ಲೇವಾದೇವಿ ವ್ಯವಹಾರಸ್ಥರ ಪರವಾನಿಗೆ ಮತ್ತು ಬಡ್ಡಿದರ ಪ್ರದರ್ಶನ ಕಡ್ಡಾಯ*
*ಲೇವಾದೇವಿ ವ್ಯವಹಾರಸ್ಥರ ಪರವಾನಿಗೆ ಮತ್ತು ಬಡ್ಡಿದರ ಪ್ರದರ್ಶನ ಕಡ್ಡಾಯ*![](https://malenaduexpress.com/wp-content/uploads/2025/02/IMG-20250207-WA0548.jpg)
ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಲೇವಾದೇವಿಗಾರರು/ ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳು, ವ್ಯವಹಾರ ಸ್ಥಳದ ಕಚೇರಿಯಲ್ಲಿ ಪರವಾನಿಗೆ ಮತ್ತು ಬಡ್ಡಿದರದ ಫಲಕವನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ.
ಕರ್ನಾಟಕ ಲೇವಾದೇವಿ ಅಧಿನಿಯಮ 1961ರ ಪ್ರಕರಣ 28ರಡಿ ಸರ್ಕಾರವು ನಿಗದಿಪಡಿಸಿರುವ ಬಡ್ಡಿದರ ಭದ್ರತಾ ಸಾಲಗಳಿಗೆ ವಾರ್ಷಿಕ ಶೇ. 14% ರಷ್ಟು, ಭದ್ರತಾ ರಹಿತ ಸಾಲಗಳಿಗೆ ವಾರ್ಷಿಕ ಶೇ. 16% ರಷ್ಟು ಬಡ್ಡಿಯನ್ನು ಮಾತ್ರ ವಿಧಿಸತಕ್ಕದ್ದು, ವ್ಯವಹಾರ ಸ್ಥಳದಲ್ಲಿ ಬಡ್ಡಿದರದ ಫಲಕವನ್ನು ಸಾರ್ವಜನಿಕರಿಗೆ ಕಾಣುವ ರೀತಿ ಪ್ರದರ್ಶಿಸತಕ್ಕದ್ದು, ಸರ್ಕಾರವು ನಿಗಧಿಪಡಿಸಿದ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಡೆದ ಬಗ್ಗೆ ಪರಿವೀಕ್ಷಣೆಯಲ್ಲಿ ಕಂಡುಬಂದಲ್ಲಿ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರು ಎಚ್ಚರಿಸಿದ್ದಾರೆ.
ಸಾರ್ವಜನಿಕರು ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು- ದೂ.ಸಂ.: 080-23562951, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಲೇವಾದೇವಿ ನಿಬಂಧಕರು, ಶಿವಮೊಗ್ಗ –ದೂ.ಸಂ.: 08182-222711, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಲೇವಾದೇವಿ ನಿಬಂಧಕರು, ಶಿವಮೊಗ್ಗ ಉಪವಿಭಾಗ- ದೂ.ಸಂ.: 08182-225182, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಲೇವಾದೇವಿ ನಿಬಂಧಕರು, ಸಾಗರ ಉಪವಿಭಾಗ- ದೂ.ಸಂ.: 08183-221807 ಇವರುಗಳಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಲೇವಾದೇವಿ ಮತ್ತು ಗಿರವಿ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.