ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ರಸ್ತೆಯಲ್ಲಿ ಪಾಲಿಕೆ ಕಾರ್ಯಾಚರಣೆ* *ಹೆಲ್ತ್ ಇನ್ಸ್ ಪೆಕ್ಟರ್ ವಸಂತ್- ನಲ್ಮ್ ಅಧಿಕಾರಿ ಅನುಪಮಾ ನೇತೃತ್ವದ ತಂಡದಿಂದ ಒತ್ತುವರಿ ತೆರವು..* *ಸಂಚಾರವೀಗಿಲ್ಲಿ ಸುಗಮ…ಸುಗಮ…*
*ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರ ರಸ್ತೆಯಲ್ಲಿ ಪಾಲಿಕೆ ಕಾರ್ಯಾಚರಣೆ*
*ಹೆಲ್ತ್ ಇನ್ಸ್ ಪೆಕ್ಟರ್ ವಸಂತ್- ನಲ್ಮ್ ಅಧಿಕಾರಿ ಅನುಪಮಾ ನೇತೃತ್ವದ ತಂಡದಿಂದ ಒತ್ತುವರಿ ತೆರವು..*
*ಸಂಚಾರವೀಗಿಲ್ಲಿ ಸುಗಮ…ಸುಗಮ…*
ಶಿವಮೊಗ್ಗದ ಸಾರ್ಜನಿಕರ ಅನುಕೂಲಕ್ಕಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವಿಶಿಷ್ಟ ಹೆಜ್ಜೆ ಇಟ್ಟಿದ್ದು, ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಇಂದೂ ಕೂಡ ಗಮನ ಸೆಳೆಯಿತು.
ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದ ರಸ್ತೆ ಕೂಡ ಒತ್ತುವರಿಯಾಗಿತ್ತು. ಸಂಚಾರ ಎಂಬುದು ಇಲ್ಲಿ ಸಮಸ್ಯೆಯೇ ಆಗಿತ್ತು.
ಇಲ್ಲಿನ ಸಮಸ್ಯೆಗೆ ಪರಿಹಾರ ನೀಡಲು ಪಾಲಿಕೆಯ ಹೆಲ್ತ್ ವಿಭಾಗದ ಹೆಲ್ತ್ ಇನ್ಸ್ ಪೆಕ್ಟರ್ ವಸಂತ್ ಮತ್ತು ನಲ್ಮ್ ಅಧಿಕಾರಿ ಅನುಪಮಾರವರ ನೇತೃತ್ವದ ತಂಡ ಇಂದು ವೀರಶೈವ ಕಲ್ಯಾಣ ಮಂದಿರದ ರಸ್ತೆಯಲ್ಲಿದ್ದ ವ್ಯಾಪಾರಸ್ಥರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಕಾರ್ಯಾಚರಣೆಯೂ ಸಾರ್ವಜನಿಕರ ಹೊಗಳಿಕೆಗೆ ಕಾರಣವಾಯ್ತು.