ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷತನಕ್ಕೆಸಾಕ್ಷಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನ ನೇಮಕ ಮಾಡಿಕೊಳ್ಳಬೇಕು.
ಮತ್ತಿಕೋಟಿ ಗ್ರಾಮದ ಮೊದಲನೇ ಅಂಗನವಾಡಿ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳಿಂದಲೂ ಸಹಾಯಕಿಯ ನೇಮಕವಾಗದೆ ಕಾರ್ಯಕರ್ತೆ ಒಬ್ಬರೇ ಕಾರ್ಯನಿರ್ವಹಿಸುವುದು ಕಷ್ಟವಾಗುತ್ತಿದೆ.ಕೇಂದ್ರದ ಪಕ್ಕದದಲ್ಲಿ ಮುಖ್ಯ ರಸ್ತೆ ಇರುವುದರಿಂದ ದಿನನಿತ್ಯ ಇಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿವೆ. ಮಕ್ಕಳನ್ನ ಮನೆಗೆ ಕಳುಹಿಸುವುದು, ಸಹಾಯಕರಿಲ್ಲದೆ ಕಷ್ಟವಾಗುತ್ತಿದೆ ಏನಾದರೂ ಅಪಘಾತಗಳು ಸಂಭವಿಸಿದರೆ ಹೊಣೆಗಾರರು ಯಾರು,..? ಇಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆ ಸಕ್ಕರೆ ಕಾಯಿಲೆಯಿಂದ ಮತ್ತು ರಕ್ತ ಒತ್ತಡದಿಂದ ಬಳಲುತ್ತಿದ್ದಾರೆ. ಆರೋಗ್ಯ ಸರಿ ಇಲ್ಲದಿದ್ದಾಗಲೂ ಸಹ ಅನಿವಾರ್ಯ ಕಾರ್ಯನಿರ್ವಹಿಸುವಂತಾಗಿದೆ.ಇಲ್ಲಿಯ ಅಂಗನವಾಡಿ ಕೇಂದ್ರಕ್ಕೆ ಕಳೆದ ಮೂರು ವರ್ಷಗಳಿಂದಲೂ ಕೇಂದ್ರದ ಮುಂಬಾಗಿಲು ಇಲ್ಲದೆ ಮಕ್ಕಳಿಗೆ, ಕೇಂದ್ರಕ್ಕೆ ಭದ್ರತೆ ಇರುವದಿಲ್ಲ, ಪಂಚಾಯತ್ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದಲ್ಲದೆ ಅರ್ಜಿ ಬರೆದು ವಿನಂತಿಸಿಕೊಂಡರು, ಕ್ಯಾರೇಯನ್ನದ ಚುನಾಯಿತ ಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು, ಕೇಂದ್ರದ ವಸ್ತುಗಳು ಕಳುವಾದರೆ ಹೊಣೆಗಾರರು…? ಇದಕೆಲ್ಲ ಉತ್ತರ ಸಂಬಂಧಪಟ್ಟ ಶಿಶು ಅಭಿವೃದ್ಧಿ ಇಲಾಖೆ ಉತ್ತರ ನೀಡಬೇಕಾಗಿದೆ.

ಇಮಾಮ ಮಳಗಿ, ಶಿಕಾರಿಪುರ.