ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿಕ್ಷಣ ಇಲಾಖೆ ಕುರಿತು ಸಚಿವ ಡಿ.ಸುಧಾಕರ್- ಭೋಜೇಗೌಡ- ಎಸ್ ವಿ ಸಂಕನೂರು ಜೊತೆ ಚರ್ಚಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖಾ ಸಚಿವರಾದ ಎಸ್, ಮಧು ಬಂಗಾರಪ್ಪನವರು ಇಂದು ಬೆಂಗಳೂರಿನ ಸಮಗ್ರ ಶಿಕ್ಷಣ ಕರ್ನಾಟಕ (ಎಸ್.ಎಸ್.ಕೆ) ಭವನದಲ್ಲಿ ಸಚಿವ ಸಂಪುಟ ಸದಸ್ಯರಾದ  ಡಿ. ಸುಧಾಕರ್, ವಿಧಾನಪರಿಷತ್ ಸದಸ್ಯರಾದ  ಎಸ್.ಎಲ್ ಭೋಜೇಗೌಡ್ರು ಹಾಗೂ  ಎಸ್.ವಿ ಸಂಕನೂರು ಅವರೊಂದಿಗೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದರು.

ಬಳಿಕ “ಕರ್ನಾಟಕ ರಾಜ್ಯ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ನೌಕರರ ಬೇಡಿಕೆ”ಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು. ಈ ವೇಳೆ ಅವರ ಮನವಿಗೆ ಸ್ಪಂದಿಸಿ, ಬೇಡಿಕೆಗಳನ್ನು ಈಡೇರಿಸುವ ಕುರಿತು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು.

ಈ ವೇಳೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಿ. ರಶ್ಮಿ ಮಹೇಶ್, ಆಯುಕ್ತರಾದ  ತ್ರಿಲೋಕಚಂದ್ರ, ರಾಜ್ಯ ಯೋಜನಾ ನಿರ್ದೇಶಕರಾದ  ಎಂ.ಕೂರ್ಮರಾವ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.