ಶ್ರೀಕಾಂತಣ್ಣ ಕಪ್ ಸೀಸನ್ – 2 ರ ಸಮಾರೋಪ ಸಮಾರಂಭದಲ್ಲಿ ಎಂ.ಶ್ರೀಕಾಂತ್ ಅಭಿಮತ; *ಸಾಮರಸ್ಯ ಮತ್ತು ನವೋಲ್ಲಾಸ ಕ್ರೀಡೆಯಿಂದಷ್ಟೇ ಸಾಧ್ಯ* ಶ್ರೀಕಾಂತಣ್ಣ ಕಪ್ ಮುಡಿಗೇರಿಸಿಕೊಂಡ ದೈವಜ್ಞ ಯುವಕರು *

ಶ್ರೀಕಾಂತಣ್ಣ ಕಪ್ ಸೀಸನ್ – 2 ರ ಸಮಾರೋಪ ಸಮಾರಂಭದಲ್ಲಿ ಎಂ.ಶ್ರೀಕಾಂತ್ ಅಭಿಮತ;

*ಸಾಮರಸ್ಯ ಮತ್ತು ನವೋಲ್ಲಾಸ ಕ್ರೀಡೆಯಿಂದಷ್ಟೇ ಸಾಧ್ಯ*

ಶ್ರೀಕಾಂತಣ್ಣ ಕಪ್ ಮುಡಿಗೇರಿಸಿಕೊಂಡ ದೈವಜ್ಞ ಯುವಕರು *

ಶಿವಮೊಗ್ಗ : ಸದಾ ಕಾಲ ದುಡಿಮೆ ಹಾಗೂ ಕರ್ತವ್ಯದಲ್ಲಿ ಒಳಗಾಗುವ ಒತ್ತಡಕ್ಕೆ ಕ್ರೀಡೆಗಳು ನವೋಲ್ಲಾಸ ನೀಡುವುದರ ಜತೆಗೆ ಸಾಮರಸ್ಯವನ್ನು ಮೂಡಿಸುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಂ. ಶ್ರೀಕಾಂತ್ ಹೇಳಿದ್ದಾರೆ.

ಶ್ರೀಕಾಂತಣ್ಣ ಕಪ್ ಸೀಸನ್ – 2 ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಗೆಲುವು ಸಾಧಿಸಿದ ತಂಡಗಳಿಗೆ ಟ್ರೋಫಿ- ಬಹುಮಾನ ವಿತರಿಸಿ ಅವರು ಮಾತನಾಡಿದರು. ಈ ಟೂರ್ನಮೆಂಟ್ ಮೂಲಕ ವಿವಿಧ ಸಮುದಾಯಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆದಿರುವುದು ಶಿವಮೊಗ್ಗದಲ್ಲಿ ಹೊಸ ಭಾಷ್ಯ ಬರೆದಿದಂತಾಗಿದೆ ಎಂದರು.

ಕಳೆದೆರಡು ದಿನಗಳಿಂದ ಪಂದ್ಯಾವಳಿಯಲ್ಲಿ ವಿವಿಧ ಸಮುದಾಯಗಳ ಯುವ ಮನಸ್ಸುಗಳು ಒಂದಾಗಿವೆ. ಈ ಮೂಲಕ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಮೂಡಿದಂತಾಗಿದೆ. ಈ ರೀತಿಯ ಕ್ರೀಡೆಗಳು ಹೆಚ್ಚೆಚ್ಚು ನಡೆಯಬೇಕು. ಅದರ ಮೂಲಕ ಶಿವಮೊಗ್ಗದ ಎಲ್ಲಾ ಮನಸ್ಸುಗಳನ್ನು ಒಂದು ಮಾಡಬೇಕೆಂದರು. ಈ ಪಂದ್ಯಾವಳಿಯ ಪ್ರಮುಖ ರೂವಾರಿ, ಯುವ ಮುಖಂಡ ವಿನಯ್ ತಾಂದ್ಲೆ, ಕಾರ್ಯ ಶ್ಲಾಘನೀಯ ಎಂದರು.

*ಶ್ರೀಕಾಂತಣ್ಣ ಕಪ್ ಮುಡಿಗೇರಿಸಿಕೊಂಡ ದೈವಜ್ಞ ಯುವಕರು :-*

ಇನ್ನು ಶಿವಮೊಗ್ಗದ ಎನ್.ಇ.ಎಸ್. ಮೈದಾನದಲ್ಲಿ ಶನಿವಾರ-ಭಾನುವಾರ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದು ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ಸ್ವಸ್ತಿಕ್ ದೈವಜ್ಞ ತಂಡ ಪ್ರಥಮ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಎಂ.ಬಿ.ಸಿ.-1 ಹಾಗೂ ಸ್ವಸ್ತಿಕ್ ದೈವಜ್ಞ ತಂಡಗಳ ನಡುವೆ ನಡೆದ ಫೈನಲ್‌ ಪಂದ್ಯದಲ್ಲಿ ಸ್ವಸ್ತಿಕ್ ದೈವಜ್ಞ ತಂಡ ಜಯ ಗಳಿಸಿ ಚಾಂಪಿಯನ್‌ ಆಗಿ ಹೊರ ಹೊಮ್ಮಿತು. ಮೊದಲು ಬ್ಯಾಟಿಂಗ್ ನಡೆಸಿದ ಎಂ.ಬಿ.ಸಿ. ತಂಡ 5 ವಿಕೆಟ್ ನಷ್ಟಕ್ಕೆ ಕೇವಲ 37 ರನ್ ಗಳಿಸಿತ್ತು. ಗೆಲುವಿನ ಗುರಿ ಬೆನ್ನತ್ತಿದ ದೈವಜ್ಞ ತಂಡ ಕೇವಲ 5.3 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 38 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.