ರಾಜ್ಯದ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರಮುಖ ಸುಧಾರಣೆ ಹಿನ್ನೆಲೆಯಲ್ಲಿ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪರ ಮಹತ್ವದ ಸಭೆ* ಏನೆಲ್ಲ ಚರ್ಚೆಗಳಾದವು? ಏನೆಲ್ಲ ಆಗಲಿದೆ ಬದಲಾವಣೆ?

*ರಾಜ್ಯದ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರಮುಖ ಸುಧಾರಣೆ ಹಿನ್ನೆಲೆಯಲ್ಲಿ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪರ ಮಹತ್ವದ ಸಭೆ*

ಏನೆಲ್ಲ ಚರ್ಚೆಗಳಾದವು? ಏನೆಲ್ಲ ಆಗಲಿದೆ ಬದಲಾವಣೆ?

ಇಂದು ವಿಧಾನಸೌಧದಲ್ಲಿ  ಸಭಾಪತಿಗಳಾದ  ಬಸವರಾಜ ಹೊರಟ್ಟಿಯವರ ನೇತೃತ್ವದಲ್ಲಿ ಸಭೆ ನಡೆಸಿದ ಶಿಕ್ಷಣ ಸಚಿವರಾದ ಎಸ್.ಮಧು ಬಂಗಾರಪ್ಪ, “ರಾಜ್ಯದ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಮುಖ ಸುಧಾರಣೆ” ಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.

*”ಸಭೆಯಲ್ಲಿ ಮುಖ್ಯವಾಗಿ ಚರ್ಚಿಸಲಾದ ವಿಷಯಗಳು”*

♦️ಪದವಿ ಹೊಂದಿರುವ ಪಿ.ಎಸ್.ಟಿ ಶಿಕ್ಷಕರನ್ನು ಜಿ.ಪಿ.ಟಿ ಶಿಕ್ಷಕರಾಗಿ (6-8) ಪದೋನ್ನತಿ ನೀಡುವ ಕುರಿತು.

♦️ಸ್ನಾತಕೋತ್ತರ ಪದವಿ ಹೊಂದಿದ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಉಪನ್ಯಾಸಕರ ಹುದ್ದೆಗೆ ಬಡ್ತಿ, ನೀಡುವ ಕುರಿತು.

♦️ಪದೋನ್ನತಿ ಪಡೆದ ಶಿಕ್ಷಕರಿಗೆ 15, 20 ಹಾಗೂ 25 ವರ್ಷಗಳಿಗೆ ನೀಡುವ ವೇತನ ಶ್ರೇಣಿಗಳನ್ನು ಪಡೆಯುವ ಬಗ್ಗೆ.

♦️ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ 2020ರ ವರೆಗಿನ ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಮಾಡುವುದು.

♦️ ಅನುದಾನಿತ ಕಾಲೇಜು ಉಪನ್ಯಾಸಕರುಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ನಿಯೋಜನೆ ಮಾಡುವ ಕುರಿತು.

♦️ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2006ರ ನಂತರ ನೇಮಕಗೊಂಡು ಅನುದಾನಕ್ಕೆ ಒಳಪಟ್ಟ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ ಒದಗಿಸುವ ಕುರಿತು.

♦️ಅನುದಾನಿತ ಪ್ರೌಢಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶದ ಆಧಾರದ ಮೇಲೆ ಶಿಕ್ಷಕರ ವಿರುದ್ಧದ ಕ್ರಮಗಳನ್ನು ಕೈಗೊಳ್ಳದಿರುವ ಕುರಿತು.

♦️ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಿಂದ ಬೇರ್ಪಟ್ಟಿರುವ ಪದವಿಪೂರ್ವ ಕಾಲೇಜುಗಳಲ್ಲಿನ ಖಾಲಿ ಹುದ್ದೆ ಭರ್ತಿ ಕುರಿತು.

♦️ಸಿ.ಬಿ.ಎಸ್.ಸಿ ಮಾದರಿಯ ಪರೀಕ್ಷಾ ಪದ್ಧತಿಯನ್ನು ಜಾರಿಗೊಳಿಸುವ ಕುರಿತು.

♦️Lesson Based Assessment ಪದ್ಧತಿಯನ್ನು ಪುನರ್ ಪರಿಶೀಲಿಸುವುದು ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ 1997-98 ಮತ್ತು 1998-99ರಲ್ಲಿ ನೇಮಕಾತಿ ಹೊಂದಿ ಕರ್ತವ್ಯಕ್ಕೆ ಹಾಜರಾಗಿರುವ ಕೃಪಾಂಕ ರಹಿತ ಪ್ರೌಢಶಾಲಾ ಶಿಕ್ಷಕರಿಗೆ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನುಷ್ಠಾನಗೊಳಿಸಿದಂತೆ ಸೇವಾ ಹಿರಿತನ ಹಾಗೂ ವೇತನ ಪರಿಷ್ಕರಣೆ ಮಾಡುವ ಕುರಿತು.

♦️ಕಟ್ಟಡ ಶಿಥಿಲಗೊಂಡಿರುವ, ಖಾಸಗಿ ಅನುದಾನ ರಹಿತ ಶಾಲೆಯನ್ನು ಕನಿಷ್ಠ 2 ವರ್ಷಗಳ ಕಾಲ ತಾತ್ಕಾಲಿಕವಾಗಿ ಸ್ಥಳಾಂತರಿಸುವುದು ಸೇರಿದಂತೆ ಇನ್ನೂ ಹಲವು ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿ ಅಗತ್ಯ ಸಲಹೆಗಳನ್ನು ಪಡೆದು, ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆನು.

ಸಭೆಯಲ್ಲಿ ವಿಧಾನಪರಿಷತ್ ಶಾಸಕರುಗಳಾದ  ಶಶೀಲ್ ಜಿ. ನಮೋಶಿ,  ಎಸ್.ಎಲ್ ಭೋಜೇಗೌಡ,  ಎಸ್.ವಿ ಸಂಕನೂರು,  ಪುಟ್ಟಣ್ಣ,  ಧನಂಜಯ್ ಸರ್ಜಿ,  ಹನಮಂತ ಆರ್ ನಿರಾಣಿ,  ಮಧು ಮಾದೇಗೌಡ,  ರಾಮೋಜಿ ಗೌಡ,  ಡಿ.ಟಿ ಶ್ರೀನಿವಾಸ್,  ವಿವೇಕಾನಂದ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಶ್ಮಿ ಮಹೇಶ್, ಆಯುಕ್ತರಾದ ತ್ರಿಲೋಕ ಚಂದ್ರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.