ಕಾಮಿಡಿ ಕಿಲಾಡಿ ಮಡೆನೂರು ಮನು ವಿರುದ್ಧ ಅತ್ಯಾಚಾರದ ಗಂಭೀರ ಆರೋಪ!* *ಕುಲದಲ್ಲಿ ಕೀಳ್ಯಾವುದೋ ಸಿನೆಮಾ ಬಿಡುಗಡೆ ಸಂದರ್ಭದಲ್ಲಿಯೇ ರೇಪ್ ಕೇಸ್ ಫಿಕ್ಸ್!*

*ಕಾಮಿಡಿ ಕಿಲಾಡಿ ಮಡೆನೂರು ಮನು ವಿರುದ್ಧ ಅತ್ಯಾಚಾರದ ಗಂಭೀರ ಆರೋಪ!*

*ಕುಲದಲ್ಲಿ ಕೀಳ್ಯಾವುದೋ ಸಿನೆಮಾ ಬಿಡುಗಡೆ ಸಂದರ್ಭದಲ್ಲಿಯೇ ರೇಪ್ ಕೇಸ್ ಫಿಕ್ಸ್!*

ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಖ್ಯಾತಿ ಪಡೆದ ಮಡೆನೂರು ಮನು (Madenuru Manu) ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಕಿರುತೆರೆ ನಟಿಯೊಬ್ಬರು ಇವರ ವಿರುದ್ಧ ಈ ರೀತಿಯ ಆರೋಪ ಹೊರಿಸಿದ್ದಾರೆ. ಸದ್ಯ ಈ ವಿಚಾರ ಸೆನ್ಸೇಷನ್ ಸೃಷ್ಟಿ ಆಗಿದೆ. ಅವರಿಗೆ ಈಗ ಬಂಧನ ಭೀತಿ ಶುರುವಾಗಿದೆ. ಅವರ ನಟನೆಯ ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ರಿಲೀಸ್ ಸಂದರ್ಭದಲ್ಲಿಯೇ ಈ ರೀತಿ ಆಗಿರೋದು ತಂಡಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಮಡೆನೂರು ಮನುಗೆ ಕಿರುತೆರೆ ನಟಿ ಪರಿಚಯ ಆಗಿದೆ. ಆ ಬಳಿಕ ಇವರ ಮಧ್ಯೆ ಗೆಳೆತನ ಬೆಳೆದಿದೆ. ಈಗ ‘ನನ್ನ ಮೇಲೆ ಮನು ಅತ್ಯಾಚಾರ ಮಾಡಿದ್ದಾನೆ’ ಎಂದು ನಟಿ ದೂರು ನೀಡಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಮನುಗಾಗಿ ಹುಡುಕಾಟ ನಡೆದಿದೆ.

ಮಡೆನೂರು ಮನು ಅವರು ‘ಕಾಮಿಡಿ ಕಿಲಾಡಿಗಳು’ ಮೂಲಕ ಭರ್ಜರಿ ಫೇಮಸ್ ಆದರು. ಆ ಬಳಿಕ ಅವರಿಗೆ ವಿವಿಧ ರೀತಿಯ ಆಫರ್​ಗಳು ಬರೋಕೆ ಆರಂಭಿಸಿದವು. ಆದರೆ, ಅವರು ಅಳೆದು-ತೂಗಿ ಸಿನಿಮಾ ಮಾಡೋಕೆ ಪ್ರಾರಂಭಿಸಿದರು. ಅವರು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೂಲಕ ಹೀರೋ ಆಗುವುದರಲ್ಲಿದ್ದರು. ಸಿನಿಮಾ ರಿಲೀಸ್ ಸಂದರ್ಭದಲ್ಲೇ ಅವರ ವಿರುದ್ಧ ಈಗ ಗಂಭೀರ ಆರೋಪ ಎದುರಾಗಿದೆ.

ಕುಲದಲ್ಲಿ ಕೀಳ್ಯಾವುದೋ’ ಎಂಬ ಟೈಟಲ್ ಕೇಳಿದ ತಕ್ಷಣ ಇದು ಜಾತಿ ಸಂಘರ್ಷದ ಬಗ್ಗೆ ಇರುವ ಸಿನಿಮಾ ಎಂಬ ಅನಿಸಿಕೆ ಮೂಡುತ್ತದೆ. ಆದರೆ ಸಿನಿಮಾದಲ್ಲಿ ಬೇರೆಯೇ ಕಥೆ ಇದೆ ಎಂದು ಮನು ಹೇಳಿದ್ದರು. ಅಲ್ಲದೆ ಈ ಸಿನಿಮಾ ಬಗ್ಗೆ ಅವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಈಗ ಮನು ಆರೋಪದಿಂದ ಸಿನಿಮಾ ತಂಡಕ್ಕೆ ಕಪ್ಪು ಚುಕ್ಕೆ ಬಿದ್ದಂತೆ ಆಗಿದೆ.

ಎಫ್​ಐಆರ್​​ನಲ್ಲೇನಿದೆ?
ಸಂತಸ್ತೆಗೆ ಮನು ನಾಗರಭಾವಿಯಲ್ಲಿ ಬಾಡಿಗೆ ಮನೆ ಹುಡುಕಿಕೊಟ್ಟಿದ್ದ. 2018ರಿಂದಲೂ ಮನುವಿನ ಪರಿಚಯ ಸಂತ್ರಸ್ತೆಗೆ ಇತ್ತು. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದರು. ಮೊದಲಿಗೆ ಪರಿಚಯ ಆಗಿ ಸ್ನೇಹ ಬೆಳೆದಿತ್ತು. ಮನುಗೆ ಮದುವೆ ಆಗಿ ಒಂದು ಮಗು ಕೂಡ ಇದೆ ಅನ್ನೋದು ಶಾಕಿಂಗ್ ವಿಚಾರ.

ಒಮ್ಮೆ ಶಿಕಾರಿಪುರಕ್ಕೆ ಹೋದಾಗ ಹೋಟೆಲ್ ರೂಂಗೆ ಮನು ನಟಿಯನ್ನು ಕರೆಸಿಕೊಂಡಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಅವರು ಆರೋಪಿಸಿದ್ದಾರೆ. ಈ ವೇಳೆ ಅವರು ಪ್ರೆಗ್ನೆಂಟ್ ಕೂಡ ಆಗಿದ್ದರು. ಆ ಬಳಿಕ ಮನು ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದರು.