ಶಿರಾಳಕೊಪ್ಪ ಸ್ಫೋಟ ಪ್ರಕರಣ- ಆ ಕಥೆಯೇ ವಿಚಿತ್ರ!
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಗೂಢ ವಸ್ತು ಸ್ಪೋಟ (Blast) ಗೊಂಡಿರುವಂತಹ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ವ್ಯಾಪಾರಸ್ಥ ಆಂಥೋನಿ ಪ್ರತಿಕ್ರಿಯಿಸಿದ್ದು, ನನ್ನ ಅಂಗಡಿಗೆ ಇಬ್ಬರು ಬಂದು ರೂ 800 ಕೊಟ್ಟು ಎರಡು ಬೆಡ್ ಶಿಟ್ ಖರೀದಿಸಿದರು. ಆ ಬೆಡ್ ಶಿಟ್ ನನ್ನ ಅಂಗಡಿಯಲ್ಲಿ ಒಂದು ಕಡೆ ಇಟ್ಟುಕೊಳ್ಳಲು ಹೇಳಿ ಸಂತೆಗೆ ಹೋದರು. ಸ್ವಲ್ಪ ಹೊತ್ತು ಬಿಟ್ಟು ಇನ್ನು ಇಬ್ಬರ ಜೊತೆಗೆ ಬಂದು ಇನ್ನು ಎರಡು ಚಿಕ್ಕ ಕೈಚೀಲ ಇಟ್ಟರು. ಆ ಎರಡು ಚೀಲದಲ್ಲಿ ಏನಿತ್ತು ಗೊತ್ತಿಲ್ಲ. ಅದರಿಂದಲೇ ಸ್ಪೋಟವಾಗಿದೆ. ಇವರು ಯಾರು ಕೂಡ ನನಗೆ ಮೊದಲು ಪರಿಚಯ ಇರಲಿಲ್ಲ ಎಂದು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು;
ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಮಾತನಾಡಿದ್ದು, ನಾವು ಅಲ್ಲಿ ನಿಂತಿದ್ದೆವು. ಶಿರಾಳಕೊಪ್ಪ ಬಸ್ ನಿಲ್ದಾಣದ ಬಳಿ ಜೋರಾದ ಶಬ್ಧ ಬಂತು. ಶಬ್ಧ ಬಂದ ಜಾಗದಲ್ಲಿ ಸ್ಟವ್ ಮೇಲೆ ಹಾರಿತ್ತು. ನಾವು ಓಡಿ ಹೋಗಿ ನೋಡಿದೆವು. ಆಗ ಬೆಡ್ ಶೀಟ್ ಮಾರುವವರಿಗೆ ಗಾಯಗಳಾಗಿತ್ತು. ಅವರಿಗೆ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಜೋರಾಗಿ ಶಬ್ಧ ಬಂದಾಗ ಎಲ್ಲರೂ ಭಯಭೀತರಾಗಿದ್ದರು. ಸ್ಫೋಟಗೊಂಡ ಜಾಗದಲ್ಲಿ ಜನರು ಸೇರಿದ್ದರು. ಯಾವುದೇ ಹೆಚ್ಚು ಅನಾಹುತ ನಡೆದಿಲ್ಲ. ಅಷ್ಟರಲ್ಲಿ ಪೊಲೀಸರು ಬಂದು ಅಲ್ಲಿದ್ದ ಜನರನ್ನು ಕಳುಹಿಸಿದರು ಎಂದು ಹೇಳಿದ್ದಾರೆ.
– ಕೃಪೆ- tv9