ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ; ಕೋಟೆ ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಪೂಜೆ – 77 ಈಡಗಾಯಿ ಸಮರ್ಪಣೆ*
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ;
ಕೋಟೆ ಶ್ರೀ ಮಾರಿಕಾಂಬ ದೇವಿಗೆ ವಿಶೇಷ ಪೂಜೆ –
77 ಈಡಗಾಯಿ ಸಮರ್ಪಣೆ*

ಮುಖ್ಯಮಂತ್ರಿಗಳು ಸರ್ವ ಜನಾಂಗದ ನಾಯಕ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಅಂಗವಾಗಿ ನಗರದ ಗ್ರಾಮ ದೇವತೆ ಕೋಟೆ ಶ್ರೀ ಮಾರಿಕಾಂಬ ದೇವಾಲಯದಲ್ಲಿ ಶಿವಮೊಗ್ಗ ಯುವ ಕಾಂಗ್ರೆಸ್ ಸಮಿತಿ ಹಾಗೂ ಶಿವಮೊಗ್ಗ ಜಿಲ್ಲೆ ಕರುನಾಡ ದೊರೆ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ “ವಿಶೇಷ ಪೂಜೆ ಸಲ್ಲಿಸಿ 77 ಈಡಗಾಯಿ ಸಮರ್ಪಣೆ ಮಾಡಿ ವಿಶೇಷವಾಗಿ ಆಚರಿಸಲಾಯಿತು*
*ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಪ್ರಸನ್ನಕುಮಾರ್ ಅವರು ಸಾಮಾಜಿಕ ನ್ಯಾಯವನ್ನೇ ಉಸಿರಾಗಿರಿಸಿಕೊಂಡಿರುವ ಸಮಾಜವಾದಿ ನೇತಾರ, ಭಾಗ್ಯಗಳ ಸರದಾರ, ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಜನರ ಬದುಕುಗಳಿಗೆ ಹೊಸ ಭರವಸೆ ತುಂಬಿದ ಕರುನಾಡ ಭಾಗ್ಯವಿಧಾತ, ನಮ್ಮೆಲ್ಲರ ಮಾರ್ಗದರ್ಶಿಗಳು, ನಾಡಿನ ಅತ್ಯಂತ ಶ್ರೇಷ್ಠ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಹಾಗೂ ಶಿವಮೊಗ್ಗದ ಗ್ರಾಮದೇವತೆ ಕೋಟೆ ಮಾರಿಕಾಂಬ ದೇವಿಯ ಅನುಗ್ರಹ ಅವರ ಮೇಲೆ ಸದಾ ಇರಲಿ ಎಂದು ಹುಟ್ಟುಹಬ್ಬದ ಶುಭಾಶಯ ಕೋರಿದರು*
*ಈ ಸಂದರ್ಭದಲ್ಲಿ ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್ .ರವಿಕುಮಾರ್ ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ , ಮಾಜಿ ಉಪ ಮಹಾಪೌರರಾದ ಎಚ್ ಪಾಲಾಕ್ಷಿ, ಸೂಡ ಸದಸ್ಯರಾದ ಎಂ ಪ್ರವೀಣ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ನ ಮುಖಂಡ ಹೆಚ್.ಪಿ. ಗಿರೀಶ್, ಬಿ ಲೋಕೇಶ್, ಪಂಚ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಸದಸ್ಯರಾದ ಎಸ್ ಕುಮಾರೇಶ್ ,ಬಸವರಾಜ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಎಂ ರಾಕೇಶ್, ಕೆ ಎಲ್ ಪವನ್ , ಪುಷ್ಪಕ್ ಕುಮಾರ್, ಟಿ ಗುರುಪ್ರಸಾದ್, ರಾಜೇಶ್ ಮಂದಾರ, ರಾಹುಲ್ ಸಿಗೆಹಟ್ಟಿ, ಆರ್‌ಎಂ ಓಂ, ಸಂತೋಷ್ ಪುರಲೆ, ರಾಘವೇಂದ್ರ ರಾಮಿನಕೊಪ್ಪ, ಅದ್ನನ್, ಶ್ರೀಕಾಂತ್, ಪ್ರವೀಣ್ ಕಾಶಿಪುರ, ಸಂತೋಷ್ ,ಕಿರಣ್, ಶರತ್ ,ಸಂದೇಶ್ ಪಕ್ಷದ ಮುಖಂಡರುಗಳಾದ ಯು ಶಿವಾನಂದ್ ,ನವಲೆ ಮಂಜುನಾಥ್ , ಸುವರ್ಣ ನಾಗರಾಜ್ ,ಕವಿತಾ ಎಂ ಬಿ , ಶಾರದಾ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು*