ಅಖಿಲ ಭಾರತ ಮಂಡ್ಯ ಸಾಹಿತ್ಯ ಸಮ್ಮೇಳನ- ಬಿ.ಎಂ.ಹನೀಫ್ ಸರಿಯಾಗೇ ಹೇಳಿದ್ದಾರೆ!
ಮಂಡ್ಯದಲ್ಲಿ ನಡೆಯಬೇಕಿರುವ ಅಭಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಸಾಪ ರೂ.30 ಕೋಟಿ ಅನುದಾನ ಬಯಸಿತ್ತು. ಆದರೆ ಸಿದ್ಧರಾಮಯ್ಯನವರು ಬಜೆಟ್ ನಲ್ಲಿ ಯಾವುದೇ ಅನುದಾನ ಪ್ರಕಟಿಸಿಲ್ಲ.
ಸರಕಾರದ ನೆರವಿನಿಂದಲೇ ಸಾಹಿತ್ಯ ಸಮ್ಮೇಳನ ನಡೆಯಬೇಕೆ? ಹಿಂದಿನ ಸಮ್ಮೇಳನದಲ್ಲಿ ನಡೆಸಿದ ದುಂದು ವೆಚ್ಚ ನಮ್ಮ ಕಣ್ಣೆದುರಿಗೇ ಇದೆ. ಅದಕ್ಕೆ ಕಾರಣ ಸರಕಾರಿ ದುಡ್ಡು. ರಾಜಕಾರಣಿಗಳನ್ನು ವೇದಿಕೆಯ ಕೆಳಗೆ ಕೂರಿಸಿ ಕನ್ನಡಿಗರಿಂದಲೇ ಚಂದಾ ಎತ್ತಿ ಸರಳ ಸಾಹಿತ್ಯ ಸಮ್ಮೇಳನ ನಡೆಸಲು ಸಾಧ್ಯ ಇಲ್ಲವೆ?
ಸರಕಾರದ ಬಳಿ ದುಡ್ಡಿಲ್ಲ. ಈ ಸಲ ಸರಕಾರ 1 ಲಕ್ಷ ಕೋಟಿ ರೂಪಾಯಿ ಸಾಲ ಮಾಡಲು ಹೊರಟಿದೆ. ಈ ಸಲದ ಬಜೆಟ್ ನಲ್ಲಿ ಬಹುತೇಕ ಯೋಜನೆಗಳು PPP (public private participation) ಮಾದರಿಯದ್ದು. ಕನ್ನಡ ಸಾಹಿತ್ಯ ಸಮ್ಮೇಳನವೂ ಹಾಗೆಯೇ ಏಕೆ ನಡೆಯಬಾರದು? ಕಸಾಪ ಪದಾಧಿಕಾರಿಗಳು 50% ಖರ್ಚು ವಹಿಸಿಕೊಂಡರೆ ಸಮ್ಮೇಳನ ಯಶಸ್ವಿಯಾಗಿ ನಡೆಯಬಹುದು.
ಮಂಡ್ಯದ ಕನ್ನಡಿಗರು ಯೋಚಿಸಲಿ.
– ಬಿ.ಎಂ.ಹನೀಫ್