ಹೆಲ್ಮೆಟ್ ಧರಿಸುವುದರಿಂದ ನಿಜಕ್ಕೂ ಕೂದಲು ಉದುರುತ್ತಾ?*

*ಹೆಲ್ಮೆಟ್ ಧರಿಸುವುದರಿಂದ ನಿಜಕ್ಕೂ ಕೂದಲು ಉದುರುತ್ತಾ?*

ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಲೇಬೇಕು. ಸುರಕ್ಷತೆಯ ದೃಷ್ಟಿಯಿಂದಾಗಿ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಲೇಬೇಕು. ಆದರೆ ಕೆಲವರು ಕೂದಲು ಉದುರುತ್ತೆ ಅನ್ನೋ ಕಾರಣಕ್ಕೆ ಹೆಲ್ಮೆಟ್‌ ಧರಿಸಲು ಹಿಂದೇಟು ಹಾಕುತ್ತಾರೆ. ಇನ್ನೂ ಕೆಲವರು ಹೆಲ್ಮೆಟ್‌ ಧರಿಸುವುದನ್ನೇ ತಪ್ಪಿಸುತ್ತಾರೆ. ಆದರೆ ನಿಜಕ್ಕೂ ಹೆಲ್ಮೆಟ್‌ ಕೂಡಾ ಕೂದಲು ಉದುರುವಿಕೆಗೆ ಕಾರಣವೇ? (Is helmet cause to hair loss) ಹೆಲ್ಮೆಟ್‌ ಧರಿಸುವುದರಿಂದ ಕೂದಲು ಹೇಗೆ ಉದುರುತ್ತದೆ ? ಈ ವಿಷಯದ ಸತ್ಯಾಸತ್ಯತೆಯನ್ನು ಡಾ. ಅಂಕುರ್‌ ಸರಿನ್‌ (Dr. Ankur Sarin) ಶೇರ್‌ ಮಾಡಿದ್ದಾರೆ. ಹಾಗಾದ್ರೆ ಡಾ. ಸರಿನ್‌ ಈ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ನೋಡಿ.

ಹೆಲ್ಮೆಟ್‌ ಧರಿಸುವುದರಿಂದ ಕೂದಲು ಉದುರುತ್ತಾ?
ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುತ್ತದೆಯೇ? ಈ ಬಗ್ಗೆ ಅನೇಕರ ಮನಸ್ಸಿನಲ್ಲಿ ಸಂಶಯಗಳಿವೆ. ಚರ್ಮರೋಗ ತಜ್ಞ ಡಾ. ಅಂಕುರ್ ಸರಿನ್ ಇದರ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ. ಡಾ. ಅಂಕುರ್ ಸರಿನ್ ಪ್ರಕಾರ, ಹೆಲ್ಮೆಟ್ ನೇರವಾಗಿ ಕೂದಲು ಉದುರುವಿಕೆಗೆ ಕಾರಣವಾಗುವುದಿಲ್ಲ. ಆದರೆ ಕೊಳಕು ಅಥವಾ ಬಿಗಿಯಾದ ಹೆಲ್ಮೆಟ್ ಕೂದಲಿನ ಮೇಲೆ ತಲೆಹೊಟ್ಟು ಸಮಸ್ಯೆ ಮತ್ತು ಒತ್ತಡವನ್ನು ಹೆಚ್ಚಿಸುವ ಮೂಲಕ ಕೂದಲಿಗೆ ಹಾನಿಯನ್ನುಂಟುಮಾಡುತ್ತದೆ. ಇದರಿಂದ ಕೂದಲು ಉದುರುವಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಬಿಗಿಯಾದ ಹೆಲ್ಮೆಟ್‌ ಧರಿಸುವುದರಿಂದ ನೆತ್ತಿಯಲ್ಲಿ ಹೆಚ್ಚು ಬೆವರು ಉತ್ಪತ್ತಿಯಾಗುತ್ತದೆ. ಇದರಿಂದ ಕೂದಲಿನ ಬೇರು ದುರ್ಬಲಗೊಳ್ಳುತ್ತದೆ. ಹಾಗಿರುವಾಗ ಸರಿಯಾದ ಹೆಲ್ಮೆಟ್ ಅನ್ನು ಆಯ್ಕೆ ಮಾಡಿ ಅದನ್ನು ಸ್ವಚ್ಛಗೊಳಿಸುವ ಮೂಲಕ ಈ ಸಮಸ್ಯೆಯನ್ನು ತಪ್ಪಿಸಬಹುದು.