ಬೈಕ್‌ನಲ್ಲಿರುವಾಗಲೇ ನಟಿಯ ಕಂಡು ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ…* ಪೊಲೀಸ್ ದೂರಿನಲ್ಲಿ ಏನು ದಾಖಲಿಸಿದ್ದಾಳೆ ನಟಿ?

*ಬೈಕ್‌ನಲ್ಲಿರುವಾಗಲೇ ನಟಿಯ ಕಂಡು ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ…*

ಪೊಲೀಸ್ ದೂರಿನಲ್ಲಿ ಏನು ದಾಖಲಿಸಿದ್ದಾಳೆ ನಟಿ?

ಪಣಜಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹಸ್ತಮೈಥುನ ಮಾಡುತ್ತಿದ್ದ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

ಗೋವಾದ ಪಣಜಿಯ ಬ್ಯಾಂಕ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗೋವಾ ಪೊಲೀಸರು ಸೋಮವಾರ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಟಿಯೊಬ್ಬರು ಪೊಲೀಸ್ ದೂರು ದಾಖಲಿಸಿದ್ದು, ರಾತ್ರಿ 10.15 ರ ಸುಮಾರಿಗೆ ತಾನು ಮತ್ತು ತನ್ನ ಸ್ನೇಹಿತ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. “ಆರೋಪಿ ಕೂಡ ದ್ವಿಚಕ್ರ ವಾಹನದಲ್ಲಿದ್ದ. ಆರೋಪಿ ಹಸ್ತಮೈಥುನ ಮಾಡುತ್ತಿದ್ದ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಎಂದು ದೂರುದಾರರು ಹೇಳಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ನಟಿ ಸೋಬಿತಾ ಕುಡ್ತಾರ್ಕರ್‌ ಇನ್ಸ್‌ಟಾಗ್ರಾಮ್‌ನಲ್ಲಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ. ತಾನು ಮತ್ತು ತನ್ನ ಸ್ನೇಹಿತ ಇದರಿಂದ “ಅಸಹ್ಯಗೊಂಡೆವು” ಮತ್ತು “ಮುಖ ಕಿವುಚುತ್ತಾ ಹೋದೆವು” ಅಲ್ಲಿಂದ ಆದಷ್ಟು ವೇಗವಾಗಿ ಓಡಿಹೋದೆವು ಎಂದು ಹೇಳಿದ್ದಾಳೆ. ಈ ಘಟನೆಯ ಬೆನ್ನಲ್ಲಿಯೇ ಆರೋಪಿಗೆ ಎಚ್ಚರಿಕೆ ನೀಡಬೇಕಿತ್ತೋ ಅಥವಾ ಆತನೊಂದಿಗೆ ಗಲಾಟೆ ಮಾಡಬೇಕಿತ್ತೋ ಅನ್ನೋದರ ಯೋಚನೆ ನನಗೆ ಕಾಡಿತ್ತು ಎಂದು ಬರೆದುಕೊಂಡಿದ್ದಾರೆ.