ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯ ಬ್ರೋಕರ್ ಅದೆಲ್ಲಿ ಕಾಣೆಯಾದ?!*

*ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯ ಬ್ರೋಕರ್ ಅದೆಲ್ಲಿ ಕಾಣೆಯಾದ?!*

ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿಯ ಬ್ರೋಕರ್ ಮೇ.5 ರ ಕಳೆದ ಸೋಮವಾರದಿಂದ ಕಾಣೆಯಾಗಿದ್ದಾನೆ!

32 ವರ್ಷ ವಯಸ್ಸಿನ ಎಸ್.ಮಹೇಶ್ ಕಾಣೆಯಾದ ಬ್ರೋಕರ್. ಮನೆಯಿಂದ ಕೆಲಸಕ್ಕೆಂದು ಹೋದವನು ಈವರೆಗೂ ನಾಪತ್ತೆ.

ಆತನ ತಂದೆ ಗೋಪಾಲಗೌಡ ಬಡಾವಣೆಯ ವಾಸಿ ಶಿವಲಿಂಗಪ್ಪ ತುಂಗಾನಗರ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದು, 5.6 ಅಡಿ ಎತ್ತರ, ದುಂಡು ಮುಖ, ದೃಢಕಾಯ ಮೈಕಟ್ಟು, ಗೋದಿ ಬಣ್ಣದ ವಿವರ ಸೇರಿದಂತೆ ಎಲ್ಲ ವಿವರ, ಮೊಬೈಲ್ ನಂಬರ್ ಗಳನ್ನು ದಾಖಲಿಸಿದ ವಿವರ ದೂರಿನಲ್ಲಿದೆ.

ಮೇ 6 ರಂದು ದೂರು ನೀಡಲಾಗಿದ್ದು, 243/25ರಂತೆ ಎಫ್ ಐ ಆರ್ ದಾಖಲಾಗಿದೆ.