ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರತಾಪಸಿಂಹನಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಆಗ್ರಹಿಸಿ ಶಿವಮೊಗ್ಗ ಯುವ ಕಾಂಗ್ರೆಸ್‌ನಿಂದ ಪತ್ರ*
*ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರತಾಪಸಿಂಹನಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಆಗ್ರಹಿಸಿ ಶಿವಮೊಗ್ಗ ಯುವ ಕಾಂಗ್ರೆಸ್‌ನಿಂದ ಪತ್ರ*

ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಅನ್‌ಪಡ್ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಮೈಸೂರಿನ ಮಾಜಿ ಸಂಸದ ಬಿಜಪಿ ಮುಖಂಡ ಪ್ರತಾಪಸಿಂಹರಿಗೆ ಹುಚ್ಚು ಹಿಡಿದಿದ್ದು, ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಅವರಿಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪತ್ರ ಬರೆಯುವ ಮೂಲಕ ಆಗ್ರಹಿದರು.
ಪ್ರತಾಪಸಿಂಹ ಪತ್ರಕರ್ತರಾಗಿ ಕೆಲಸ ಮಾಡಿದವರು. ಈ ದೇಶದ ಸಂವಿಧಾನ, ವ್ಯವಸ್ಥೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕಿತ್ತು. ಆದರೆ, ಜನರಿಂದ ಆಯ್ಕೆಯಾಗಿ ರಾಜ್ಯದ ಶಿಕ್ಷಣ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತಿರುವ ಮಧು ಬಂಗಾರಪ್ಪ ಅವರನ್ನು ಅನ್‌ಪಡ್ ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ಕೆಲಸ ಮಾಡಿದ್ದಾರೆ. ಇಂತಹ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಿ ಇರುವುದಕ್ಕೆ ಅರ್ಹನಲ್ಲ ಎಂದು ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತನಾಗಿ ರಾಜಕೀಯವಾಗಿ ನಿರಾಶ್ರಿತನಂತಾಗಿರುವ ಪ್ರತಾಪಸಿಂಹನಿಗೆ ಹುಚ್ಚು ಹಿಡಿರುವುದು ಖಚಿತವಾಗಿದೆ. ಹಾಗಾಗಿ, ಕಂಡಕಂಡವರನ್ನು ತಿಳಿಗೇಡಿ ಎನ್ನುವುದು, ಬೇಕಾಬಿಟ್ಟಿ ಟೀಕಿಸುವುದು ಮಾಡುತ್ತಿದ್ದಾರೆ. ಪ್ರತಾಪ ಸಿಂಹ ಸಂಸದನಾಗಿ ಮೈಸೂರು-ಕೊಡಗಿನಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ? ಕೇವಲ ಟೀಕೆಗಳನ್ನು ಮಾಡುತ್ತಾ, ಪಕ್ಷದ ವರಿಷ್ಠರನ್ನು ಓಲೈಸುತ್ತಾ ಇದ್ದ ಪ್ರತಾಪ ಸಿಂಹನನ್ನು ರಾಜಕೀಯಕ್ಕೆ ನಾಲಾಯಕ್ ವ್ಯಕ್ತಿ ಎಂದು ಅವರ ಪಕ್ಷದ ವರಿಷ್ಟರೇ ತಿರಸ್ಕರಿಸಿದ್ದಾರೆ. ಇದರಿಂದ ಪ್ರತಾಪಸಿಂಹ ತನ್ನ ಅಸ್ತಿತ್ವಕ್ಕಾಗಿ ಬೇಕಾಬಿಟ್ಟಿ ನಾಲಿಗೆ ಹರಿಬಿಡುತ್ತಿದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ದೇಶದ ಸಂವಿಧಾನದಲ್ಲಿರುವ ಅವಕಾಶದಿಂದಾಗಿಯೇ ಇಂದು ಮಧು ಬಂಗಾರಪ್ಪನವರು ಶಾಸಕರಾಗಿ, ಶಿಕ್ಷಣ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಶಿಕ್ಷಣ ಸಚಿವರಾದ ಮೇಲೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಫಲಿತಾಂಶದಲ್ಲಿ ಆಗಿರುವ ಗಣನೀಯ ಹೆಚ್ಚಳವೇ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಆದರೆ, ಪ್ರತಾಪಸಿಂಹ ಅಧಿಕಾರದಲ್ಲಿದ್ದಾಗ ಮಾಡಿಕೊಂಡಂತಹ ಆವಾಂತರಗಳು ಏನೇನು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ರಾಜಕೀಯವಾಗಿ ನಿರಾಶ್ರಿತನಾಗಿ ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಿರುವ ಪ್ರತಾಪಸಿಂಹ ಕೂಡಲೇ ಮಧು ಬಂಗಾರಪ್ಪನವರ ಮತ್ತು ಈ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ವರಿಷ್ಠರು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇಲ್ಲವಾದರೆ ಅವರ ಹುಚ್ಚು ಹೇಳಿಕೆಗಳಿಂದ ಜನತೆ ಬಿಜೆಪಿ ವರಿಷ್ಠರ ಮೇಲೆ ಮುಗಿಬೀಳುವ ಸಾಧ್ಯತೆ ಇದೆ. ಆದ್ದರಿಂದ ಇಂದು ಯುವ ಕಾಂಗ್ರೆಸ್‌ನಿಂದಲೇ ಪ್ರತಾಪಸಿಂಹನನ್ನು ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಇದರ ಸದ್ಬಳಕೆ ಆಗುವಂತೆ ಬಿಜೆಪಿ ವರಿಷ್ಠರು ನೋಡಿಕೊಳ್ಳಲಿ ಎಂದು ಈ ಮೂಲಕ ತಿಳಿಸಿದರು.
ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಯುವ ನಾಯಕ ಆಸಿಫ್, ಚೇತನ್, ಮಧುಸೂದನ್, ಗಿರೀಶ್ ಬುಕ್ಕಳಾಪುರ, ಹರ್ಷಿತ್ ಗೌಡ ಎಸ್.( ಜಿಲ್ಲಾಧ್ಯಕ್ಷರು) ,ಚರಣ್ ಶೆಟ್ಟಿ (ಶಿವಮೊಗ್ಗ ವಿಧಾನಸಭಾಧ್ಯಕ್ಷರು), ಪ್ರವೀಣ್ ಕುಮಾರ್ (ಶಿವಮೊಗ್ಗ ಗ್ರಾಮಾಂತರ ವಿಧಾನಸಭಾಧ್ಯಕ್ಷರು), ಬ್ಲಾಕ್ ಅಧ್ಯಕ್ಷರುಗಳಾದ ಸಕ್ಲೇನ್, ಪ್ರವೀಣ್, ಗಿರೀಶ್,. ಶಶಿಕುಮಾರ್ N S U I ಜಿಲ್ಲಾ ಅಧ್ಯಕ್ಷರಾದ ವಿಜಯ್ ಶಿವಕುಮಾರ್
ಅನಿಲ್ ಪಾಟೀಲ್,ನಿಖಿಲ್,ನೂರ್ ಅಹ್ಮದ್ ,ಅಶೋಕ್,ಧನರಾಜ್ ಪುರಲೆ ಬಾಬು ,ಅನಂತ್ ,ರವಿ ಕಟಿಕೆರೆ ,ಗೌತಮ್, ಚಂದ್ರಾಜಿ ವರುಣ್,ತೌಫಿಕ್,ಅಶೋಕ್ ಉಪಸ್ಥಿತರಿದ್ದರು.