ಶಿವಮೊಗ್ಗಕ್ಕೆ ಟ್ರಕ್ ಟರ್ಮಿನಲ್ ಕೊಡಿ; ಲಾರಿ ಮಾಲೀಕರ ಹೊಸ ಸದಸ್ಯತ್ವಕ್ಕೂ ಆಹ್ವಾನ- ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಎ. ತಲ್ಕೀನ್ ಅಹ್ಮದ್ ಹೇಳಿದ್ದೇನು?
ಶಿವಮೊಗ್ಗಕ್ಕೆ ಟ್ರಕ್ ಟರ್ಮಿನಲ್ ಕೊಡಿ;
ಲಾರಿ ಮಾಲೀಕರ ಹೊಸ ಸದಸ್ಯತ್ವಕ್ಕೂ ಆಹ್ವಾನ-
ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಎ. ತಲ್ಕೀನ್ ಅಹ್ಮದ್ ಹೇಳಿದ್ದೇನು?
ಶಿವಮೊಗ್ಗ : ಶಿವಮೊಗ್ಗ ನಗರಕ್ಕೆ ಟ್ರಕ್ ಟರ್ಮಿನಲ್ (ಲಾರಿನಿಲ್ದಾಣ) ಬೇಕು ಎಂದು ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಎ. ತಲ್ಕೀನ್ ಅಹ್ಮದ್ ಆಗ್ರಹಿಸಿದ್ದಾರೆ.
ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಲಾರಿ ಮತ್ತು ಇತರ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚು ತ್ತಿದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ಲಾರಿಗಳಿವೆ. ಈ ಲಾರಿಗಳನ್ನು ನಿಲ್ಲಿಸಿಕೊಳ್ಳು ವುದೇ ಕಷ್ಟವಾಗುತ್ತಿದೆ. ಈ ಬಗ್ಗೆ ಹಲವು ಭಾರಿ ಪ್ರಾದೇಶಿಕ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಧಿಕಾರಿಗಳಿಗೆ ಮನವಿಮಾಡಿ ಲಾರಿ ನಿಲ್ಲಿಸಲು ಜಾಗಕೊಡಿ ಎಂದು ಕೇಳಿದ್ದೇವೆ. ಆದರೂ ಕೂಡ ಶಿವಮೊಗ್ಗದಲ್ಲಿ ಇದೂ ವರೆಗೂ ಲಾರಿ ಪಾರ್ಕಿಂಗ್ ಆಗಿಲ್ಲ ಎಂದು ದೂರಿದರು.
ಲಾರಿಗಳನ್ನು ರಸ್ತೆಯಲ್ಲಿಯೇ ನಿಲ್ಲಿಸಬೇಕಾದ ಪರಿಸ್ಥಿತಿಯಿದೆ ಇದರಿಂದ ಲಾರಿ ಕಳ್ಳತನವೂ ಆಗುತ್ತದೆ. ಜೊತೆಗೆ ಲಾರಿಯ ಲ್ಲಿರುವ ವಸ್ತುಗಳ ಕಳ್ಳತನವೂ ಆಗುತ್ತದೆ. ಮತ್ತು ಪೊಲೀಸರ ಕಾಟವೂ ಇದೆ. ಈ ಎಲ್ಲಾ ದೃಷ್ಟಿಗಳಿಂದ ಲಾರಿ ಪಾರ್ಕಿಂಗ್ ಬೇಕಾಗಿದೆ. ಈ ಹಿಂದೆ ತೇವರ ಚಟ್ನಹಳ್ಳಿಯಲ್ಲಿ ಜಾಗ ಗುರುತಿಸಿ ದ್ದರು. ಆದರೆ ಅದು ಏನಾಯಿ ತೆಂದು ಗೊತ್ತಾಗಲಿಲ್ಲ. ಯಾವ ಸರ್ಕಾರವೂ ಕೂಡ ನಮ್ಮ ಸಮ ಸ್ಯೆಗೆ ಸ್ಪಂದಿಸಿಲ್ಲ. ಈಗಲಾದರೂ ಸರ್ಕಾರ ಅಥವಾ ಜಿಲ್ಲಾಡಳಿತ ತಕ್ಷಣವೇ ನಗರದ ಟ್ರಕ್ ಟರ್ಮಿನಲ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಲಾರಿ ಮಾಲೀಕರ ಸಂಘ ದಲ್ಲಿ ೧೧ ಜನ ಕಾರ್ಯಕಾರಿ ಸಮಿತಿ ಇತ್ತು. ಕೆಲವರು ಈಗ ನಿಧನರಾಗಿದ್ಧಾರೆ. ಮತ್ತೆ ಕೆಲ ವರು ತಟಸ್ಥರಾಗಿದ್ದಾರೆ. ಆದ್ದ ರಿಂದ ಹೊಸಸಮಿತಿ ರಚಿಸ ಬೇಕಾಗಿದೆ. ಸಂಘದಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವವರು ತಮ್ಮ ವಾಹನಗಳ ಆರ್.ಸಿ. ಬುಕ್ ಮತ್ತು ಆಧಾರ್ ಕಾರ್ಡ್ ಹಾಗೂ ಫೋಟೋ ಜೊತೆ ಅರ್ಜಿ ಸಲ್ಲಿಸಿ, ಸದಸ್ಯತ್ವ ಪಡೆಯಬಹುದು.
ಶಿವಮೊಗ್ಗ ನಗರದವರು ಶಂಕರಮಠದ ಹತ್ತಿರವಿರುವ ಸಂಘದ ಕಛೇರಿಗೆ ಬಂದು ಅರ್ಜಿ ಸಲ್ಲಿಸಬಹುದು. ಪ್ರತಿ ತಾಲ್ಲೂಕಿನ ಅಧ್ಯಕ್ಷರು ಆಯಾ ತಾಲ್ಲೂಕಿನ ಲಾರಿ ಮಾಲೀಕರ ಸದಸ್ಯತ್ವವನ್ನು ನೊಂದಾಯಿಸಿ ಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದಾ ಧಿಕಾರಿಗಳಾದ ಕೆ.ಎನ್. ಭೋಜರಾಜ್, ರಾಜಣ್ಣ, ಶಿವಣ್ಣ, ಬಾಬು, ವಿನಯ್, ಅಬೀಬ್ ಇದ್ದರು.
ಪತ್ರಿಕಾಗೋಷ್ಠಿಯಲ್ಲಿ ಪದಾ ಧಿಕಾರಿಗಳಾದ ಕೆ.ಎನ್. ಭೋಜರಾಜ್, ರಾಜಣ್ಣ, ಶಿವಣ್ಣ, ಬಾಬು, ವಿನಯ್, ಅಬೀಬ್ ಇದ್ದರು.