ಕುತೂಹಲ ಮೂಡಿಸಿದ ರಿಯಲ್ ಎಸ್ಟೇಟ್ ಉದ್ಯಮಿಯ ನಕಲಿ ನೋಟು ಚಲಾವಣೆ ಪ್ರಕರಣ;* *ಈ ನೋಟುಗಳನ್ನು ಕಂಡರೆ ಮಾಹಿತಿ ಕೊಡಿ ಎಂದಿದೆ ಪೊಲೀಸ್ ಇಲಾಖೆ!* *ನಕಲಿ ನೋಟಿನ ಜಾಲದಲ್ಲಿ ಶಿವಮೊಗ್ಗ ಜಿಲ್ಲೆ*
*ಕುತೂಹಲ ಮೂಡಿಸಿದ ರಿಯಲ್ ಎಸ್ಟೇಟ್ ಉದ್ಯಮಿಯ ನಕಲಿ ನೋಟು ಚಲಾವಣೆ ಪ್ರಕರಣ;*
*ಈ ನೋಟುಗಳನ್ನು ಕಂಡರೆ ಮಾಹಿತಿ ಕೊಡಿ ಎಂದಿದೆ ಪೊಲೀಸ್ ಇಲಾಖೆ!*
*ನಕಲಿ ನೋಟಿನ ಜಾಲದಲ್ಲಿ ಶಿವಮೊಗ್ಗ ಜಿಲ್ಲೆ*
ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ 500₹ ಗಳ ನಕಲಿ ನೋಟು ಕೊಟ್ಟು ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲ್ಲೂಕಿನ ಭಂಡಾರಹಳ್ಳಿಯ ನಾಗಮ್ಮ ಲೇ ಔಟ್ ವಾಸಿ ರಿಯಲ್ ಎಸ್ಟೇಟ್ ಉದ್ಯಮಿ ರಂಗೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜೂ.13 ರಂದು ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ವಾಸಿಯಾದ ಅಜಯ್ (25 ವರ್ಷ, ಕೂಲಿಬಾಕ್ ಶೆಡ್. ಭದ್ರಾವತಿ) ಠಾಣೆಗೆ ಹಾಜರಾಗಿ 12-06-2025 ರಂದು ಸಂಜೆ ಸಮಯದಲ್ಲಿ ಒಬ್ಬ ಅಸಾಮಿಯು ಡಿಸ್ಕವರ್ ಬೈಕಿನಲ್ಲಿ ಬಂದು 500 ರೂ ನಕಲಿ ನೋಟು ಕೊಟ್ಟು ವ್ಯಾಪಾರ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಠಾಣಾ ಅಪರಾಧ ಸಂಖ್ಯೆ 148/2025 ಕಲಂ:179, 318(4) BNS Act ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ. ಕೆ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ ಜಿ ಕಾರಿಯಪ್ಪರವರ ಮಾರ್ಗದರ್ಶನದಲ್ಲಿ, ನಾಗರಾಜ, ಡಿ.ವೈ.ಎಸ್.ಪಿ ಭದ್ರಾವತಿ ಉಪವಿಭಾಗ, ಮಂಜುನಾಥ್, ಸಿ.ಪಿ.ಐ ನಗರ ವೃತ್ತ ಭದ್ರಾವತಿ ಪ್ರಭಾರ ರವರ ಮೇಲ್ವಿಚಾರಣೆಯಲ್ಲಿ ಟಿ, ರಮೇಶ್, ಪಿ.ಎಸ್.ಐ* ನ್ಯೂಟೌನ್ ಪೊಲೀಸ್ ಠಾಣೆ, ರವರ ನೇತೃತ್ವದ ಸಿಬ್ಬಂದಿಗಳಾದ ಟಿ.ಪಿ.ಮಂಜಪ್ಪ ಎ.ಎಸ್.ಐ. , ನವೀನ್ ಹೆಚ್.ಸಿ, ವಿಜಯ್ ಹೆಚ್.ವೈ ಸಿ.ಹೆಚ್.ಸಿ, ಶ್ರೀಧರ್ ಸಿ.ಹೆಚ್.ಸಿ, ಮಾರುತಿ ಪಾಟೀಲ ಸಿಪಿಸಿ, ಪ್ರಸನ್ನ ಸಿಪಿಸಿ, ರಘು ಬಿ.ಎಂ ಸಿಪಿಸಿ, ನಾಗರಾಜಪ್ಪ ಬಿ.ಹೆಚ್ ಸಿಪಿಸಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಸಿಲಾಗಿತ್ತು.
ತನಿಖಾ ತಂಡವು ಈ ಪ್ರಕರಣದ ಆರೋಪಿಯಾದ *ರಂಗೇಗೌಡ (57 ವರ್ಷ, ರಿಯಲ್ ಎಸ್ಟೆಟ್ ಕೆಲಸ, ವಾಸ: ನಾಗಮ್ಮ ಲೇ ಔಟ್, ಎದುರು ಭಂಢಾರಹಳ್ಳಿ ಭದ್ರಾವತಿ)ನನ್ನು ದಸ್ತಗಿರಿ ಮಾಡಿ ಆರೋಪಿತನಿಂದ *500 ರೂ ಮುಖ ಬೆಲೆಯ 13 ನೋಟುಗಳು, 200 ರೂ ಮುಖ ಬೆಲೆಯ 1 ನೋಟು, 100 ರೂ ಮುಖ ಬೆಲೆಯ 1 ನೋಟು, 50 ರೂ ಮುಖ ಬೆಲೆಯ 1 ನೋಟು ಹಾಗೂ ಕೃತ್ಯಕ್ಕೆ ಬಳಸಿದ ಡಿಸ್ಕವರ್ ಬೈಕ್ ಅನ್ನು* ಅಮಾನತ್ತು ಪಡಿಸಿಕೊಳ್ಳಲಾಗಿದೆ.
*ಆರೋಪಿ ಬೇರೆ ಕಡೆ ವ್ಯವಹಾರ ಮಾಡಿದ್ದರ ಬಗ್ಗೆ ತಿಳಿಸಿದ್ದು OFP 790829 ಮತ್ತು 9TV 978202 ಈ ನಂಬರಿನ 500 ರೂ ಮುಖ ಬೆಲೆಯ ನೋಟುಗಳು ಕಂಡು ಬಂದಲ್ಲಿ ಸಾರ್ವಜನಿಕರು ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಗೆ ಅಥವಾ ಶಿವಮೊಗ್ಗ, ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕೆಂದು ಕೋರಲಾಗಿದೆ.
ಈ ತನಿಖಾ ತಂಡದ *ಉತ್ತಮ ವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರವರು ಪ್ರಶಂಸಿಸಿ* ಅಭಿನಂದಿಸಿದ್ದಾರೆ.