ಮೈನ್ ಮಿಡ್ಲ್ ಸ್ಕೂಲ್ ಆವರಣದಲ್ಲಿ ಮಕ್ಕಳ ಸಂತೆ* ತರಕಾರಿ ಮಾರುತ್ತಾ…ಕೂಗುತ್ತಾ… ಗಮನ ಸೆಳೆದ ಮಕ್ಕಳು!
*ಮೈನ್ ಮಿಡ್ಲ್ ಸ್ಕೂಲ್ ಆವರಣದಲ್ಲಿ ಮಕ್ಕಳ ಸಂತೆ*
ತರಕಾರಿ ಮಾರುತ್ತಾ…ಕೂಗುತ್ತಾ… ಗಮನ ಸೆಳೆದ ಮಕ್ಕಳು!

ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆ ಕರ್ನಾಟಕ ಸಂಘ ಪಕ್ಕದಲ್ಲಿರುವ “ಮೇನ್ ಮಿಡ್ಲ್ ಸ್ಕೂಲ್” ಸರ್ಕಾರಿ ಪ್ರಧಾನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಇಂದು ಶನಿವಾರ ಬೆಳಗ್ಗೆ ಮಕ್ಕಳ ಸಂತೆ ನಡೆಯಿತು.
ಸಂತೆಯಲ್ಲಿ ಮಕ್ಕಳು ನಮ್ಮ ಮನೆಯ ಹಿತ್ತಳೆಯಲ್ಲಿ ನೈಸರ್ಗಿಕವಾಗಿ ಬೆಳೆದ ತರಕಾರಿಗಳು ಎಂದು ಕೂಗುತ್ತ ಹೇಳುತ್ತಿದ್ದರು, ಟೊಮೋಟೊ, ನೀರುಳ್ಳಿ, ಬದನೆಕಾಯಿ, ಚೋಳಿಕಾಯಿ, ಕೊತ್ತಂಬರಿ, ಕರಿಬೇವು, ಕಾರ ಮಂಡಕ್ಕಿ, ವಿವಿಧ ರೀತಿಯ ತರಕಾರಿಗಳು ಕಂಡು ಬಂದವು.
ಈ ಮಕ್ಕಳ ಸಂತೆಯನ್ನು ಕಂಡು ಗ್ರಾಹಕರು ಸಂತೋಷ ಪಟ್ಟರು, ಮಕ್ಕಳು ಗ್ರಾಹಕರಿಗೆ ಪ್ಲಾಸ್ಟಿಕ್ ಇಲ್ಲ, ಕೈ ಚೀಲ ತನ್ನಿ ಎಂದು ಹೇಳಿದರು. ಗ್ರಾಹಕರು, ಪ್ಲಾಸ್ಟಿಕ್ ತ್ಯಜಿಸಿ ಪೇಪರ್ ಕವರ್ ನಲ್ಲಿ ವಸ್ತುಗಳ ತೆಗೆದುಕೊಂಡು ಹೋದರು.