ಹೀಗೂ ಇರುತ್ತೆ ಜಗತ್ತು!* *ನಿಮ್ಮ ಸಹಕಾರ ಮತ್ತು ಸಹಾಯಕ್ಕೆ ಧನ್ಯವಾದಗಳು…*
*ಹೀಗೂ ಇರುತ್ತೆ ಜಗತ್ತು!*
*ನಿಮ್ಮ ಸಹಕಾರ ಮತ್ತು ಸಹಾಯಕ್ಕೆ ಧನ್ಯವಾದಗಳು…*
ನನ್ನಮ್ಮಿ ಇದ್ದಕ್ಕಿದ್ದ ಹಾಗೆ ನಂಬಿದ ವೈದ್ಯನೊಬ್ಬನ ಕಾರಣದಿಂದ ಗ್ಯಾಂಗ್ರೀನ್ ಗೆ ಒಳಗಾದರು.
ಆ ನಂತರ ಸುಮ್ಮನೆ ಭರವಸೆ ಕೊಟ್ಟು ಕಾಲ ಕಳೆದ ಆ ಡಾಕ್ಟರ್ ಮಹಾಶಯ ಹಣದ ಆಸೆಗೆ ಬಿದ್ದಿದ್ದನೇನೋ…ದಾರಿ ತಪ್ಪಿಸುತ್ತಲೇ ಹೋದ…
ನನ್ನಮ್ಮಿ ಸರಿ ಇದ್ದವರು ಆ ವೈದ್ಯನನ್ನು ನಂಬಿದ್ದರಿಂದ ಬಹಳ ನೋವು ಪಡುವಂತಾಯ್ತು…ಈಗಲೂ ಅದು ಮುಂದುವರೆದಿದೆ…
ಈ ನಡುವೆ ಗ್ಯಾಂಗ್ರಿನ್…ಕಾಲಿನ ಎರಡು ಬೆರಳಿನ ಆಪರೇ಼ನ್…ಆಪರೇಷನ್ನಿನ ಸಂದರ್ಭದಲ್ಲೇ ಎರಡೂ ಕಿಡ್ನಿಗಳು ಕೆಲಸ ನಿಲ್ಲಿಸಿ ಅಮ್ಮಿಯ ಹೊಟ್ಟೆ ಮೂತ್ರದ ಇನ್ ಫೆಕ್ಷನ್ ನಿಂದ ಊದಿಕೊಳ್ಳತೊಡಗಿದ್ದು, ಆ ನಂತರ ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಆಸ್ಪತ್ರೆ, ಅಲ್ಲಿಂದ ಮತ್ತೆ ಆ ವೈದ್ಯನಿಂದಲೇ ದಾರಿ ತಪ್ಪಿ ಮಂಗಳೂರಿನ ಎನಪೋಯ, ಅಲ್ಲಿಂದ ಇಲ್ಲಿಂದ ಪೋಯಾ( ತೊಲಗು) ಅಂದ ಕೂಡಲೇ ಕೈ ಕಾಲು ಆಡದೇ ಮಣಿಪಾಲದ ಆಸ್ಪತ್ರೆ ದಾರಿ ತುಳಿದಿದ್ದು, ಅಲ್ಲಿ ಬೆಡ್ಡುಗಳೇ ಇಲ್ಲ ಅನಿಸಿಕೊಂಡು, ಅವರೇ ಹೇಳಿದ ಅವರದೇ ಉಡುಪಿ ಆಸ್ಪತ್ರೆಗೆ ಕರೆ ತಂದಿದ್ದು…ದಿನಕ್ಕಿಷ್ಟು ಖರ್ಚು ಅಂದಾಗ ಗಾಬರಿ ಬಿದ್ದಿದ್ದು, ಅಲ್ಲಿಂದ ಮತ್ತೆ ಡಾ. ಜಯದೇವರ ಸಹಾಯದಿಂದ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಬಂದಿದ್ದು, ಆ ಆಸ್ಪತ್ರೆಯ ಹಿರೀಕರನ್ನು ನಮ್ ಕಾಂಗ್ರೆಸ್ಸಿನ ಶ್ಯಾಮಣ್ಣ ಪರಿಚಯಿಸಿದ್ದು, ಜೊತೆಗೆ ನನಗೂ ತೀರಾ ಪರಿಚಯ ಇರೋ ಆಸ್ಪತ್ರೆಯ ಮಾಲೀಕರು ಮತ್ತು ಅವರ ಸಹೋದರ ಸಹಕರಿಸಿದ್ದು, ಡಾ. ಲಿಂಗರಾಜ್, ಡಾ.ಪೈ, ಡಾ.ಜಯದೇವರಂಥ ವೈದ್ಯರ ಕಾಳಜಿ…ಇಷ್ಟೆಲ್ಲದರ ನಡುವೆ…ಹಣದ ಹೊಂದಾಣಿಕೆಯ ಹರಸಾಹಸ…
ಒಂದು ಮದುವೆ ಅಂದ ಕೂಡಲೇ ಅಲ್ಲಿಗೆ ಹೋಗುವ ಜನ ಉಡುಗೊರೆ, ಕೊಡುಗೆ, ಹಣದ ಕವರ್ ಕೊಟ್ಟು ಪುನೀತರಾಗಿ ಬರುತ್ತಾರೆ. ಆದರೆ… ಬಿಡಿ, ಅದೆಲ್ಲ ದೊಡ್ಡ ಕಥೆ…ಮುಂದೆಂದೋ ಬರೆಯುವೆ…
ಜೀವಕ್ಕೆ ಹತ್ತಿರವಿರುವವರೆಲ್ಲ ಇಂಥ ಕಷ್ಟ ಕಾಲದಲ್ಲಿ ಮಾಯವಾಗಿಬಿಡುತ್ತಾರಲ್ಲ…ಆಶ್ಚರ್ಯವಾಗಿಬಿಡುತ್ತೆ…
ಅಮ್ಮಿಯ ಕೈತುತ್ತು ನೆನಪಿಸಿಕೊಂಡ ಬಹಳ ಜನ ಇದ್ದಾರೆ…ಈಗಿಲ್ಲದ ಆಗ ನಕ್ಸಲೂ ಆಗಿರದಿದ್ದ ಪಾರ್ವತಿ, ಕೃಷ್ಣಮೂರ್ತಿಯಿಂದ ಹಿಡಿದು… ಪೊಲೀಸ್ ಇಲಾಖೆಯ ಕಮಲ್ ಪಂಥ್ ಸೇರಿದಂತೆ ಬಹಳ ಜನಕ್ಕೆ ತುತ್ತು ಕೊಟ್ಟ ಅಮ್ಮಿಗೆ ಇವತ್ತು ಈ ಸ್ಥಿತಿ…
ಬೇಸರವಾಗುತ್ತೆ…ಜನ, ಈ ಜಗತ್ತು ಇಷ್ಟು ಮನುಷ್ಯತ್ವ ಬಿಟ್ಟಿದೆ ಅಂತ…ಅಷ್ಟರ ನಡುವೆಯೂ ನಾನು ಯಾವಾಗಲೂ ಪ್ರೀತಿಸುವ ಒಂದೆರಡು ಜೀವಗಳು ಸಣ್ಣದಾಗಿ ಸ್ಪಂದಿಸಿದವು. ಅವರ ಕಾಳಜಿ ದೊಡ್ಡದು…
ಅಮ್ಮಿ ಹುಷಾರಾಗಿ ಈ ಜಗತ್ತಿಗೆ ಮತ್ತೆ ಮರಳುವುದು ಖಚಿತ…ಮನುಷ್ಯರಾಗದೇ ಸ್ಪಂದಿಸಲೂ ಹಿಂದೆಮುಂದೆ ನೋಡಿದ ಜೀವ ಜಗತ್ತಿಗೆ ಏನೇ ತೊಂದರೆಯಾದರೂ ಹಗಲು ರಾತ್ರಿ ನಾನಿದ್ದೇನೆ…ಕೈ ಮೀರಿ ಸಹಕರಿಸುವುದನ್ನು, ಸಹಾಯ ಮಾಡುವುದನ್ನು ಆದರೂ ನಿಲ್ಲಿಸಲಾರೆ…
ಯಾಕೋ ಇದೆಲ್ಲ ಬರೆಯಬೇಕನಿಸ್ತು…ಹಗುರಾಗಲು…ಅಮ್ಮಿಯ ಆರೋಗ್ಯ ಸರಿ ಮಾಡಲು…ನಿಮ್ಮ ಸಹಕಾರ, ಪ್ರಾರ್ಥನೆಯನ್ನಷ್ಟೇ ಬಯಸುತ್ತಿರುವ ನಿಮ್ಮ ಸ್ನೇಹಿತ…
– *ಶಿ.ಜು.ಪಾಶ*
8050112067
(20/06/2025)