ಕುವೆಂಪು ವಿವಿ: ಮಹಿಳಾ ದಿನಾಚರಣೆ ಕಾರ್ಯಕ್ರಮ* *ಲೈಂಗಿಕ ದೌರ್ಜನ್ಯ ಮಹಿಳೆಯರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ: ಡಾ. ಅನಲ*

*ಕುವೆಂಪು ವಿವಿ: ಮಹಿಳಾ ದಿನಾಚರಣೆ ಕಾರ್ಯಕ್ರಮ*

*ಲೈಂಗಿಕ ದೌರ್ಜನ್ಯ ಮಹಿಳೆಯರನ್ನು ಮಾನಸಿಕವಾಗಿ ಘಾಸಿಗೊಳಿಸುತ್ತದೆ: ಡಾ. ಅನಲ*

ಶಂಕರಘಟ್ಟ

: ಲೈಂಗಿಕ ದೌರ್ಜನ್ಯ ಹಿಂಸಾರಹಿತವಾಗಿರುತ್ತದೆ. ಆ ಕ್ರಿಯೆಯಲ್ಲಿ ಭೌತಿಕ ಹಿಂಸೆ ಇಲ್ಲದಿದ್ದರೂ, ಮಾನಸಿಕವಾಗಿ ಹೆಣ್ಣನ್ನು ಘಾಸಿಗೊಳಿಸುತ್ತದೆ ಎಂದು ಸಿಆರ್ ಬಿ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ಅನಲ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

19(1)(g) ಪ್ರಕಾರ ಮಹಿಳೆ ಕರ್ತವ್ಯ ನಿರ್ವಹಿಸಲು ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡುವ ಜವಾಬ್ದಾರಿ ಪ್ರತಿಯೊಂದು ಸಂಸ್ಥೆಯ ಮೇಲಿರುತ್ತದೆ. ಕೆಲಸದ ಸ್ಥಳದಲ್ಲಿ ದೌರ್ಜನ್ಯ ನಡೆಯದ ಹಾಗೆ ಕ್ರಮ ಕೈಗೊಳ್ಳಬೇಕು.

ಮಹಿಳೆ ಸಮ್ಮತಿಸುವ ಸಂಬಂಧ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ. ಆದರೆ ಮಹಿಳೆಯರ ಸಮ್ಮತಿಯಿಲ್ಲದಿದ್ದರೂ ವೃತ್ತಿ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ನಡೆದರೆ ಅಲ್ಲಿ ವೃತ್ತಿ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಬಹಳ ಸಲ ದೌರ್ಜನ್ಯ ಆಗುತ್ತಿದ್ದರೂ, ಇದು ಕಾನೂನು ಪ್ರಕಾರ ತಪ್ಪಾಗಿದ್ದರೂ, ಆ ಬಗ್ಗೆ ಮಹಿಳೆಗೆ ತಿಳಿಯದೆ ಇರುವ ಸಂದರ್ಭ ಇರುತ್ತದೆ. ಹೀಗಾಗಿ ಸಂಸ್ಥೆ ಮಹಿಳೆಯರಿಗೆ ಪೂರಕವಾದ ವಾತಾವರಣ ನಿರ್ಮಿಸಬೇಕಿದೆ ಎಂದರು.

ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿವಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣವಿದೆ. “ನಾನು ವಿವಿಯಲ್ಲಿ ಇರುವ ತನಕ ವಸ್ತ್ರ ಸಂಹಿತೆ ಇರುವುದಿಲ್ಲ. ಮಹಿಳೆಯರ ಆಯ್ಕೆಗೆ ಗೌರವ ಕೊಡವುದು ಪ್ರತಿಯೊಬ್ಬ ವ್ಯಕ್ತಿ ಮತ್ತ ಸಂಸ್ಥೆಯ ಕರ್ತವ್ಯ ಎಂದರು.

ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಡಾ. ಹೀನಾ ಕೌಸರ್, ಡಾ. ಇಟ್ಟೆ ಪುಷ್ಪವತಿ, ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.