ಸೊರಬದಲ್ಲಿ ಬಂದೂಕು ತರಬೇತಿ ಸಮಾರೋಪ ಭಾಷಣ ಮಾಡಿದ ಸಚಿವ ಮಧು ಬಂಗಾರಪ್ಪ..ಭಾವೋದ್ವೇಗಕ್ಕೆ ಒಳಗಾಗಿ ಬಂದೂಕು ಬಳಸಬೇಡಿ ಎಂದ ಸಣ್ಣ ನೀರಾವರಿ ಸಚಿವ ಬೋಸ್ ರಾಜ್…ಬಂದೂಕು ತರಬೇತಿ ಪಡೆದವರು ಇಲಾಖೆಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದ ಎಸ್ ಪಿ ಮಿಥುನ್ ಕುಮಾರ್…

ಸೊರಬದಲ್ಲಿ ಬಂದೂಕು ತರಬೇತಿ ಸಮಾರೋಪ ಭಾಷಣ ಮಾಡಿದ ಸಚಿವ ಮಧು ಬಂಗಾರಪ್ಪ..

ಭಾವೋದ್ವೇಗಕ್ಕೆ ಒಳಗಾಗಿ ಬಂದೂಕು ಬಳಸಬೇಡಿ ಎಂದ ಸಣ್ಣ ನೀರಾವರಿ ಸಚಿವ ಬೋಸ್ ರಾಜ್…

ಬಂದೂಕು ತರಬೇತಿ ಪಡೆದವರು ಇಲಾಖೆಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದ ಎಸ್ ಪಿ ಮಿಥುನ್ ಕುಮಾರ್…

ಸೊರಬ ಪ್ರದೇಶದಲ್ಲಿ ಬಂದೂಕು ತರಬೇತಿಯಂಥ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ತರಬೇತಿ ಮುಗಿದ ನಂತರ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಿದ್ದು,ನೀವು ಸಹಾ ಪೊಲೀಸ್ ಇಲಾಖೆಯ ರೀತಿಯೇ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿರುತ್ತದೆ. ತರಬೇತಿ ಜೊತೆಗೆ ನಿಮಗೆ ಜವಾಬ್ದಾರಿಯನ್ನೂ ಸಹಾ ನೀಡಲಾಗಿರುತ್ತದೆ. ತರಬೇತಿಯಲ್ಲಿ ಹೇಳಿಕೊಟ್ಟ ಶಿಸ್ತನ್ನು ಯಾವ ರೀತಿ ಪಾಲನೆ ಮಾಡುತ್ತೀರ ಎಂಬುದು ನಿಮ್ಮ ಮೇಲೆಯೇ ಇರುತ್ತದೆ. ಆದ್ದರಿಂದ ಜವಾಬ್ದಾರಿಯುತವಾಗಿ ಆಯುಧಗಳನ್ನು ಬಳಕೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆ ಫೆ.1ರಿಂದ 10ರ ವರೆಗೆ ಸೊರಬದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಆಯುಧ ಪರವಾನಿಗೆಯನ್ನು ಪಡೆದು ಆಯುಧಗಳನ್ನು ಖರೀದಿ ಮಾಡಿದ ನಂತರ ಆಯುಧಗಳನ್ನು ಹೇಗೆ, ಎಲ್ಲಿ ಹಾಗೂ ಯಾವರೀತಿ ಬಳಕೆ ಮಾಡಬೇಕು ಎಂಬುದನ್ನು ತಿಳಿದುಕೊಂಡು ಸುರಕ್ಷಿತವಾಗಿ ಒಳ್ಳೆಯದಕ್ಕೆ ಮಾತ್ರ ಬಳಸಿ ಎಂದು ಹೇಳಿದರು.

ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ಮಾತನಾಡಿ, ಇದು ಅರ್ಥ ಪೂರ್ಣವಾದ* ಕಾರ್ಯಕ್ರಮವಾಗಿದ್ದು, ಜನಸಾಮಾನ್ಯರಿಗೆ ಅವರ ಮೇಲೆ ಆಗುವ ಯಾವುದೇ ಅಹಿತಕರ ಘಟನೆಗಳನ್ನು ಎದುರಿಸಬೇಕು ಎಂದರೆ ಅವರಲ್ಲಿ ಆತ್ಮ ಸ್ಥೈರ್ಯ ಎಂಬುದು ಮುಖ್ಯವಾಗಿರುತ್ತದೆ. ತರಬೇತಿ ಮುಕ್ತಾಯವಾದ ನಂತರ ಆಯುಧಗಳನ್ನು ಬಳಕೆ ಮಾಡಬೇಕಾದ ಸಂದರ್ಭ ಬಂದೊದಗಿದಲ್ಲಿ ನೀವು ಭಾವೋದ್ವೇಘಕ್ಕೆ ಒಳಗಾಗಿ ಆಯುಧಗಳನ್ನು ಬಳಸ ಬೇಡಿ. ಸಮಾಜದಲ್ಲಿ ನೀವು ಒಬ್ಬ ಉತ್ತಮ ಪ್ರಜೆಯಾಗಿ, ನಿಮ್ಮ ಜವಾಬ್ದಾರಿಗಳನ್ನು ಅರಿತು ಶಿಸ್ತುಬದ್ಧ ಜೀವನ ನಡೆಸಿ ಎಂದು ಹೇಳಿದರು.

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ. ಕೆ. ಕಾರ್ಯಕ್ರಮದ ಕುರಿತು ಕೆಲವೊಂದು ಅಭಿಪ್ರಾಯ ಹಂಚಿಕೊಂಡರು.
ಪೊಲೀಸ್ ಇಲಾಖೆಯು *ಸಮಾಜದ ಒಂದು ಭಾಗವೇ* ಆಗಿದ್ದು, ಪೊಲೀಸ್ ಇಲಾಖೆಯು ಸದಾ ಕಾಲ *ಸಾರ್ವಜನಿಕರ ಸೇವೆಗಾಗಿ* ಮುಡಿಪಾಗಿರುತ್ತದೆ. ಇಲಾಖೆಯು *ಪರಿಸ್ಥಿತಿಗೆ ಅನುಗುಣವಾಗಿ* ಕಾರ್ಯನಿರ್ವಹಿಸಲಿದ್ದು, ಎಲ್ಲಾ ಸಂದರ್ಭದಲ್ಲಿಯೂ ಸಹಾ *ಸಾರ್ವಜನಿಕರಿಗೆ ಸ್ಪಂದಿಸಲಿದೆ.*

ಪೊಲೀಸ್ ಇಲಾಖೆಯೊಂದಿಗೆ ಯಾರು *ಹೆಚ್ಚಿನ ಒಡನಾಟವನ್ನು ಹೊಂದಿರುತ್ತಾರೋ* ಅವರಿಗೆ ಇಲಾಖೆಯ ಮೇಲೆ *ಒಳ್ಳೆಯ ಅಭಿಪ್ರಾಯವಿರುತ್ತದೆ.* ನಾಗರೀಕ ಬಂದೂಕು ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ನೀವುಗಳು ಪೊಲೀಸ್ ಇಲಾಖೆಯ ಬಗ್ಗೆ ಇರುವ *ಒಳ್ಳೆಯ ಅಭಿಪ್ರಾಯವನ್ನು ನಿಮ್ಮ ಸಂಬಂಧಿಕರು, ಕುಟುಂಬಸ್ಥುರ ಹಾಗೂ ಸ್ನೇಹಿತರಿಗೆ* ತಿಳಿಸಿದ್ದಲ್ಲಿ, ಅವರಿಗೆ *ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ* ಕಾರ್ಯ ನಿರ್ವಹಿಸುತ್ತಿದೆ ಎಂಬ ಭಾವನೆಯು ಬೆಳೆಯುತ್ತದೆ.

ನಾಗರೀಕ ಬಂದೂಕು ತರಬೇತಿಗೆ ಹಾಜರಾದ ಪ್ರಶಿಕ್ಷಣಾರ್ಥಿಗಳನ್ನು ಒಳಗೊಂಡ *ವಾಟ್ಸ್ ಅಪ್ ಗ್ರೂಪ್ ಅನ್ನು ಸೃಜಿಸಿದ್ದು* ಯಾವುದೇ ರೀತಿಯ *ಕಾನೂನು ಬಾಹೀರ ಚಟುವಟಿಕೆಗಳ ಮಾಹಿತಿಯನ್ನು* ನೀವು ಸದರಿ *ವಾಟ್ಸ್ ಅಪ್ ಗ್ರೂಪ್ ನಲ್ಲಿ* ಹಂಚಿಕೊಳ್ಳಬಹುದಗಿರುತ್ತದೆ.

ನೀವು ಸೊರಬದ ಸ್ಥಳೀಯರಾಗಿದ್ದು, ಯಾವುದೇ *ಪ್ರಮುಖ ಬಂದೋಬಸ್ತ್ ಹಾಗೂ ಅಗತ್ಯ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯು ನಿಮ್ಮ ಸೇವೆಯನ್ನು* ಪಡೆಯುತ್ತದೆ. ಏಳು ವರ್ಷದ ಹಿಂದೆ ಭದ್ರಾವತಿಯಲ್ಲಿ ನಾಗರೀಕ ಬಂದೂಕು ತರಬೇತಿ ಪಡೆದ ಸದಸ್ಯರುಗಳು ಗಣೇಶ *ಬಂದೋಬಸ್ತ್, ಈದ್ ಮಿಲಾದ್ ಮತ್ತು ಇತರೆ ಪ್ರಮುಖ ಬಂದೋಬಸ್ತ್ ಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ* ಉತ್ತಮ ಕಾರ್ಯ ನಿರ್ವಹಿಸಿದ್ದು, ನೀವುಗಳು ಸಹಾ ಇದೇ ರೀತಿ ಪೊಲೀಸ್ *ಇಲಾಖೆಗೆ ಸಹಕರಿಸಿ ಸಾರ್ವಜನಿಕ ಹಿತದೃಷ್ಟಿಯಿಂದ* ಕೆಲಸ ನಿರ್ವಹಿಸಿ.

ಅಧಿಕಾರದ ಜೊತೆಗೆ ಹೊಣೆಗಾರಿಕೆ ಬರುತ್ತದೆ ಅದೇ ರೀತಿ *ಅಧಿಕಾರ ಹೆಚ್ಚಾದಂತೆ ಹೊಣೆಗಾರಿಕೆಯೂ* ಸಹಾ ಹೆಚ್ಚುತ್ತದೆ. *ಆಯುಧಗಳನ್ನು ಯಾವ ರೀತಿ ಬೇಕಾದರೂ ಬಳಸಬಹುದಾಗಿರುತ್ತದೆ. ಆದ್ದರಿಂದ ಆಯುಧಗಳನ್ನು ನಿಮ್ಮ, ಕುಟುಂಭದ, ಆಸ್ಥಿಯ ರಕ್ಷಣೆಗಾಗಿ ಮಾತ್ರ ಬಳಸಿ,* ಆಯುಧಗಳನ್ನು ಯಾವುದೇ ಕಾನೂನು ಬಾಹರ ಚಟುವಟಿಕೆಗಳಿಗೆ ಬಳಸಬೇಡಿ, ಒಂದು ವೇಳೆ ಬಳಸಿದಲ್ಲಿ ನಿಮ್ಮ ಬಳಿ ಪರವಾನಿಗೆ ಇರುವ ಆಯುಧ ಇದ್ದರೂ ಸಹಾ *ಅದು ಕಾನೂನು ರೀತ್ಯಾ ಅಪರಾಧವಾಗಿರುತ್ತದೆ.* ನೀವು ಸಮಾಜಕ್ಕೆ ಹಾಗೂ ಇತರರಿಗೆ ಮಾದರಿಯಾಗಿರಬೇಕು. ಆದ್ದರಿಂದ *ತರಬೇತಿಯಲ್ಲಿ ಕಲಿಸಿದಂತಹ ಶಿಸ್ತನ್ನು* ಪಾಲಿಸಿ ಕ್ರಮಬದ್ದವಾಗಿ ಆಯುಧಗಳನ್ನು ಬಳಸಿ.
ಉತ್ತಮ ನಾಗರೀಕನ ಮೊದಲ ಗುಣ ಶಿಸ್ತು ಬಧ್ದ ಜೀವನ ಆಗಿರುತ್ತದೆ. *ನಿಮ್ಮ ಜೀವನದುದ್ದಕ್ಕೂ ಇದೇ ರೀತಿಯ ಶಿಸ್ತನ್ನು ಪಾಲಿಸಿ,* ನಿಮಗೆ ತರಬೇತಿಯಲ್ಲಿ ಹೇಳಿಕೊಡಲಾದ *ದೈಹಿಕ ವ್ಯಾಯಾಮಗಳನ್ನು ಜೀವನದುದ್ದಕ್ಕೂ* ಪಾಲನೆ ಮಾಡಿದ್ದಲ್ಲಿ, ನಿಮ್ಮ *ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು* ಉತ್ತಮವಾಗಿ ಕಾಪಾಡಿಕೊಳ್ಳ ಬಹುದಾಗಿರುದೆ. ನಿಮ್ಮಿಂದ ಇತರರೂ ಕೂಡ ಒಳ್ಳೆಯ ಆದರ್ಶಗಳನ್ನು ಕಲಿಯುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷ್ಣ ಮೂರ್ತಿ,( ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ), ಕೇಶವ್, (ಪೊಲೀಸ್ ಉಪಾಧೀಕ್ಷಕರು, ಶಿಕಾರಿಪುರ ಉಪ ವಿಭಾಗ,) * ರಾಜಶೇಖರ್* (ಸಿಪಿಐ ಸೊರಬ ವೃತ್ತ) ಮತ್ತು *ನಾಗರೀಕ ಬಂದೂಕು ತರಬೇತಿ ಶಿಬಿರದ ಪ್ರಶಿಕ್ಷಣಾರ್ಥಿಗಳು* ಉಪಸ್ಥಿತರಿದ್ದರು.

ಒಟ್ಟು 200 ಜನ ಶಿಬಿರಾರ್ಥಿಗಳಿಗೆ ಈ ಸಂದರ್ಭದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.