ಬಂದೇ ಬಿಡ್ತು ಚುನಾವಣೆ* *ಲೋಕಸಭಾ ಚುನಾವಣೆ : ತರಬೇತಿ ಕಾರ್ಯಕ್ರಮ*
*
ಶಿವಮೊಗ್ಗ;
ಮುಂಬರುವ ಲೋಕಸಭಾ ಚುನಾವಣೆಯ ಪ್ರಯುಕ್ತ ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಚುನಾವಣಾ ಕರ್ತವ್ಯಗಳಿಗೆ ನಿಯೋಜನೆಗೊಂಡಿರುವ ಎಫ್‍ಎಸ್ ಟಿ, ಎಸ್‍ಎಸ್‍ಟಿ ಮತ್ತು ಎಂಸಿಸಿ ತಂಡಗಳಿಗೆ 2ನೇ ತರಬೇತಿಯನ್ನು ನೀಡಲಾಯಿತು.
ಮಾಸ್ಟರ್ ಟ್ರೈನರ್ ಶಿವಕುಮಾರ್ ಹಾಗೂ ರವಿಕುಮಾರ್ ಚುನಾವಣಾ ನಿಯೋಜಿತ ಸಿಬ್ಬಂದಿಗಳಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಹೇಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಈಗಿನ ಸಿದ್ದತೆ ಹೇಗಿರಬೇಕೆಂಬ ಕುರಿತು ತರಬೇತಿ ನೀಡಿದರು. ಈ ವೇಳೆ ಚುನಾವಣಾ ತಹಶೀಲ್ದಾರ್ ಮಂಜುನಾಥ್ ಆರ್.ವಿ, ಪೊಲೀಸ್ ಅಧಿಕಾರಿಗಳು, ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಪಾಲ್ಗೊಂಡಿದ್ದರು.
(ಫೋಟೊ ಇದೆ)