ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಅಮ್ಮನ ಸೆರಗು ದಾಟಿ
ಬಿಸಿಲು ತಾಗಿಸಿಕೊಂಡ
ಮಗುವೆಲ್ಲಿ?

ಮಗು ಮುಟ್ಟಿದ
ಬಿಸಿಲಾದರೂ ಎಲ್ಲಿ?

2.
ಪಯಣದ ಸುಖ ಪಡು;

ಅಂತಿಮ ಗುರಿ
ಎಲ್ಲರದೂ
ಮೃತ್ಯುಯೇ…

3.
ಈ ಗುರಿಗೆ
ಗೊತ್ತೇ ಇಲ್ಲ;
ಪಯಣ
ಏನೆಲ್ಲ ಕಸಿದುಕೊಂಡಿದೆ
ಎಂದು!

– *ಶಿ.ಜು.ಪಾಶ*
8050112067
(13/8/2025)