ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಶ್ರೀಮತಿ ಬಲ್ಕೀಷ್ ಬಾನು ಭೇಟಿ;* *ಮೂರು ಹೊತ್ತು ಊಟ, 24 ಗಂಟೆ ನೀರು ನೀಡುವುದರ ಜೊತೆಗೆ ಕೂಡಲೇ ಆಡಳಿತಾಧಿಕಾರಿ ನೇಮಕ* *ಏಪ್ರಿಲ್‌ನಲ್ಲಿ ಚುನಾವಣೆ* *ಮುಸ್ಲಿಂ ಹಾಸ್ಟೆಲ್ ಆವರಣಕ್ಕೆ ಅಲ್ಪಸಂಖ್ಯಾತರ ಇಲಾಖೆ…*

*ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಶ್ರೀಮತಿ ಬಲ್ಕೀಷ್ ಬಾನು ಭೇಟಿ;*

*ಮೂರು ಹೊತ್ತು ಊಟ, 24 ಗಂಟೆ ನೀರು ನೀಡುವುದರ ಜೊತೆಗೆ ಕೂಡಲೇ ಆಡಳಿತಾಧಿಕಾರಿ ನೇಮಕ*

*ಏಪ್ರಿಲ್‌ನಲ್ಲಿ ಚುನಾವಣೆ*

*ಮುಸ್ಲಿಂ ಹಾಸ್ಟೆಲ್ ಆವರಣಕ್ಕೆ ಅಲ್ಪಸಂಖ್ಯಾತರ ಇಲಾಖೆ…*

ಸಮಸ್ಯೆಗಳ ಆಗರವಾಗಿರುವ ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಸಂಬಂಧಿಸಿದಂತೆ ಒಂದು ಆಶಾಕಿರಣ ಕಂಡುಬಂದಿದೆ. ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀಮತಿ ಬಲ್ಕೀಷ್ ಬಾನು ಮುಸ್ಲಿಂ ಹಾಸ್ಟೆಲ್‌ಗೆ ಶನಿವಾರ ಸಂಜೆ ಭೇಟಿ ನೀಡಿ ಕೂಡಲೇ ಅಲ್ಲಿ ಪ್ರತಿನಿತ್ಯ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಇದ್ದ ಸಮಸ್ಯೆಗಳನ್ನು ಆಲಿಸಿ ಏನೇನು ಕೆಲಸವಾಗಬೇಕೆಂದು ಕೂಡಲೇ ಯೋಜನೆ ರೂಪಿಸಿ ನೀಡಬೇಕೆಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದಿನದ 24 ಗಂಟೆಯೂ ನೀರಿನ ವ್ಯವಸ್ಥೆ ಮಾಡಿದ್ದಲ್ಲದೇ, ವಿದ್ಯಾರ್ಥಿಗಳಿಗೆ ಹೊಸ ಹತ್ತು ಸ್ನಾನ-ಶೌಚಗೃಹಗಳ ನಿರ್ಮಾಣಕ್ಕೆ ಶ್ರೀಮತಿ ಬಲ್ಕೀಷ್ ಬಾನುರವರು ಮನಸ್ಸು ಮಾಡಿದ್ದಾರೆ.

ವಿದ್ಯಾರ್ಥಿಗಳು ಉಳಿಯಲು ಇನ್ನೂ ಎರಡು ಕೊಠಡಿಗಳನ್ನು ನಿರ್ಮಿಸಿಕೊಡಲು ಮುಂದಾಗಿದ್ದಾರೆ.
ಈ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಮೂರು ಹೊತ್ತಿನ ಊಟ-ತಿಂಡಿ ವ್ಯವಸ್ಥೆ ಹಾಗೂ ಈ ಹಾಸ್ಟೆಲ್‌ನ ಮೇಲ್ವಿಚಾರಣೆಗೆ ವಾರ್ಡನ್ ನೇಮಿಸಲು ಮನಸ್ಸು ಮಾಡಿರುವ ಎಂಎಲ್‌ಸಿ ಶ್ರೀಮತಿ ಬಲ್ಕೀಷ್ ಬಾನುರವರು, ಅಲ್ಪಸಂಖ್ಯಾತರ ಇಲಾಖೆಯನ್ನು ಇದೇ ಮುಸ್ಲಿಂ ಹಾಸ್ಟೆಲ್‌ನ ಆವರಣಕ್ಕೆ ವರ್ಗಾಯಿಸಿಕೊಂಡು ಈ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಶಿವಮೊಗ್ಗ ಮುಸ್ಲಿಂ ಹಾಸ್ಟೆಲ್‌ಗೆ ಚುನಾವಣೆಯೇ ನಡೆಯದೇ ಎರಡು ವರ್ಷಗಳ ಮೇಲಾಗಿದೆ. ಕೂಡಲೇ ಇಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಲಾಗುವುದು ಹಾಗೂ ಮುಂದಿನ ಏಪ್ರಿಲ್ ತಿಂಗಳೊಳಗೆ ಚುನಾವಣೆ ನಡೆಸಲಾಗುವುದು ಎಂದರು.

ಮಾರ್ಚ್ 2ರಂದು ಸಚಿವ ಮಧು ಬಂಗಾರಪ್ಪರವರ ಜನ್ಮ ದಿನ ಇರುವುದರಿಂದ ಅವರ ಅಭಿಮಾನಿಗಳು ಮುಸ್ಲಿಂ ಹಾಸ್ಟೆಲ್‌ಗೆ ಉಚಿತವಾಗಿ ವಾಟರ್ ಪ್ಯೂರಿ ಫಾಯರ್ ನೀಡಲಿದ್ದು, ಸ್ವತಃ ಮಧು ಬಂಗಾರಪ್ಪರವರೇ ಹಾಸ್ಟೆಲ್ ವಿದ್ಯಾರ್ಥಿಗಳಿಗಾಗಿ ಇದನ್ನು ಅರ್ಪಿಸಲಿದ್ದಾರೆ ಎಂದು ಶ್ರೀಮತಿ ಬಲ್ಕೀಷ್ ಬಾನು ಹೇಳಿದ್ದಾರೆ.