Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

Warning: ftp_mkdir() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 642

Warning: ftp_nlist() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 492

Warning: ftp_pwd() expects parameter 1 to be resource, null given in /home/malenadu/public_html/wp-admin/includes/class-wp-filesystem-ftpext.php on line 284

ಕಾಂಗ್ರೆಸ್ನಿಂದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ರಕ್ಷಕ್ ಅಭಿಯಾನ; ಸಂವಿಧಾನವೇ ತಾಯಿ-ತಂದೆ-ಗುರು ಎಂದ ಮಧು ಬಂಗಾರಪ್ಪ ಬಿಜೆಪಿಯಿಂದ ಸಂವಿಧಾನಕ್ಕೆ ಅವಮಾನ- ಬಲ್ಕೀಶ್ ಬಾನು ಆತಂಕ

ಕಾಂಗ್ರೆಸ್ನಿಂದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ರಕ್ಷಕ್ ಅಭಿಯಾನ;

ಸಂವಿಧಾನವೇ ತಾಯಿ-ತಂದೆ-ಗುರು ಎಂದ ಮಧು ಬಂಗಾರಪ್ಪ

ಬಿಜೆಪಿಯಿಂದ ಸಂವಿಧಾನಕ್ಕೆ ಅವಮಾನ- ಬಲ್ಕೀಶ್ ಬಾನು ಆತಂಕ

ಶಿವಮೊಗ್ಗ: ಸಂವಿಧಾನವನ್ನು ರಕ್ಷಣೆ ಮಾಡುವ ಮೂಲಕ ನಮ್ಮನ್ನು ನಾವು ರಕ್ಷಣೆ ಮಡಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಅವರು ಇಂದು ಡಾ.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ಸಿನ ಹಿಂದುಳಿದ ವರ್ಗ, ಪ.ಜಾ., ಪ.ಪಂ.ಅಲ್ಪಸಂಖ್ಯಾತರ ವಿಭಾಗಗಳ ವತಿಯಿಂದ ಆಯೋಜಿಸಿದ್ದ ಸಂವಿಧಾನ ರಕ್ಷಕ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಬಂದಿದೆ. ಸಂವಿಧಾನವೂ ರಚನೆಯಾಗಿದೆ. ಆದರೆ ನಮ್ಮ ಸಂವಿಧಾನವನ್ನು ನಾವೇ ಉಳಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದಿದೆ. ಗೋಡ್ಸೆ ಪೂಜೆ ನಡೆಯುವ ಈ ಹೊತ್ತಿನಲ್ಲಿ ಡಾ.ಅಂಬೇಡ್ಕರ್ ಮರೆಯಾಗುತ್ತಿದ್ದಾರೆ. ನಮ್ಮ ತಂದೆ ತಾಯಿ ಗುರು ಎಲ್ಲ ಸ್ಥಾನದಲ್ಲಿರುವ ಸಂವಿಧಾನವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಹಾಗಾಗಿ ಪವಿತ್ರ ಸಂವಿಧಾನವನ್ನು ಅಪವಿತ್ರಗೊಳಿಸುವ ಮೊದಲೇ ಕಾಂಗ್ರೆಸ್ ಪಕ್ಷ ಎಚ್ಚೆತ್ತುಕೊಂಡಿದೆ.  ಸಂವಿಧಾನದ ರಕ್ಷಣೆ ನಮ್ಮ ಹೊಣೆ ಎಂದುಕೊಂಡಿದ್ದೆವೆ. ಈ ಹಿನ್ನೆಲೆಯಲ್ಲಿ ಸಂವಿಧಾನ ರಕ್ಷಕ್ ಅಭಿಯಾನ ರಾಜ್ಯದೆಲ್ಲೆಡೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಬ್ಲಾಕ್ ಮಟ್ಟದಲ್ಲಿಯೂ ಕೂಡ ಇದು ನಡೆಯಬೇಕು. ಒಟ್ಟಾರೆ ಸಂವಿಧಾನದ ಉಳಿವಿನ ಜಾಗೃತಿ ಕಾರ್ಯಕ್ರಮ ನಡೆಯಬೇಕು ಎಂದರು.
ಶಾಲಾ ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸುವ ಹಿನ್ನೆಲೆಯಲ್ಲಿ  ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನದ ಓದನ್ನು ಕಡ್ಡಾಯಗೊಳಿಸುವಂತೆ ಈಗಾಗಲೇ ಆದೇಶ ನೀಡಲಾಗಿದೆ. ಹಲವು ಶಾಲೆಗಳು ಇದನ್ನು ಪಾಲಿಸುತ್ತಿವೆ. ಪಾಲಿಸದೆ ಇರುವ ಶಾಲೆಗಳೂ ಸಂವಿಧಾನ ಓದಿನ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಪಠ್ಯ ಪುಸ್ತಕಗಳಲ್ಲಿ ಕೇಸರಿಕರಣವಾಗಿದ್ದನ್ನು ನಾನು ಸಚಿವನಾದ ತಕ್ಷಣ ತೆಗೆದು ಹಾಕಿದ್ದೇನೆ. ಸಂವಿಧಾನದ ಪ್ರಕಾರ ನಾವೆಲ್ಲರೂ ಒಂದೇ. ಈ  ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ನಮ್ಮ ಗ್ಯಾರೆಂಟಿ ಯೋಜನೆಗಳೂ ಈಗಾಗಲೆ ಯಶಸ್ವಿಯಾಗಿವೆ ಎಂದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಮಾತನಾಡಿ, ನಮ್ಮ ಸಂವಿಧಾನವನ್ನು ಅಂಬೇಡ್ಕರ್ ಸೇರಿದಂತೆ ಎಲ್ಲ ಸದಸ್ಯರು ಅಧ್ಯಯನ ಮಾಡಿ ರಚಿಸಿದ್ದಾರೆ. ಭಾರತದ ಸಂವಿಧಾನವೇ ಶ್ರೇಷ್ಠ ಎಂದು ಜಗತ್ತಿನಲ್ಲಿಯೇ ಹೆಸರಾಗಿದೆ.  ಆದರೆ ಇಂಥಹ ಸಂವಿಧಾನವನ್ನು ಈಗ ಬಿಜೆಪಿಯವರು ಅವಮಾನಮಾಡತೊಡಗಿದ್ದಾರೆ.  ಸಂವಿಧಾನಕ್ಕೆ ಅವಮಾನ ಮಾಡುವವರ ವಿರುದ್ಧ ಕಾಂಗ್ರೆಸ್ ಪಕ್ಷ ಎಂದೂ ಸುಮ್ಮನಿರುವುದಿಲ್ಲ. ಹಾಗಾಗಿಯೇ ಇಂಥಹ ಅಭಿಯಾನಗಳು ನಡೆಯುತ್ತಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೇಂದ್ರದ ಗೃಹ ಮಂತ್ರಿ ಸೇರಿದಂತೆ ಬಿಜೆಪಿ ನಾಯಕರು ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡುವುದರ ಜೊತೆಗೆ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದ್ದಾರೆ. ಮನು ಸಂವಿಧಾನ ರಚಿಸುವ ಹುನ್ನಾರ ಸದ್ದಿಲ್ಲದೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷ ಇದಕ್ಕೆ ಅವಕಾಶ ನೀಡುವುದಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಡಾ.ಶ್ರೀನಿವಾಸ್ ಕರಿಯಣ್ಣ, ಕಲಿಂ ಪಾಶಾ, ಶಿವಕುಮಾರ್, ರವಿಕುಮಾರ್, ಎಸ್.ಪಿ.ಶೇಷಾದ್ರಿ, ಎಚ್.ಸಿ.ಯೋಗೀಶ್, ರಮೇಶ್ ಶಂಕರಘಟ್ಟ, ಸಿ.ಎಸ್.ಚಂದ್ರಭೂಪಾಲ್, ರಮೇಶ್ ಇಕ್ಕೇರಿ, ಜಿ.ಡಿ.ಮಂಜುನಾಥ್, ಉಮಾಪತಿ, ವಿಜಯಕುಮಾರ್ (ದನಿ), ನಾಗರಾಜ್ ಕಂಕಾರಿ, ಸುವರ್ಣ ನಾಗರಾಜ್, ಭಾರತಿ ರಾಮಕೃಷ್ಣ, ಹರ್ಷಿತ್ ಗೌಡ, ನಗರದ ಮಹಾದೇವಪ್ಪ, ಮಂಜುನಾಥ ಬಾಬು, ವಿಜಯಲಕ್ಷ್ಮೀ ಪಾಟೀಲ್, ಎಚ್.ಎಮ್.ಮಧು, ಶಿಜು ಪಾಶಾ, ಪದ್ಮನಾಭ ಸೇರಿದಂತೆ ಹಲವರಿದ್ದರು.
ಬಾಕ್ಸ್:
ಮನುಷ್ಯನನ್ನು ಉತ್ತಮ ಮನುಷ್ಯನನ್ನಾಗಿಸುವುದೇ ಸಂವಿಧಾನದ ಮುಖ್ಯ ಉದ್ದೇಶ ಎಂದು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಜಿ. ವೆಂಕಟೇಶ್ ಹೇಳಿದರು.
ಸಂವಿಧಾನ ರಕ್ಷಕ್ ಅಭಿಯಾನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಂವಿಧಾನ ಎಂದು ಕೆಡುಕು ಉಂಟುಮಾಡುವುದಿಲ್ಲ. ಆದರೆ ಅದನ್ನು ಮನುಷ್ಯರಾದ ನಾವು ಗೌರವಿಸಬೇಕು. ಸ್ವಾತಂತ್ರ್ಯ ಸಮಾನತೆ ಮಾತೃತ್ವದ ಮುಖ್ಯ ತತ್ವಗಳು ಇಲ್ಲಿವೆ. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಡಾ.ಬಿ.ಆರ್. ಅಂಬೇಡ್ಕರ್ ಭಾರತ ದೇಶಕ್ಕೆ ಒಂದು ಉತ್ತಮ ಸಂವಿಧಾನವನ್ನು ನೀಡಿದ್ದಾರೆ. ಇದು ಮನುಷ್ಯರ  ಮಾನವಿಯತೆಯನ್ನು ಪ್ರತಿಬಿಂಬಿಸುವ ಸ್ವರೂಪವು ಆಗಿದೆ ಎಂದರು.
ಸಂವಿಧಾನವನ್ನು ಸಂವಿಧಾನವೇ ರಕ್ಷಣೆ ಮಾಡಿಕೊಳ್ಳುತ್ತದೆ. ಮೂಲಭೂತ ಉದ್ದೇಶಗಳಿಗೆ ಯಾವುದೇ ಚ್ಯುತಿಯಾಗದಂತೆ ಸಂವಿಧಾನವನ್ನು ಬದಲಾವಣೆ ಮಾಡಬಹುದಾಗಿದೆ. ಸಂವಿಧಾನದ ಪೀಠಿಕೆಯಲ್ಲಿಯೇ ಅದರ ಮುಖ್ಯ ಉದ್ದೇಶಗಳನ್ನ ತಿಳಿಸಲಾಗಿದೆ. ೩೯೫ ವಿಧಿಗಳಿದ್ದು ಈಗ ಅದು ತಿದ್ದುಪಡಿಯ ಮೂಲಕ ೪೪೨ ವಿಧಿಗಳಾಗಿವೆ. ಆರಂಭದಲ್ಲಿ ೮ ಷಡ್ಯುಲ್‌ಗಳಿದ್ದು, ಈಗ ೧೨ ಷಡ್ಯುಲ್‌ಗಳಲಿವೆ. ಜಗತ್ತಿನಲ್ಲಿ ಅತಿ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇಂತಹ ಸಂವಿಧಾನದ ರಕ್ಷಣೆಯೂ ಕೂಡ ನಮ್ಮದೇ ಅಗಿದೆ.