ಸಾಸ್ವೆಹಳ್ಳಿ ರಂಗರಾಜ್ ರವರ ಹೊಸ ಕವಿತೆ- ದ್ವಿಮುಖ ನಡೆ!

ದ್ವಿಮುಖ ನಡೆ
************
ಜೀವ‌ಸಖೀ
ನಿನ್ನ ನಡೆಯ
ಒಳತೋಟಿ
ತಿಳಿಯುತ್ತಿಲ್ಲ,

ಒಮ್ಮೊಮ್ಮೆ
ನನ್ನ ಬಳಸಿ
ನಾನೇ ನೀನು
ಎನ್ನುತ್ತೀಯ..

ಮಗದೊಮ್ಮೆ
ಏಕಾಂತದ
ಮೊರೆ‌ಹೋಗಿ
ವಿಮುಖಳಾಗುತ್ತೀ..

ಒಮ್ಮೊಮ್ಮೆ
ಚಡಪಡಿಸಿ
ಬಡಬಡಿಸಿ
ತಾನೇ ಸುಖಿಸುತ್ತೀ..

ಮಗದೊಮ್ಮೆ
ಸ್ನೇಹ ಪ್ರೀತಿ
ಹಗಲಲಿ ತೋರುವ
ಅನುರಾಧಾ
ನಕ್ಷತ್ರ ಎನ್ನುತ್ತೀ..!

**