ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅಕ್ರಮಗಳು-2* *ವೈದ್ಯರನ್ನು ಸೃಷ್ಟಿಸಲು ಹೊರಟಿದ್ದ ದೇಶ್ ನೀಟ್ ಅಕಾಡೆಮಿಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ!* *ಅಹಂಕಾರ ಮತ್ತು ಅವಾಂತರಗಳಲ್ಲೇ ಮುಳುಗುತ್ತಿದೆಯೇ ಉಜ್ವಲಗೊಳ್ಳಬೇಕಿದ್ದ ದೇಶ್ ನೀಟ್ ಅಕಾಡೆಮಿ!*
*ಶಿವಮೊಗ್ಗದ ದೇಶ್ ನೀಟ್ ಅಕಾಡೆಮಿ ಅಕ್ರಮಗಳು-2*
*ವೈದ್ಯರನ್ನು ಸೃಷ್ಟಿಸಲು ಹೊರಟಿದ್ದ ದೇಶ್ ನೀಟ್ ಅಕಾಡೆಮಿಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ!*
*ಅಹಂಕಾರ ಮತ್ತು ಅವಾಂತರಗಳಲ್ಲೇ ಮುಳುಗುತ್ತಿದೆಯೇ ಉಜ್ವಲಗೊಳ್ಳಬೇಕಿದ್ದ ದೇಶ್ ನೀಟ್ ಅಕಾಡೆಮಿ!*
ದೇಶ್ ನೀಟ್ ಅಕಾಡೆಮಿ ಮ್ಯಾನೇಜಿಂಗ್ ಡೈರೆಕ್ಟರ್ ಮಿಸ್ಟರ್ ಅವಿನಾಶ್ ಎ.ಆರ್. ಕೇವಲ ಓರ್ವ ಸಾಮಾನ್ಯ ವ್ಯಕ್ತಿಯಲ್ಲ…ಅವರು ಫಿಸಿಕ್ಸ್ ಸೀನಿಯರ್ ಫ್ಯಾಕಲ್ಟಿ ಕೂಡ! ಜೊತೆಗೆ ಶಿವಮೊಗ್ಗದಲ್ಲಿ ಐದು ಕಡೆ ವಿಧಾತ್ರಿ ಭವನದಂಥ ಪ್ರಸಿದ್ಧ ಹೋಟೆಲ್ ಗಳನ್ನು ನಡೆಸುತ್ತಿರುವವರು!!
ಇಂಥ ಅತೀ ಬುದ್ದಿವಂತ ಅವಿನಾಶ್ ರವರು ದೇಶ್ ನೀಟ್ ಅಕಾಡೆಮಿ ಆರಂಭಿಸುವ ಮುನ್ನ ಯಾವ ಯಾವ ಇಲಾಖೆಗಳ ಅನುಮತಿಗಳನ್ನು ಪಡೆದುಕೊಳ್ಳಬೇಕಿತ್ತು? ಎಂಬ ಸಣ್ಣ ಹೋಂ ವರ್ಕ್ ಕೂಡ ಮಾಡಿರಲಿಲ್ಲ ಎನಿಸಿದರೆ ಆಶ್ಚರ್ಯವಾಗುತ್ತೆ!
ಶಿವಮೊಗ್ಗದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ದ ಉಪ ನಿರ್ದೇಶಕರಿಗೆ 18/12/2024 ರಂದು ಒಂದು ಲಿಖಿತ ಪತ್ರ ಬರೆಯುತ್ತಾರೆ.
*… ದೇಶ್ ನೀಟ್ ಅಕಾಡೆಮಿಯು ನೀಟ್ ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ನೀಡುತ್ತಿದ್ದು, ಇಲಾಖೆಯಿಂದ ಅಧಿಕೃತವಾಗಿ ಅನುಮತಿಯನ್ನು ಪಡೆಯಬೇಕೆಂಬ ಮಾಹಿತಿಯ ಕೊರತೆಯಿಂದ ಅನುಮತಿಯನ್ನು ಪಡೆದಿರುವುದಿಲ್ಲ. ಈ ವಿಷಯ ತಿಳಿದ ಕೂಡಲೇ ಈ ಅನುಮತಿಯನ್ನು ಪಡೆಯಲು ಬೇಕಾದ ಎಲ್ಲಾ ರೀತಿಯ ದಾಖಲೆಗಳನ್ನು ಒದಗಿಸಿ ಅನುಮತಿಯನ್ನು ಪಡೆಯುತ್ತೇವೆ.*
ಮಿಸ್ಟರ್ ಅವಿನಾಶ್ ರವರು ಶಿವಮೊಗ್ಗದ ಐದೈದು ಕಡೆಗಳಲ್ಲಿ ವಿಧಾತ್ರಿ ಭವನದಂಥ ಹೋಟೆಲ್ ಗಳನ್ನು ನಡೆಸುತ್ತಿದ್ದಾರೆ. ಓರ್ವ ಯಶಸ್ವಿ ಹೋಟೆಲ್ ಉದ್ಯಮಿ. ಒಂದು ಉದ್ಯಮ( ಕೋಚಿಂಗ್ ಕೂಡ ಉದ್ಯಮವಲ್ಲವೇ?!) ಆರಂಭಿಸುವ ಮುನ್ನ ಸಂಬಂಧಿಸಿದ ಇಲಾಖೆಗಳಿಂದ ಅನುಮತಿಗಳನ್ನು ಪಡೆದುಕೊಳ್ಳಬೇಕು. ವಿಧಾತ್ರಿ ಭವನಗಳ ಆರಂಭಕ್ಕೆ ಅವರು ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದಿದ್ದಾರೆಂಬುದು ಇಲ್ಲಿ ಅನಾವಶ್ಯಕ. ಆದರೆ, ದೇಶ್ ನೀಟ್ ಅಕಾಡೆಮಿ ಆರಂಭಿಸಿ ಕೋಚಿಂಗ್ ನೀಡಲು ಕನಿಷ್ಠ ಪಕ್ಷ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆಯ ಅನುಮತಿಯನ್ನಾದರೂ ಪಡೆಯಬೇಕಿತ್ತು.
ಆಗ ಮಿಸ್ಟರ್ ಅವಿನಾಶ್ ರವರ ಜೊತೆ ಪಥನಿ ವರದರಾಜಯ್ಯ, ಅರಳೀಕೊಪ್ಪ ರಮೇಶ್ ನವೀನ್ ಕುಮಾರ್, ಸಿರಿಬೈಲ್ ಕೊಲ್ಲೂರೇ ಗೌಡ ಧರ್ಮೇಶ್ ರವರೆಲ್ಲ ಇದ್ದರು. ಈಗ ಯಾರು ಯಾರಿದ್ದಾರೆ? ಯಾರು ಜೊತೆ ತೊರೆದಿದ್ದಾರೆ? ಅವರ ಬದಲಿಗೆ ಮತ್ಯಾರು ಬಂದಿದ್ದಾರೆ? ಆ ಮಾಹಿತಿಯನ್ನು ಈಗಲೂ ದೇಶ್ ನೀಟ್ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಮಿಸ್ಟರ್ ಅವಿನಾಶ್ ಎ.ಆರ್. ರವರೇ ಹೇಳಬೇಕು.
Long term NEET ತರಬೇತಿ ನೀಡಿ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ವೈದ್ಯರನ್ನಾಗಿಸಲು ಹೊರಟಿದ್ದ ದೇಶ್ ನೀಟ್ ಅಕಾಡೆಮಿಯ ಮಿಸ್ಟರ್ ಅವಿನಾಶ್ ರವರಿಗೆ ಇಂಥ ದೊಡ್ಡ ಕೋಚಿಂಗ್ ಸೆಂಟರಿಗೆ ಪಿಯು ಇಲಾಖೆಯ ಒಂದು ಅನುಮತಿ ಪಡೆಯಬೇಕೆಂಬ ಕನಿಷ್ಠ ಜ್ಞಾನ ಇಲ್ಲದೇ ಹೋದದ್ದು ದುರಂತವೇ ಸೈ! ಇಂಥ ಕನಿಷ್ಠ ಜ್ಞಾನ ಇಲ್ಲದವರ ಕೈಗೆ ಮಕ್ಕಳು ಸಿಕ್ಕು ಈ ಸಮಾಜಕ್ಕೆ ಅದೆಂಥ ವೈದ್ಯರು ಸಿಗಲು ಸಾಧ್ಯವಿತ್ತು?