ಸಂಧ್ಯಾ ಕಾಲದಲ್ಲೂ ಭವ್ಯವಾಗಿಯೇ ನಡೆಯುತ್ತಿದೆ ರೆವಿನ್ಯೂ ಲೇ ಔಟ್ ಗಳ ಇ- ಖಾತಾ ದಾಖಲು ಮಾಫಿಯಾ!* ಫೈಲೊಂದಕ್ಕೆ ಎರಡು ಸಾವಿರದ ಕಡಕ್ ನೋಟುಗಳು ಸೇರುತ್ತಿವೆ ವ್ಯಾನಿಟಿ ಬ್ಯಾಗುಗಳಿಗೆ?!

*ಸಂಧ್ಯಾ ಕಾಲದಲ್ಲೂ ಭವ್ಯವಾಗಿಯೇ ನಡೆಯುತ್ತಿದೆ ರೆವಿನ್ಯೂ ಲೇ ಔಟ್ ಗಳ ಇ- ಖಾತಾ ದಾಖಲು ಮಾಫಿಯಾ!*

ಫೈಲೊಂದಕ್ಕೆ ಎರಡು ಸಾವಿರದ ಕಡಕ್ ನೋಟುಗಳು ಸೇರುತ್ತಿವೆ ವ್ಯಾನಿಟಿ ಬ್ಯಾಗುಗಳಿಗೆ?!

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಇ- ಖಾತಾದ್ದೇ ಅವಾಂತರ. ಪ್ರತಿನಿತ್ಯ ಒಂದಲ್ಲಾ ಒಂದು ರಗಳೆಗಳು ಇಲ್ಲಿ ಸಂಭವಿಸುತ್ತಲೇ ಇರುತ್ತವೆ- ಒಂದು ರೀತಿಯಲ್ಲಿ ಸಂಭವಾಮೀ ಯುಗೇ ಯುಗೇ ಥರ!

ಇ- ಖಾತಾ ಆಗಲೆಂದು ರೆವಿನ್ಯೂ ಲೇ ಔಟ್ ಮಾಲೀಕರು ಪಾಲಿಕೆಯ ಮಧ್ಯವರ್ತಿಗಳನ್ನು ಸಂಪರ್ಕಿಸಿ ಡೀಲು ಕುದುರಿಸುತ್ತಿದ್ದಾರೆ. ಮಧ್ಯವರ್ತಿಗಳು ಸಂಧ್ಯಾಕಾಲದ ಭವ್ಯತೆಯ ಬೆನ್ನು ಹತ್ತಿ ಫೈಲಿಗೆ ಎರಡು ಸಾವಿರದಂತೆ ತುಪ್ಪ ಸವರುತ್ತಿದ್ದಾರೆಂದೂ, ಹಾಗಾಗಿ, ಒಂದೆರಡು ದಿನಗಳಲ್ಲೇ ಈ ಫೈಲುಗಳೆಲ್ಲ ಇ- ಖಾತಾಕ್ಕಾಗಿ ಕಂಪ್ಯೂಟರಲ್ಲಿ ದಾಖಲಿಸಲಾಗುತ್ತಿರುವ ಸೋಜಿಗ ಸಂಭವಿಸುತ್ತಿದೆ!

ರೋಲ್ಡ್ ಗೋಲ್ಡ್ ಜಮಾನ ಹೋಗಿ ಇ- ಖಾತಾ ಯೋಜನೆಯಿಂದಾಗಿ ನೈಜ ಚಿನ್ನ ಮೈಮೇಲೇರುತ್ತಿರುವ ಮಹಾ ಬದಲಾವಣೆಯ ನಡುವೆಯೂ ಇಲ್ಲಿ ಸಂಧ್ಯಾಕಾಲದ ಭವ್ಯತೆಗಳ ಪಾಲಿಗಷ್ಟೇ(ತಮ್ಮ ವಾರ್ಡಿನ ಕೆಲಸದ ವ್ಯಾಪ್ತಿಯಲ್ಲಿಲ್ಲವಾದರೂ) ರೆವಿನ್ಯೂ ಲೇ ಔಟ್ ಗಳ ಫೈಲುಗಳು ಕಂಪ್ಯೂಟರ್ ಮೆಟ್ಟಿಲೇರಿ ಛಕ ಛಕಾ ದಾಖಲಾಗುತ್ತಿವೆ!

ಶಿವಮೊಗ್ಗ ಮಹಾನಗರ ಪಾಲಿಕೆಯ ಇಡೀ ರೆವಿನ್ಯೂ ವಿಭಾಗವನ್ನೇ ಎರಡೂ ಕೈಗಳಿಂದ ಬಾಚಿಕೊಂಡು ಕುಳಿತಿರುವ ಸಂಧ್ಯಾಕಾಲದ ಭವ್ಯತೆಗಳೆಲ್ಲ ಈಗಲಾದರೂ ಬುದ್ದಿ ಕಲಿಯುತ್ತವೋ? ಬುದ್ದಿಯನ್ನು ಜನರು ಕಲಿಸಬೇಕೋ? ಅವರವರೇ ಅರ್ಥೈಸಿಕೊಂಡು ಜ್ಞಾನದ ಸೂರ್ಯೋದಯದ ಕಡೆಗೆ ಹೊರಳುವುದು ಒಳ್ಳೆಯದು.

ವಿಷಯಂ ಇಂತಿಪ್ಪಿರುವಾಗ ಪಾಲಿಕೆಯ ವ್ಯಾಪ್ತಿಯಿಂದ ಏಜೆಂಟರನ್ನು ಪಾಲಿಕೆ ಕಾಂಪೋಂಡಿನಿಂದ ಹೊರಕ್ಕೆಸೆಯುವ ಮನಸು ಮಾಡಲಿ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್…