ಶಂಕರ ಸಾವು ಕಂಡಿದ್ದಾನೆ;😞* *ದಾನಿಗಳಿಗೆ ಧನ್ಯವಾದಗಳು🙏*
*ಶಂಕರ ಸಾವು ಕಂಡಿದ್ದಾನೆ;😞*
*ದಾನಿಗಳಿಗೆ ಧನ್ಯವಾದಗಳು🙏*

ಶಿವಮೊಗ್ಗದ 27 ನೇ ವಾರ್ಡಿನ ಮಿಳಘಟ್ಟದ ವಾಸಿ, ಉಸಿರಾಟದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಯುವಕ ಶಂಕರ ಜೀವನ್ಮರಣದ ಭೀಕರ ಹೋರಾಟ ನಡೆಸಿ ಸಾವು ಕಂಡಿದ್ದಾನೆ.
ಶಂಕರ ಓಡಾಡಲಾರದ ಸ್ಥಿತಿ ತಲುಪಿಬಿಟ್ಟಿದ್ದ. ಆತನ ಶ್ವಾಸಕೋಶ ಶೇ.70 ರಷ್ಟು ನಾಶವಾಗಿತ್ತು. ಆಕ್ಸಿಜನ್ ಸಿಲಿಂಡರ್ ಇಲ್ಲದೇ ಅವನು ಉಸಿರಾಡಲು ಸಾಧ್ಯವೇ ಇರಲಿಲ್ಲ. ಒಂದು ಕಡೆ ಇಷ್ಟೆಲ್ಲ ಜೀವನ್ಮರಣದ ಹೋರಾಟ, ಇನ್ನೊಂದು ಕಡೆ ನೋಡಿಕೊಳ್ಳಲು ಶಂಕರಮ್ಮ ಬಿಟ್ಟರೆ ಮತ್ಯಾರೂ ಇಲ್ಲದ ದುಸ್ಥಿತಿ. ಶಂಕರಮ್ಮ ಕೂಡ ಬಿಪಿ ಶುಗರ್ ಹೆಚ್ಚಾಗಿ ಬಳಲುತ್ತಿರುವ ಪೇಷಂಟ್.
ಇಂಥ ಸಂದರ್ಭದಲ್ಲಿ ಆ ಕುಟುಂಬಕ್ಕೆ ನಾನೊಬ್ಬನೇ ಆರ್ಥಿಕವಾಗಿ ಬೆಂಬಲಿಸಲು ಸಾಧ್ಯವಾಗದೇ ಗೆಳೆಯರಲ್ಲಿ ವಿನಂತಿಸಿದೆ. ಬಹಳಷ್ಟು ಜನ ಅವರ ಅಕೌಂಟಿಗೆ, ಕೈಗೆ ನಗದು ಜಮೆ ಮಾಡಿ ಸಹಕರಿಸಿದರು. ಹಲವರು ಬೇರೆ ಬೇರೆ ರೀತಿಯಲ್ಲಿ ಸಹಕರಿಸಿದರು.
ಆದರೆ, ಕೊನೆಗೂ ಅವನಿಗೆ ಬಹಳ ಅನಿವಾರ್ಯವಾಗಿದ್ದ ಕರೆಂಟ್ ಹೋದರೆ ಉಸಿರಾಡಲು ಬಹು ಅನಿವಾರ್ಯವಾಗಿದ್ದ ಯುಪಿಎಸ್-ಬ್ಯಾಟರಿಯ ಸಂಪೂರ್ಣ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಯುಪಿಎಸ್ ಸಿಕ್ಕರೂ ದುಬಾರಿ ಬ್ಯಾಟರಿ ಕೊಡಲು ದಾನಿಗಳು ಸಿಗಲೇ ಇಲ್ಲ!
ಈಗ ಶಂಕರ ಇಲ್ಲ. ಮಾ.27 ರ ಬೆಳಗಿನ ಜಾವದಲ್ಲಿ ಉಸಿರು ನಿಲ್ಲಿಸಿದ್ದಾನೆ. ದೇಹ ಎಂಬ ನರಕದಿಂದ ಜೀವ ತೆಗೆದುಕೊಂಡು ಸಾವಿಗೆ ಶರಣಾಗಿದ್ದಾನೆ.
ಅವನನ್ನು ಬದುಕಿಸಿಕೊಳ್ಳುವ ಪ್ರಯತ್ನದಲ್ಲಿ ಕೈ ಜೋಡಿಸಿದ ಎಲ್ಲ ದಾನಿಗಳಿಗೂ, ಹೃದಯವಂತರಿಗೂ ಅವನ ಪರವಾಗಿ ಧನ್ಯವಾದಗಳು🙏
– *ಶಿ.ಜು.ಪಾಶ*
8050112067
(27/3/25)