ಯಶಸ್ವಿಯಾಗುತ್ತಿದೆ ಷೇರು ಮಾರುಕಟ್ಟೆ ತರಬೇತಿ ನೀಡುವ ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿ*

*ಯಶಸ್ವಿಯಾಗುತ್ತಿದೆ ಷೇರು ಮಾರುಕಟ್ಟೆ ತರಬೇತಿ ನೀಡುವ ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿ*

ಶಿವಮೊಗ್ಗ;
ದೇಶ, ವಿಶ್ವದ ಆರ್ಥಿಕತೆ ಅರಿವಿನೊಂದಿಗೆ ಮನೆಯಲ್ಲೆ ಕುಳಿತು ಆದಾಯ ಗಳಿಸುವ ಷೇರು ಮಾರುಕಟ್ಟೆಯ ಎಲ್ಲಾ ಜ್ಞಾನ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಆರಂಭಗೊಂಡ ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿ ಯಶಸ್ವಿಯಾಗುತ್ತಿದ್ದು ನಿತ್ಯ ಅದರ ಕಲಿಕೆಗೆ ಅಪಾರ ಆಸಕ್ತರು ಆಗಮಿಸುತ್ತಿದ್ದಾರೆ ಎಂದು ಶಿವಮೊಗ್ಗ ಟ್ರೇಡಿಂಗ್ ಅಕಾಡೆಮಿಯ ಚಂದ್ರಶೇಖರ್ ನವುಲೆ  ಹಾಗೂ ಹರೀಶ್ ಘಾಟ್ಕೆ ತಿಳಿಸಿದರು.

ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತಾಡುತ್ತಾ, ಕೇವಲ ಮೂರು ದಿನ ಕಲಿತು ನಂತರ ಮನೆಯಲ್ಲಿಯೇ ಕುಳಿತು ದುಡಿಮೆ ಮಾಡುವ, ಸಾಕಷ್ಟು ಆದಾಯ ಗಳಿಸುವ ಅವಕಾಶದ ಷೇರು ಮಾರುಕಟ್ಟೆ ತರಬೇತಿ ನೀಡುವ ತರಬೇತಿ ಕೇಂದ್ರ ಇದೇ ಮೊಟ್ಟಮೊದಲ ಬಾರಿಗೆ ಶಿವಮೊಗ್ಗದ ಪೊಲೀಸ್ ಚೌಕಿಯಲ್ಲಿ ಆರಂಭಗೊಂಡಿದೆಎಂದರು.
ಇದು ಜೂಜಾಟವಲ್ಲ, ಕಾನೂನುಬದ್ದವಾದ ಉತ್ತಮ ಕಂಪನಿಗಳ ಮೇಲೆ ಬಂಡವಾಳ ಹೂಡಿಕೆಯೊಂದಿಗೆ ಲಾಭ ಗಳಿಸಲು ಅಗತ್ಯ ಜ್ಞಾನವನ್ನು ನಿರಂತರವಾಗಿ ನೀಡುವ ಪ್ರಯತ್ನ ಇದಾಗಿದೆ  ಕಲಿಕೆಗೆ ಯಾವುದೇ ಗರಿಷ್ಠ ಪ್ರಮಾಣದ ವಿದ್ಯಾರ್ಹತೆಯ ಅಗತ್ಯವಿಲ್ಲ. ಬುದ್ದಿವಂತಿಕೆ ಅತ್ಯಗತ್ಯ. ತಮ್ಮ ಬಿಡುವಿನ ಸಮಯದಲ್ಲಿ ಸುಲಭವಾಗಿ ದುಡಿಯುವ ಅವಕಾಶ ನೀಡುವಂತಹ ಕೇಂದ್ರ ಸರ್ಕಾರದ ಸೆಬಿ ಆಡಳಿತಕ್ಕೊಳಪಟ್ಟ ಷೇರು ಮಾರುಕಟ್ಟೆಯ ಬಗ್ಗೆ ಸಮಗ್ರ ಪರಿಚಯವನ್ನು ನೀಡುವಂತಹ ತರಬೇತಿ ಕೇಂದ್ರ ಇದಾಗಿದೆ ಎಂದು ಹರೀಶ್ ತಿಳಿಸಿದರು.
ಕೇವಲ ಮೂರು ದಿನ ತರಬೇತಿ ಪಡೆದರೆ ಸಾಕು. ನಂತರ ಅವರಿಗೆ ಯಾವಾಗಲೂ ಅದರ ಯಾವುದೇ ಸಮಸ್ಯೆಗಳಿದ್ದರೂ, ಅವುಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಶಿವಮೊಗ್ಗದ ಯುವ ಪ್ರತಿಭಾನ್ವಿತರಾದ ಚಂದ್ರಶೇಖರ್ ನವುಲೆ, ಹರೀಶ್ ಬಿ. ಹಾಗೂ ಕೆನರಾ ಬ್ಯಾಂಕ್ ನ ನಿವೃತ್ತ ಮ್ಯಾನೇಜರ್ ಜಗದೀಶ್ ಅವರ ತರಬೇತಿಯನ್ನೊಳಗೊಂಡ ಅಕಾಡೆಮಿಯನ್ನು ಆರಂಭಿಸಲಾಗಿದೆ.
ಷೇರು ಮಾರುಕಟ್ಟೆಯ ಬೇಸಿಕ್ ಮಾಹಿತಿ, ಹಣ ವಿನಿಯೋಗ, ಕಂಪನಿಯ ಆಯ್ಕೆ, ಚಾಟ್ ಅನಲಿಸಿಸ್, ಕ್ಯಾಂಡಲ್ ಅನಾಲಿಸಿಸ್ ಹಾಗೂ ಪ್ರಸ್ತುತ ಷೇರು ಮಾರುಕಟ್ಟೆಯ ಸಮಗ್ರ ಮಾಹಿತಿಯನ್ನು ಅತ್ಯಂತ ಸೂಕ್ಷ್ಮ ಹಾಗೂ ಅರ್ಥಗರ್ಭಿತವಾಗಿ ಹೇಳಿಕೊಡುವಂತಹ ತರಬೇತಿ ಕೇಂದ್ರ ಇದಾಗಿದೆ.
ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಇಂತಹ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದ್ದು, ಮಹಿಳೆಯರು ನಿವೃತ್ತ ಉದ್ಯೋಗಿಗಳು ಹಾಗೂ ಯುವಕ, ಯುವತಿಯರು ಇದರ ಪ್ರಯೋಜನ ಪಡೆಯಬಹುದಾಗಿದ್ದು ಮನೆಯಲ್ಲಿಯೇ ಕುಳಿತು ಹಣ ಗಳಿಸುವ ಅವಕಾಶ ಇದಾಗಿದೆ.
ನೀವು ಕೂಡಿಟ್ಟ ಹಣ ವರ್ಷದಿಂದ ವರ್ಷಕ್ಕೆ ಮೌಲ್ಯ ದಾಖಲೆಯ ಪ್ರಕಾರ ಕಡಿಮೆಯಾಗುತ್ತದೆ. ಆದರೆ ಈ ಹಣವನ್ನು ಅತ್ಯಂತ ಜಾಣ್ಮೆಯಿಂದ ಷೇರು ಮಾರುಕಟ್ಟೆಯಲ್ಲಿ ವಿನಿಯೋಗಿಸಿದರೆ, ಅತಿ ಹೆಚ್ಚು ಲಾಭಗಳಿಸುವ ಅವಕಾಶ ಇಲ್ಲಿ ದೊರೆಯುತ್ತದೆ.
ಬ್ಯಾಂಕ್ ನಲ್ಲಿ ಇಡುವ ಎಫ್ ಡಿ, ಎಲ್ ಐ ಸಿ, ಗೋಲ್ಡ್ ಬಡ್ಡಿ ಹಾಗೂ ಇತರ ಕಡೆಯಿಂದ ಬರುವ ಆದಾಯಗಳು ಅತ್ಯಂತ ಕಡಿಮೆ ವಾರ್ಷಿಕ ಬಡ್ಡಿಯ ಪ್ರಮಾಣವನ್ನು ಹೊಂದಿರುತ್ತವೆ. ಮ್ಯೂಚುಯಲ್ ಫಂಡ್ ಮೂಲಕ ಹಾಗೂ ಷೇರುಗಳ ಮೂಲಕ ಅತಿ ಹೆಚ್ಚು ಲಾಭಗಳಿಸುವ ಅವಕಾಶ, ಅದರ ಬಳಕೆ ವಿಧಿವಿಧಾನಗಳ ಬಗ್ಗೆ ಅತ್ಯಂತ ಸುಲಭವಾಗಿ ತಿಳಿಸಿಕೊಡುವ ಕಾರ್ಯ ಮಾಡಲಾಗುತ್ತದೆ.
ಬೆಂಗಳೂರಿನಂತಹ ನಗರಗಳಲ್ಲಿ ಇಂತಹ ಹಲವು ತರಬೇತಿ ಕೇಂದ್ರಗಳಿದ್ದು, ಅವುಗಳ ಪ್ರವೇಶ ಶುಲ್ಕವೇ ಅತಿ ಹೆಚ್ಚಾಗಿರುತ್ತದೆ. ಇಲ್ಲಿ ಅತ್ಯಂತ ಕಡಿಮೆ ದರದಲ್ಲಿ ಷೇರು ಮಾರುಕಟ್ಟೆಯ ಸಮಗ್ರ ವಿಷಯವನ್ನು ಹೇಳಿಕೊಡುವಂತಹ ಕಾರ್ಯವನ್ನು ಶಿವಮೊಗ್ಗದಲ್ಲಿ ಮಾಡಲಾಗಿದೆ.
ಅತ್ಯಂತ ಸುಲಭವಾಗಿ ನಮ್ಮ ಸ್ಥಳಿಯ ಭಾಷೆಯಲ್ಲಿ ಷೇರು ಮಾರುಕಟ್ಟೆಯ ವ್ಯವಹಾರ ಮಾಡುವುದನ್ನು ಹೇಳಿಕೊಡುವ  ತರಬೇತಿ ಕೇಂದ್ರ ಇದಾಗಿದ್ದು, ವಾರದ ಶನಿವಾರದಿಂದ ಸೋಮವಾರದವರೆಗೆ ಬೆಳಗ್ಗೆ 9.45 ರಿಂದ ಸಂಜೆ 4:30ರ ತನಕ ಮೂರು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಶಿವಮೊಗ್ಗ ಪೊಲೀಸ್ ಚೌಕಿ ಆವರಣದಲ್ಲಿರುವ ಅಮರ್ ಗ್ರಾನೈಟ್ ಪಕ್ಕದ ಮಳಿಗೆಯ ಮೊದಲ ಮಹಡಿಯಲ್ಲಿನ ಟ್ರೇಡಿಂಗ್ ಅಕಾಡೆಮಿಯಲ್ಲಿ ಈಗಾಗಲೇ ತಲಾ ಇಪ್ಪತೈದು ಜನರ ನಾಲ್ಕು ಬ್ಯಾಚ್ ಗಳು ಯಶಸ್ವಿಯಾಗಿ ಮುಗಿದಿವೆ. ಬರುವವರ ಬೇಡಿಕೆ ಹೆಚ್ಚಿದೆ,
ಹೆಚ್ಚಿನ ವಿವರಗಳಿಗೆ ಹಾಗೂ ನೋಂದಣಿಗೆ 99167 99555 ಅಥವಾ 90717 77151 ಗೆ ಸಂಪರ್ಕಿಸಬಹುದು.
ಸುದ್ದಿಗೋಷ್ಟಿಯಲ್ಲಿ ಪತ್ರಕರ್ತರಾದ ಗಜೇಂದ್ರ ಸ್ವಾಮಿ ಎಸ್.ಕೆ. ಉಪಸ್ಥಿತರಿದ್ದರು.