ಬಿಜಿಎಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ

ಬಿಜಿಎಸ್ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ

ಧಾರವಾಡ: ವಿಕಾಸ ನಗರದ ಹೇಮಗಿರಿ ಹಾಗೂ ಧಾರವಾಡ ಶಾಖೆಯ ಕಾರ್ಯದರ್ಶಿ ಸಾರ್ಥಕ ಸೇವರತ್ನ ಕನ್ನಡ ರಾಜ್ಯೋತ್ಸವ ಪುರಸ್ಕೃತರಾದ ಡಾ. ಜೆ ಎನ್ ರಾಮಕೃಷ್ಣೇಗೌಡರ ಉಪಸ್ಥಿತಿಯಲ್ಲಿ ಸರ್ ಸಿ ವಿ ರಾಮನ್ ರವರ ಹುಟ್ಟುಹಬ್ಬದ ಸವಿನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಬಿಜಿಎಸ್ ಎಜುಕೇಶನ್ ಸೆಂಟರ್ ನಲ್ಲಿ ಆಚರಿಸಲಾಯಿತು.

ಪೋಷಕರ ಹಾಗೂ ಶಿಕ್ಷಕರ ಮಾರ್ಗದರ್ಶನದೊಂದಿಗೆ ಮಕ್ಕಳಲ್ಲಿರುವ ಸರ್ವಾಂಗಿನ ಬೆಳವಣಿಗೆಗಾಗಿ ಬಿಜಿಎಸ್ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ಏರ್ಪಡಿಸಿದ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವುದರ ಮೂಲಕ ವಿದ್ಯಾರ್ಥಿಗಳು ಪ್ರತಿಭೆಯನ್ನು ತೋರಿದರು.

ಕಾರ್ಯಕ್ರಮದಲ್ಲಿ ಪ್ರಾಚೀನ ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ಆಧುನಿಕ ವೈಜ್ಞಾನಿಕ ವಿಜ್ಞಾನ ಮಾದರಿಗಳು, ಆಹಾರ ಮತ್ತು ಕೃಷಿ ಹಾಗೂ ತಂತ್ರಜ್ಞಾನ ಸಂಬಂಧಪಟ್ಟ ವಿಚಾರಗಳಷ್ಟೇ ಅಲ್ಲದೆ ಮಕ್ಕಳಲ್ಲಿರುವ ಸೃಜನಾತ್ಮಕ ಕೌಶಲ್ಯಗಳನ್ನು ಹೊರ ಹಾಕಲು ಸೂಕ್ತವಾದ ವೇದಿಕೆಯೆಂದು ಕಾರ್ಯದರ್ಶಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ,ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು