ಸಹೃದಯ ದಾನಿಗಳ ಗಮನಕ್ಕೆ*👇👇👇👇 *ಶ್ವಾಸಕೋಶದ ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಶಂಕರನ ಜೀವ ಉಳಿಸಲು ಕೈ ಜೋಡಿಸಿ*

*ಸಹೃದಯ ದಾನಿಗಳ ಗಮನಕ್ಕೆ*👇👇👇👇

*ಶ್ವಾಸಕೋಶದ ತೀವ್ರ ಕಾಯಿಲೆಯಿಂದ ಬಳಲುತ್ತಿರುವ ಶಂಕರನ ಜೀವ ಉಳಿಸಲು ಕೈ ಜೋಡಿಸಿ*

ಶಿವಮೊಗ್ಗದ ಮಿಳಘಟ್ಟ ಬಡಾವಣೆಯ ಮೊದಲನೇ ತಿರುವಿನಲ್ಲಿ, ಗುರುನಾಥ ಸಾಮಿಲ್ ಬಳಿ ಪುಟ್ಟ ಗೂಡು ಮನೆಯಲ್ಲಿ ವಾಸವಾಗಿರುವ 34 ವರ್ಷ ವಯಸ್ಸಿನ ಶಂಕರ ತೀವ್ರ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆ್ಯಕ್ಸಿಝನ್ ಯಂತ್ರದಿಂದಲೇ 24 ಗಂಟೆಯೂ ಉಸಿರಾಡಲೇಬೇಕಾದ ದುಸ್ಥಿತಿಯಲ್ಲಿದ್ದಾನೆ. ಹಾಸಿಗೆಯಿಂದ ಏಳಲಾರದ ಸ್ಥಿತಿಯಲ್ಲಿದ್ದಾನೆ.ವೈದ್ಯರು ಶೇ. 70 ರಷ್ಟು ಶ್ವಾಸಕೋಶ ನಾಶವಾಗಿರೋ ಮಾಹಿತಿ ಕೊಟ್ಟಿದ್ದಾರೆಂದು ಶಂಕರನ ಮನೆಯಲ್ಲಿಯೇ ಇರುವ ಏಕೈಕ ಸಂಬಂಧಿ ಶಂಕರಮ್ಮ ಹೇಳುತ್ತಾರೆ.

ದಿನನಿತ್ಯ ಬೇಕಾದ ಅನ್ನಕ್ಕೂ ಪರದಾಡುವ ಸ್ಥಿತಿ ಈ ಶಂಕರ ಮತ್ತು ಶಂಕರಮ್ಮಳದು. ಶಂಕರಮ್ಮ ಕೂಲಿ ಮಾಡಿ ಬಂದರಷ್ಟೇ ಅನ್ನ ಸಿಗುತ್ತೆ.ಇಲ್ಲದಿದ್ದರೆ ಹಸಿವಿನದೇ ಸೌಭಾಗ್ಯ.

ಪರಿಸ್ಥಿತಿ ಹೀಗಿರುವಾಗ, ಶಂಕರನ ಉಸಿರಾಟಕ್ಕೆ ಅಳವಡಿಸಲಾಗಿರುವ ಆ್ಯಕ್ಸಿಝನ್ ಯಂತ್ರಕ್ಕೆ ತಿಂಗಳಿಗೆ 7,000₹ ಬಾಡಿಗೆ ಬೇರೆ ಕಟ್ಟಬೇಕು. ಮೂರ್ನಾಲ್ಕು ತಿಂಗಳುಗಳಿಂದ ಬಾಡಿಗೆಯನ್ನೂ ಕಟ್ಟಿಲ್ಲ. ಈ ಯಂತ್ರದ ಮೂಲಕವೇ ಶಂಕರ ಬದುಕುತ್ತಿದ್ದಾನೆ. ವಿದ್ಯುತ್ ಹೋದರಂತೂ ಯಂತ್ರ ನಿಂತು ನರಕವನ್ನೇ ಕಾಣುತ್ತಿದ್ದಾನೆ ಶಂಕರ. ಶಂಕರಮ್ಮಳಿಗೂ ವಯಸ್ಸಾಗಿದ್ದು ಕೂಲಿ ಮಾಡಲು ವಯೋಸಹಜ ಕಾಯಿಲೆಗಳು ಬಿಡುತ್ತಿಲ್ಲ.
ಒಟ್ಟಾರೆ ಪರಿಸ್ಥಿತಿ ಚಿಂತಾಜನಕವಾಗಿದೆ.

ಸಹಕರಿಸುವವರು ಫೋನ್ ಮೂಲಕವೋ, ನೇರವಾಗಿಯೋ ಭೇಟಿ ಮಾಡಿ ಸಹಾಯ ಹಸ್ತ ಚಾಚಬಹುದು…

*ಬ್ಯಾಂಕ್ ಖಾತೆ ವಿವರ;*
SHANKARAMMA
A/C- 3405101002808
IFSC- CNRB0003405
CANARA BANK
ANNA NAGARA BRANCH
SHIMOGA

*PHONE PAY ಮಾಡುವವರು ಈ ನಂಬರಿಗೆ ಮಾಡಿ- 8123710340*

ಮಾಹಿತಿಗಾಗಿ ಅವರ ಮೊಬೈಲ್ ನಂಬರ್;
*7411932490*
*8123710340*

ನಿಮ್ಮ ಪ್ರೀತಿಯ
– *ಶಿ.ಜು.ಪಾಶ*
mobile- 8050112067
ಸಂಪಾದಕರು
ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ
ಬೆಂಕಿ ಬಿರುಗಾಳಿ ದಿನಪತ್ರಿಕೆ
malenaduexpress.com