ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನೆಮಾ ಟಿಕೆಟ್ ಬೆಲೆ ಗಗನಕ್ಕೆ;* *ಗರಿಷ್ಠ 2200₹ ಬೆಲೆಗೆ ಮಾರಾಟವಾಗ್ತಿದೆ ಟಿಕೆಟ್!*
*ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನೆಮಾ ಟಿಕೆಟ್ ಬೆಲೆ ಗಗನಕ್ಕೆ;*
*ಗರಿಷ್ಠ 2200₹ ಬೆಲೆಗೆ ಮಾರಾಟವಾಗ್ತಿದೆ ಟಿಕೆಟ್!*
ಸಲ್ಮಾನ್ ಖಾನ್ (Salman Khan) ನಟನೆಯ ‘ಸಿಖಂಧರ್’ ಸಿನಿಮಾ ಮಾರ್ಚ್ 30 ರಂದು ಬಿಡುಗಡೆ ಆಗುತ್ತಿದೆ. ಕೆಲ ದಿನಗಳ ಹಿಂದೆಯೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, 50 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಮುಂಚಿತವಾಗಿ ಬುಕಿಂಗ್ ಆಗಿವೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ‘ಸಿಖಂಧರ್’ ಸಿನಿಮಾದ ಟಿಕೆಟ್ ಬೆಲೆಯ ಬಗ್ಗೆ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮುಂಬೈನಲ್ಲಿ ‘ಸಿಖಂಧರ್’ ಸಿನಿಮಾ ಟಿಕೆಟ್ ಬೆಲೆಗಳು ಗಗನಕ್ಕೇರಿವೆ ಎಂಬ ದೂರು ಕೇಳಿ ಬರುತ್ತಿವೆ. ಬೆಂಗಳೂರಿನಲ್ಲಿಯೂ ಕೆಲ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ಬಲು ದುಬಾರಿಯಾಗಿದೆ.
ಮುಂಬೈನಲ್ಲಿ ‘ಸಿಖಂಧರ್’ ಸಿನಿಮಾದ ಗರಿಷ್ಟ ಟಿಕೆಟ್ ಬೆಲೆ ಬರೋಬ್ಬರಿ 2200 ರೂಪಾಯಿಗಳಿವೆ. ಕನಿಷ್ಟ ಟಿಕೆಟ್ ಬೆಲೆ ಮಲ್ಟಿಪ್ಲೆಕ್ಸ್ಗಳಲ್ಲಿ 350 ರಿಂದ ಪ್ರಾರಂಭವಾಗುತ್ತಿದೆ. ಈದ್ ಹಬ್ಬದ ಪ್ರಯುಕ್ತ ‘ಸಿಖಂಧರ್’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಟಿಕೆಟ್ ದರಗಳು ಬಲು ದುಬಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರ 200-250 ರೂಪಾಯಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿಯೂ ಸಹ ಹಲವೆಡೆ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಆಗುತ್ತಿದೆ. ಬೆಂಗಳೂರಿನಲ್ಲಿ ‘ಸಿಖಂಧರ್’ ಸಿನಿಮಾದ ಗರಿಷ್ಠ ಟಿಕೆಟ್ ಬೆಲೆ 1050 ರೂಪಾಯಿಗಳಿವೆ. ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ಬೆಲೆ 250-300-500 ರವರೆಗೆ ಇವೆ. ಕೆಲವು ಚಿತ್ರಮಂದಿರದಲ್ಲಿ 190-200 ಕ್ಕೂ ಟಿಕೆಟ್ ಮಾರಾಟವಾಗುತ್ತಿವೆ. ಬೆಂಗಳೂರಿನಲ್ಲಿ ‘ಸಿಖಂಧರ್’ ಸಿನಿಮಾಕ್ಕೆ ಭಾರಿ ಸಂಖ್ಯೆಯ ಸ್ಕ್ರೀನ್ಗಳನ್ನು ನೀಡಲಾಗಿದ್ದು, ಅಡ್ವಾನ್ಸ್ ಬುಕಿಂಗ್ ಸಹ ಜೋರಾಗಿಯೇ ನಡೆದಿದೆ.
ಇದೇ ಸಮಯದಲ್ಲಿ ಮಾಧ್ಯಮಗಳೊಟ್ಟಿಗೆ ಸಿನಿಮಾಗಳ ಟಿಕೆಟ್ ದರಗಳ ಬಗ್ಗೆ ಮಾತನಾಡಿರುವ ಸಲ್ಮಾನ್ ಖಾನ್, ಇಡೀ ದೇಶದಲ್ಲಿ ಸಿನಿಮಾ ಟಿಕೆಟ್ ದರದಲ್ಲಿ ಏಕರೂಪತೆ ಬರಬೇಕು ಅದು ಮಾತ್ರವೇ ಅಲ್ಲದೆ ಮಾಲ್ಗಳಲ್ಲಿ ಸಿಗುವ ಆಹಾರ ಮತ್ತು ಪಾನೀಯಗಳ ಬೆಲೆಗಳ ಇಳಿಕೆ ಆಗಬೇಕು ಎಂದಿದ್ದಾರೆ. ಕರ್ನಾಟಕ ಸರ್ಕಾರದ ಇತ್ತೀಚೆಗಿನ ಆದೇಶವನ್ನು ಸಹ ಅವರು ಉಲ್ಲೇಖಿಸಿದ್ದು, ಅದು ಒಳ್ಳೆಯದೇ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಸಿಖಂಧರ್’ ಸಿನಿಮಾನಲ್ಲಿ ಸಲ್ಮಾನ್ ಖಾನ್ ಜೊತೆಗೆ ರಶ್ಮಿಕಾ ಮಂದಣ್ಣ ಸಹ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ತಮಿಳಿನ ಖ್ಯಾತ ನಿರ್ದೇಶಕ ಎಆರ್ ಮುರುಗದಾಸ್, ಸಾಜಿದ್ ನಾಡಿಯಾವಾಲ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಕಾಜಲ್ ಅಗರ್ವಾಲ್, ಕಟ್ಟಪ್ಪ ಸತ್ಯರಾಜ್, ಸುನಿಲ್ ಶೆಟ್ಟಿ ಇನ್ನೂ ಹಲವರು ನಟಿಸಿದ್ದಾರೆ.