ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದೇ ದೇವಾಂಗ ಸಮಾಜದಿಂದ; ಸಚಿವ ಎಸ್, ಮಧು ಬಂಗಾರಪ್ಪ
ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದೇ ದೇವಾಂಗ ಸಮಾಜದಿಂದ; ಸಚಿವ ಎಸ್, ಮಧು ಬಂಗಾರಪ್ಪ
ತಂದೆ ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಲು ದೇವಾಂಗ ಸಮಾಜವೇ ಕಾರಣ. ಅವರ ಸಹಕಾರ ಇಲ್ಲದಿದ್ದರೆ ತಮ್ಮ ತಂದೆ ಮುಖ್ಯಮಂತ್ರಿಯಾಗುತ್ತಿರಲಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಮಲೆನಾಡು ದೇವಾಂಗ ಸಮಾಜ (ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆ)ವು ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಕಟ್ಟಡದ ಉದ್ಘಾಟನೆ ಹಾಗೂ ಸುವರ್ಣ ಮಹೋತ್ಸವ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇವಾಂಗ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಎಲ್ಲ ಸಹಕಾರ ನೀಡಲಾಗುವುದು. ಬೇಡಿಕೆ ಇದ್ದರೆ ಸಮಾಜಗಳು ಕೇಳಿ ಪಡೆಯಬೇಕು. ಸರ್ಕಾರ ಈಡೇರಿಸದಿದ್ದರೆ ಹೋರಾಡಿ ತೆಗೆದುಕೊಳ್ಳಬೇಕು ಮೊದಲು ನೀವು ಸಂಘಟಿತರಾಗಿ ವೇದಿಕೆ ಮೇಲಿರುವವರು ಮಾತ್ರ ಸಂಘಟಿತರಾದರೆ ಸಾಧ್ಯವಿಲ್ಲ ವೇದಿಕೆಯ ಮುಂಬಾಗದ ನೀವು ಕೂಡ ಸಂಘಟಿತರಾಗಬೇಕು ನಾರಾಯಣ ಗುರುಗಳ ಆಶಯದಂತೆ ಸಂಘಟನೆಯಿಂದ ಬಲಯುತರಾಗಿ ಎಂಬುದು ಕೇವಲ ಈ ಈಡಿಗ ಸಮಾಜಕ್ಕೆ ಮಾತ್ರವಲ್ಲ ಎಲ್ಲ ಹಿಂದುಳಿದ ಹಾಗೂ ಶೋಷಿತ ವರ್ಗದವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳಿದ್ದಾರೆ ನಾವು ಸಂಘಟಿತರಾಗಿ ಜನಪ್ರತಿನಿಧಿಗಳನ್ನು ಪ್ರಶ್ನಿಸದೆ ಹೋದರೆ ಪ್ರತಿನಿಧಿಗಳು ಭಾಷಣ ಮತ್ತು ಘೋಷಣೆಗೆ ಮಾತ್ರ ಸೀಮಿತ ರಾಗುತ್ತಾರೆ ನಿಮ್ಮ ಹಕ್ಕುಗಳನ್ನು ಕೇಳಿ ಕೊಡದೆ ಇದ್ದಾಗ ಕಸಿದುಕೊಳ್ಳುವ ರಾಗಬೇಕು ಎಂದರು.
ದೇವಾoಗ ಸಮಾಜದ ಅಭಿವೃದ್ಧಿಗಾಗಿ ಸರ್ಕಾರದಿಂದ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡುವೆ. ಯಾವುದೇ ನಿಗಮ, ಮಂಡಳಿ ಸ್ಥಾಪನೆ ಮಾಡಬೇಕಾದರೆ ಅದಕ್ಕೆ ಹಣ ಬೇಕು. ಹಣ ಇಲ್ಲದೆ ನಿಗಮ ಸ್ಥಾಪನೆ ಘೋಷಣೆ ಕಷ್ಟಸಾಧ್ಯ ಎಂದರು .
ನಿಮ್ಮ ಸಮಾಜದವರು ಎಲ್ಲಾ ರಂಗದಲ್ಲೂ ಇದ್ದಾರೆ ಇತ್ತೀಚಿಗೆ ಚಿತ್ರನಟ ನನ್ನ ಭಾವ ಶಿವಣ್ಣನವರಿಗೆ ವಿದೇಶದಲ್ಲಿ ಆಪರೇಷನ್ ಮಾಡಿದವರು ಡಾಕ್ಟರ್ ಮುರುಗೇಶ್ ರವರು ನಿಮ್ಮ ಸಮಾಜದವರು ಎನ್ನುವುದು ಹೆಮ್ಮೆ. ಭಾರತದ ಎಲ್ಲಾ ರೋಗಿಗಳಿಗೂ ಅವರು ಉಚಿತವಾಗಿ ಆಪರೇಷನ್ ಸೌಲಭ್ಯ ಕೊಟ್ಟಿದ್ದಾರೆ ತಾವು ಯಾವುದೇ ಹಣವನ್ನು ಪಡೆಯುವುದಿಲ್ಲ. ಇಂತಹ ನಿಸ್ವಾರ್ಥ ಸೇವೆ ಸಲ್ಲಿಸುವರು ನಮ್ಮ ದೇಶದವರು ನಿಮ್ಮ ಸಮಾಜದವರು ಎಂಬ ಹೆಮ್ಮೆ ನಮಗಿದೆ. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರ ಕವಿರತ್ನ ಕಾಳಿದಾಸ ಚಲನ ಚಿತ್ರದ ಭೋಜರಾಜನ ಪಾತ್ರವನ್ನು ನಮ್ಮ ತಂದೆ ಸದಾ ಆಸ್ವಾದಿಸುತ್ತಿದ್ದರು ಚಿತ್ರನಟಿ ಉಮಾಶ್ರೀ ಅವರನ್ನು ಗುರುತಿಸಿ ಮೊದಲು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದು ನಮ್ಮ ತಂದೆ ಅವರ ಮಗನಾಗಿ ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು.
ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಸರ್ಕಾರದ ಮತ್ತು ಸಮಾಜದ ನಡುವೆ ಸೇತುವೆಯಾಗಿ ಜನಪ್ರತಿನಿಧಗಳು ಕೆಲಸ ಮಾಡುತ್ತೇವೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿರುವ ನೇಕಾರ, ದೇವಾಂಗ ಸಮಾಜದವರು ಹತ್ತಿ ಮತ್ತು ರೇಷ್ಮೆ ಬೆಳೆದು ತಮ್ಮ ವೃತ್ತಿಯನ್ನು ನಿಯತ್ತಿನಿಂದ ಮಾಡಿಕೊಂಡುಬರುತ್ತಿದ್ದಾರೆ. ತಮ್ಮ ಪರಂಪರೆಗೆ ಸೀಮಿತವಾಗದೆ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದಾರೆ ಎಂದರು.
ದೇವಾಂಗ ಸಮಾಜದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ ಸಮುದಾಯ ಭವನ ಕಟ್ಟಡ ಅಭಿವೃದ್ಧಿಗೊಳಿಸಲು ಇನ್ನೂ ಎರಡು ಕೋಟಿ ರೂಪಾಯಿ ಅನುದಾನ ನೀಡುವಂತೆ ಸಚಿವ ಮಧು ಬಂಗಾರಪ್ಪ ಅವರನ್ನು ಕೇಳಿಕೊಂಡರು.
ಹಂಪಿ ಹೇಮಕೂಟದ ಗಾಯತ್ರಿ ಪೀಠದ ಪೀಠಾಧ್ಯಕ್ಷ ಶ್ರೀ ದಯಾನಂದಪುರಿ ಸ್ವಾಮೀಜಿ, ಧಾರವಾಡದ ಕವಲಗೇರಿ ಶಿವಾನಂದ ಮಠದ ಶ್ರೀ ಶಿವಾನಂದ ಸ್ವಾಮೀಜಿಗಳು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.