ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ನಾನೆಂಬುದು
ಪುಸ್ತಕ
ನೀನೆಂಬುದು
ನವಿಲುಗರಿ…

೨.
ಸಮುದ್ರ
ಒಣಗಿಸಲು
ಹೊರಟಿದ್ದಾರೆ
ಕೆಲವರು…

ಮುಗುಳ್ನಕ್ಕು
ಕಳಿಸಿ ಕೊಡಿ!

೩.
ರೆಕ್ಕೆಗಳಿಂದಷ್ಟೇ ಹಾರಿ
ಆಕಾಶ
ಮುಟ್ಟಲಾಗುವುದಿಲ್ಲ…

ಮನಸೂ
ಮುಷ್ಠಿಕಟ್ಟಿ ನಿಲ್ಲಬೇಕು
ಹೃದಯವೇ…

– *ಶಿ.ಜು.ಪಾಶ*
8050112067
(31/5/25)