ಶಿವಮೊಗ್ಗ ಪಾಲಿಕೆಗೆ ಶೀಘ್ರ ಚುನಾವಣೆಗೆ ಒತ್ತಾಯಿಸಿ ಕೆ.ಇ.ಕಾಂತೇಶ್ ನೇತೃತ್ವದ ರಾಷ್ಟ್ರಭಕ್ತರ ಬಳಗದಿಂದ ಚುನಾವಣಾ ಆಯೋಗದ ಆಯುಕ್ತರಿಗೆ ಭೇಟಿ ಮಾಡಿ ಒತ್ತಾಯ*
*ಶಿವಮೊಗ್ಗ ಪಾಲಿಕೆಗೆ ಶೀಘ್ರ ಚುನಾವಣೆಗೆ ಒತ್ತಾಯಿಸಿ ಕೆ.ಇ.ಕಾಂತೇಶ್ ನೇತೃತ್ವದ ರಾಷ್ಟ್ರಭಕ್ತರ ಬಳಗದಿಂದ ಚುನಾವಣಾ ಆಯೋಗದ ಆಯುಕ್ತರಿಗೆ ಭೇಟಿ ಮಾಡಿ ಒತ್ತಾಯ*
ಶಿವಮೊಗ್ಗಕ್ಕೆ ಆಗಮಿಸಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತರಾದ ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ರವರಿಗೆ ಕೆ.ಇ.ಕಾಂತೇಶ್ ರವರ ನೇತೃತ್ವದಲ್ಲಿ ಭೇಟಿ ಮಾಡಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ಶೀಘ್ರದಲ್ಲೇ ಚುನಾವಣೆ ಮಾಡಬೇಕೆಂದು ರಾಷ್ಟ್ರಭಕ್ತರ ಬಳಗ ಒತ್ತಾಯಿಸಿತು.
ಶಿವಮೊಗ್ಗ ಮಹಾನಗರ ಪಾಲಿಕೆಯ ಸದಸ್ಯರ ಆಡಳಿತಾವಧಿ 2023ರ ನವೆಂಬರ್‌ನಲ್ಲಿ ಪೂರ್ಣಗೊಂಡಿದ್ದು, ಸುಮಾರು ಒಂದೂವರೆ ವರ್ಷಗಳಿಂದ ನಗರದಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ನಾಗರೀಕರ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಹಾಗೂ ಅಭಿವೃದ್ಧಿ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ.ಕೂಡಲೇ ಚುನಾವಣೆ ಘೋಷಣೆ ಮಾಡುವುದರ ಮೂಲಕ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಮಹಾನಗರ ಪಾಲಿಕೆ ಸದ್ಯಸರಾದ ಎಂ.ಶಂಕರ್,ಸುವರ್ಣ ಶಂಕರ್,ಲಕ್ಷ್ಮಿ ಶಂಕರ್ ನಾಯ್ಕ, ಆರತಿ ಆಮಾ ಪ್ರಕಾಶ್, ಈ.ವಿಶ್ವಾಸ್,ರಾಜು, ಬಾಲು, ಹಿಂದಿನ ಮಹಾನಗರ ಪಾಲಿಕೆ ಸದ್ಯಸರಾದ ಅನಿತಾ,ಸೀತಾಲಕ್ಷ್ಮಿ,ಆಶಾ ಚನ್ನಬಸಪ್ಪ,ಶಿವಾಜಿ, ಮೋಹನ್, ವಾಸಣ್ಣ ಪ್ರಮುಖರಾದ ಆನಂದಣ್ಣ, STD ರಾಜು,ಜಾಧವ್,ಶ್ರೀಕಾಂತ್,ನಾಗರಾಜ್,ಪ್ರದೀಪ್,ಗುರು ಶೇಟ್,ಪ್ರಕಾಶ್ ,ಚಿದಾನಂದ ,ಮಂಜುಳ ಪಾಂಡೆ,ಮಣಿ, ರಾಷ್ಟ್ರ ಭಕ್ತರ ಒಳಗ ಪ್ರಮುಖರು ಉಪಸ್ಥಿತರಿದ್ದರು.