ಆ ಆನ್ ಲೈನ್ ಗೇಮ್ ಯಾವುದು?;* *ಶಾಲಾ ಮಕ್ಕಳೇಕೆ ಸಾಮೂಹಿಕವಾಗಿ ಕೈ ಕೊಯ್ದುಕೊಳ್ಳುತ್ತಿದ್ದಾರೆ?* *ಎಲ್ಲಾ ಮಕ್ಕಳ ಕೈ ಮೇಲೂ ಒಂದೇ ರೀತಿಯ ಗಾಯ!*

*ಆ ಆನ್ ಲೈನ್ ಗೇಮ್ ಯಾವುದು?;*

*ಶಾಲಾ ಮಕ್ಕಳೇಕೆ ಸಾಮೂಹಿಕವಾಗಿ ಕೈ ಕೊಯ್ದುಕೊಳ್ಳುತ್ತಿದ್ದಾರೆ?*

*ಎಲ್ಲಾ ಮಕ್ಕಳ ಕೈ ಮೇಲೂ ಒಂದೇ ರೀತಿಯ ಗಾಯ!*

ಗುಜರಾತ್​ನ ಬನಸ್ಕಾಂತ ಜಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಹಲವು ಮಕ್ಕಳು ಕೈಗಳನ್ನು ಕೊಯ್ದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಕೆಲವು ದಿನಗಳ ಹಿಂದಷ್ಟೇ ಅಮ್ರೇಲಿಯ ಶಾಲೆಯೊಂದರಲ್ಲೂ 40 ವಿದ್ಯಾರ್ಥಿಗಳು ಕೈಗಳನ್ನು ಕೊಯ್ದುಕೊಂಡಿದ್ದರು. ಹಾಗಾಗಿ ಈ ಘಟನೆ ಶಿಕ್ಷಣ ಇಲಾಖೆಯ ನಿದ್ದೆಗೆಡಿಸಿದೆ.

ಬನಸ್ಕಾಂತದಲ್ಲಿರುವ ರಾಜ್​ಪುರ ಪ್ರಾಥಮಿಕ ಶಾಲೆಯ ಹಲವು ಮಕ್ಕಳು ಒಟ್ಟಿಗೆ ಕೈಕೊಯ್ದುಕೊಂಡಿರುವ ಆತಂಕಕಾರಿ ಘಟನೆ ನಡೆದಿದೆ. ಜಿಲ್ಲಾ ಶಿಕ್ಷಣ ಅಧಿಕಾರಿಯ ಸೂಚನೆಯ ಮೇರೆಗೆ, ಇಡೀ ವಿಷಯದ ಬಗ್ಗೆ ಸಮಗ್ರ ತನಿಖೆಯನ್ನು ಪ್ರಾರಂಭಿಸಲಾಗಿದೆ. ಮಕ್ಕಳಿಗೆ ಶಿಕ್ಷಣ ಇಲಾಖೆ ಮತ್ತು ಮಕ್ಕಳ ರಕ್ಷಣಾ ಇಲಾಖೆಯಿಂದ ಕೌನ್ಸೆಲಿಂಗ್ ನೀಡಲಾಗಿದೆ.

ಯಾವುದೋ ಗೇಮ್ ಆಡುವ ನೆಪದಲ್ಲಿ ಮಕ್ಕಳು ಕೈಗಳನ್ನು ಕೊಯ್ದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಮಕ್ಕಳು ಮೊಬೈಲ್ ಫೋನ್‌ಗಳು, ಆನ್‌ಲೈನ್ ಆಟಗಳು ಮತ್ತು ಹಿಂಸಾತ್ಮಕ ಚಟುವಟಿಕೆಗಳಿಂದ ದೂರವಿರಲು ಸೂಚಿಸಲಾಗಿದೆ ಎಂದು ಡಿಪಿಒ ತಿಳಿಸಿದ್ದಾರೆ. ಆನ್‌ಲೈನ್ ಗೇಮಿಂಗ್‌ನ ಅನುಮಾನದ ಮೇಲೆ ದಿಸಾ ರೂಲರ್ ಪೊಲೀಸರು ಕೂಡ ತನಿಖೆಗೆ ಸೇರಿಕೊಂಡಿದ್ದಾರೆ.

ಇದಕ್ಕೂ ಮೊದಲು, ಅಮ್ರೇಲಿ ಜಿಲ್ಲೆಯಲ್ಲಿ 40 ವಿದ್ಯಾರ್ಥಿಗಳು ತಮ್ಮ ಕೈಗಳನ್ನು ಕೊಯ್ದುಕೊಂಡಿದ್ದಾರೆ ಎಂದು ವರದಿಯಾಗಿತ್ತು. ಬಾಗಸಾರಾದ ಮೂಂಜಿಯಾಸರ್ ಗ್ರಾಮದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಪೋಷಕರು ಕೇಳಿದಾಗ ವಿದ್ಯಾರ್ಥಿಗಳು ವಿಷಯವನ್ನು ಮುಚ್ಚಿಟ್ಟರು.

ಮೂಂಜಿಯಾಸಾದ ಸರಪಂಚರು ಶಾಲೆಯ ಪ್ರಾಂಶುಪಾಲರಿಗೆ ಇಡೀ ಘಟನೆಯ ಬಗ್ಗೆ ತಿಳಿಸಿದಾಗ ಇಡೀ ವಿಷಯ ಬೆಳಕಿಗೆ ಬಂದಿತು. ಸರಪಂಚ್ ಕೂಡ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಕೆಲವು ವರ್ಷಗಳ ಹಿಂದೆ ಬ್ಲ್ಯೂವೇಲ್​ ಎಂಬ ಆನ್​ಲೈನ್ ಗೇಮ್​ನಿಂದಾಗಿ ಹಲವು ವಿದ್ಯಾರ್ಥಿಗಳು ಅನಾಹುತ ಮಾಡಿಕೊಂಡಿದ್ದರು. ಬ್ಲೇಡ್​ನಿಂದ ಕೈ ಮೇಲೆ ಬ್ಲ್ಯೂವೇಲ್ ರೀತಿಯಲ್ಲಿ ಕೊಯ್ದುಕೊಂಡಿದ್ದರು. ಈಗ ಇನ್ಯಾವುದೋ ಆನ್​ಲೈನ್ ಗೇಮ್​ನಿಂದಾಗಿ ಮಕ್ಕಳಿಗೆ ಈ ಪರಿಸ್ಥಿತಿ ಬಂದಿದೆ. ಹೀಗಾಗಿ ಆ ಗೇಮ್ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.